ಮೈಸೂರಲ್ಲಿ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳು ಆರಂಭ
ಮೈಸೂರು

ಮೈಸೂರಲ್ಲಿ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳು ಆರಂಭ

May 26, 2019

ಮೈಸೂರು: ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮ ಕಾತಿಗಾಗಿ ಮೈಸೂರಲ್ಲಿ ಎರಡು ದಿನಗಳ ಸ್ಪರ್ಧಾತ್ಮಕ ಪರೀಕ್ಷೆ ಗಳು ಆರಂಭವಾಗಿವೆ.

ಶಿಕ್ಷಣ ಇಲಾಖೆಯಿಂದ ಆಯೋಜಿಸಿರುವ ಸ್ಪರ್ಧಾ ತ್ಮಕ ಪರೀಕ್ಷೆಗಳು ಮೈಸೂರಿನ ನಿರ್ಮಲ ಪ್ರೌಢಶಾಲೆ, ಚಿನ್ಮಯ ಪದವಿ ಪೂರ್ವ ಕಾಲೇಜು, ಮರಿಮಲ್ಲಪ್ಪ ಪಿಯು ಕಾಲೇಜು, ಅವಿಲಾ ಕಾನ್ವೆಂಟ್, ವಿಜಯ ವಿಠಲ ಶಿಕ್ಷಣ ಸಂಸ್ಥೆ, ಸೇಂಟ್ ಮೇರಿಸ್ ಪ್ರೌಢಶಾಲೆ, ನಟರಾಜ ಪ್ರಥಮ ದರ್ಜೆ ಕಾಲೇಜು, ಜೆಎಸ್‍ಎಸ್ ಪ್ರೌಢಶಾಲೆ, ಮಹಾರಾಜ, ಸದ್ವಿದ್ಯಾ, ಮಹಾರಾಣಿ, ಗೋಪಾಲಸ್ವಾಮಿ ಕಾಲೇಜು ಕೇಂದ್ರಗಳಲ್ಲಿ ನಡೆಯುತ್ತಿವೆ. ಮೊದಲ ದಿನವಾದ ಇಂದು ಬೆಳಿಗ್ಗೆ 10.30ರಿಂದ ಮಧ್ಯಾಹ್ನ 1 ಗಂಟೆವರೆಗೆ ಸಾಮಾನ್ಯ ಜ್ಞಾನ ವಿಷಯದ ಪರೀಕ್ಷೆ ನಡೆದಿದ್ದು, 3,096 ಮಂದಿ ಅಭ್ಯರ್ಥಿಗಳು ಹಾಜರಾಗಿದ್ದರು. ಮಧ್ಯಾಹ್ನ 2.30ರಿಂದ ಸಂಜೆ 5.30 ಗಂಟೆವರೆಗೆ ನಡೆದ ಆಂಗ್ಲ ವಿಷಯದ ಪರೀಕ್ಷೆಗೆ 475 ಮಂದಿ ಹಾಜರಾಗಿದ್ದರು.

ನಾಳೆ (ಮೇ 26) ಬೆಳಿಗ್ಗೆ ಗಣಿತ, ವಿಜ್ಞಾನ ಮತ್ತು ಸಮಾಜಶಾಸ್ತ್ರ ವಿಷಯದ ಪರೀಕ್ಷೆಗೆ 3,096 ಮಂದಿ ಅಭ್ಯರ್ಥಿಗಳು ಹಾಜರಾಗುವರು. ಒಟ್ಟಾರೆ ಎಲ್ಲಾ ವಿಷಯ ಗಳಲ್ಲಿ 3,437 ಮಂದಿ ಸ್ಪರ್ಧಾತ್ಮಕ ಪರೀಕ್ಷೆ ಬರೆಯಲಿದ್ದಾರೆ. ಸಾರ್ವಜನಿಕ ಶಿಕ್ಷಣ ಉಪನಿರ್ದೇಶಕ ಪಾಂಡುರಂಗ ಅವರು ಇಂದು ಮರಿಮಲ್ಲಪ್ಪ, ಕಾವೇರಿ, ವಿಜಯ ವಿಠಲ ಮತ್ತು ಚಿನ್ಮಯ ವಿದ್ಯಾ ಸಂಸ್ಥೆ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿ ಸಿದ್ಧತೆಯ ಮೇಲ್ವಿಚಾರಣೆ ನಡೆಸಿದರು. ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಹಾಗೂ ನಾಳೆ (ಮೇ 26) ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಕಮೀಷ್ನರ್ ಕೆ.ಟಿ.ಬಾಲಕೃಷ್ಣ ಆದೇಶ ಹೊರಡಿಸಿದ್ದಾರೆ.

Translate »