ಕೆವಿಎಸ್ ಸಾಧನೆ ಅವಿಸ್ಮರಣೀಯ: ಜಿಟಿಡಿ
ಮಂಡ್ಯ

ಕೆವಿಎಸ್ ಸಾಧನೆ ಅವಿಸ್ಮರಣೀಯ: ಜಿಟಿಡಿ

July 22, 2018

ಮಂಡ್ಯ: ನಿತ್ಯ ಸಚಿವರೆಂದು ಬಿರುದು ಪಡೆದುಕೊಂಡಿರುವ ಕೆ.ವಿ. ಶಂಕರೇಗೌಡರ ಸಾಧನೆ ಅವಿಸ್ಮರಣೀಯ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.

ನಗರದ ಕರ್ನಾಟಕ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ವಿ.ಶಂಕರೇಗೌಡ ಶತಮಾನೋತ್ಸವ ಭವನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕೆ.ವಿ.ಶಂಕರ ಗೌಡರ ಆದರ್ಶ, ಹೆಸರನ್ನು ಉಳಿಸುವ ನಿಟ್ಟಿನಲ್ಲಿ ಕರ್ನಾಟಕ ಸಂಘ ಕೆಲಸ ಮಾಡ ಲಿದೆ ಎಂಬ ನಂಬಿಕೆ ನನಗಿದೆ. ಅವರ ಹೆಸರಿನಲ್ಲಿ ಭವನ ನಿರ್ಮಾಣ ಮಾಡಿ ರುವುದು ಶ್ಲಾಘನೀಯ.

ಕರ್ನಾಟಕ ಸಂಘದ ವತಿಯಿಂದ ಅಭಿವೃದ್ಧಿ ಕಾರ್ಯಗಳಿಗಾಗಿ ಇಡಲಾಗಿರುವ ಬೇಡಿಕೆ ಕುರಿತಂತೆ ಸರ್ಕಾ ರದ ಮಟ್ಟದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇನೆ ಎಂದು ತಿಳಿಸಿದರು.

ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರಿಂದ ನಿತ್ಯ ಸಚಿವ ಎಂದು ಕರೆಸಿಕೊಳ್ಳುವ ಮೂಲಕ ರಾಜ್ಯದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಕೆ.ವಿ. ಶಂಕರೇಗೌಡರನ್ನು ಜಿಲ್ಲೆಯ ಜನತೆ ಕೇವಲ ಒಂದು ಬಾರಿ ಮಾತ್ರ ವಿಧಾನಸಭೆಗೆ ಆಯ್ಕೆ ಮಾಡಿ ಕಳುಹಿಸಿಕೊಟ್ಟಿದ್ದೇವು. ಇನ್ನೂ ಹೆಚ್ಚಿನ ಅವಧಿಗೆ ವಿಧಾನ ಸಭೆಗೆ ಆಯ್ಕೆ ಮಾಡಿ ಕಳುಹಿಸಿದ್ದಲ್ಲಿ ಜಿಲ್ಲೆಯ ಚಿತ್ರಣವೇ ಬದಲಾಗುತ್ತಿತ್ತು ಎಂದರು.

ಸಮಾರಂಭದಲ್ಲಿ ಸಣ್ಣ ನೀರಾವರಿ ಸಚಿವ ಪುಟ್ಟರಾಜು, ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಎನ್. ಅಪ್ಪಾಜಿಗೌಡ, ಕೆ.ಸಿ. ನಾರಾಯಣಗೌಡ, ಡಾ. ಕೆ.ಅನ್ನ ದಾನಿ, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶಗೌಡ ಹಾಗೂ ಸಂಘದ ಎಲ್ಲಾ ನಿರ್ದೇಶಕರು, ಪದಾಧಿಕಾರಿಗಳಿದ್ದರು.

Translate »