ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ
ಮೈಸೂರು

ಸ್ಪರ್ಧಾತ್ಮಕ ಪರೀಕ್ಷೆ: ನಿಷೇಧಾಜ್ಞೆ ಜಾರಿ

May 25, 2019

ಮೈಸೂರು: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ 2019ನೇ ಸಾಲಿನ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಗಳು ಮೇ 25 ಮತ್ತು 26ರಂದು ವಿ.ವಿ. ಮೊಹಲ್ಲಾ ದಲ್ಲಿರುವ ನಿರ್ಮಲಾ ಕಾನ್ವೆಂಟ್ ಪ್ರೌಢ ಶಾಲೆ, ಜಯಲಕ್ಷ್ಮಿಪುರಂನಲ್ಲಿರುವ ಚಿನ್ಮಯಿ ಪದವಿ ಪೂರ್ವ ಕಾಲೇಜು, ಸೀತಾ ವಿಲಾಸ ರಸ್ತೆಯ ಮರಿಮಲ್ಲಪ್ಪ ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ದೇವರಾಜ ಮೊಹಲ್ಲಾದ ಅವಿಲಾ ಕಾನ್ವೆಂಟ್, ಸರಸ್ವತಿ ಪುರಂನಲ್ಲಿರುವ ವಿಜಯ ವಿಠಲ ಪ್ರೌಢ ಶಾಲೆ, ಕುವೆಂಪುನಗರದಲ್ಲಿರುವ ಕಾವೇರಿ ಶಿಕ್ಷಣ ಸಂಸ್ಥೆ, ಚಾಮುಂಡಿ ಪುರಂ ಸೇಂಟ್ ಮೇರಿಸ್ ಪ್ರೌಢಶಾಲೆ, ಶಂಕರ ಮಠ ರಸ್ತೆಯಲ್ಲಿರುವ ನಟರಾಜ ಮಹಿಳಾ ಪ್ರಥಮ ದರ್ಜೆ ಕಾಲೇಜು, ಲಕ್ಷೀ ಪುರಂ ಜೆಎಸ್‍ಎಸ್ ಪ್ರೌಢಶಾಲೆ, ಜೆ.ಎಲ್‍ಬಿ ರಸ್ತೆ ಯಲ್ಲಿರುವ ಮಹಾರಾಜ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ ವಿಭಾಗ), ಸದ್ವಿದ್ಯಾ ಪ್ರೌಢಶಾಲೆ, ಮಹಾರಾಣಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲೆ), ನಂಜುಮಳಿಗೆಯ ಗೋಪಾಲಸ್ವಾಮಿ ಪದವಿ ಪೂರ್ವ ಕಾಲೇಜು ಮತ್ತು ಸರಸ್ವತಿಪುರಂ ಜೆಎಸ್‍ಎಸ್ ಪ್ರೌq sÀಶಾಲೆಗಳಲ್ಲಿ ನಡೆಯಲಿದೆ. ಪರೀಕ್ಷೆ ನಡೆ ಯುವ 15 ಕೇಂದ್ರಗಳ 200 ಮೀ. ವ್ಯಾಪ್ತಿ ಪ್ರದೇಶದ ಸುತ್ತಲೂ ಮೇ 25 ಮತ್ತು 26ರಂದು ಬೆಳಿಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಕಲಂ 35 ಕರ್ನಾಟಕ ಪೊಲೀಸ್ ಕಾಯ್ದೆ ರೀತಿಯ ನಿಷೇ ಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ ಆದೇಶ ಹೊರಡಿಸಿದ್ದಾರೆ. ಈ ಪ್ರದೇಶದಲ್ಲಿ ಪರೀಕ್ಷಾ ಸಿಬ್ಬಂದಿ, ಪರೀ ಕ್ಷಾರ್ಥಿಗಳನ್ನು ಹೊರತುಪಡಿಸಿ ಅನಧಿಕೃತ ವ್ಯಕ್ತಿಗಳು ಸಂಚರಿಸಬಾರದು, ಯಾರೂ ಆಕ್ಷೇಪಾರ್ಹ ವಸ್ತುಗಳನ್ನು ಒಯ್ಯ ಬಾರದು ಮತ್ತು ಪರೀಕ್ಷಾ ಕೇಂದ್ರ ಬಳಿ ಇರುವ ಜೆರಾಕ್ಸ್ ಅಂಗಡಿಗಳನ್ನು ತೆರೆಯ ಬಾರದು ಎಂದು ತಿಳಿಸಿದ್ದಾರೆ.

Translate »