ಸುತ್ತೂರು ಜೆಎಸ್‍ಎಸ್ ಹಿರಿಯ ಪ್ರಾಥಮಿಕ ಶಾಲೆಗೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ
ಮೈಸೂರು

ಸುತ್ತೂರು ಜೆಎಸ್‍ಎಸ್ ಹಿರಿಯ ಪ್ರಾಥಮಿಕ ಶಾಲೆಗೆ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿ

July 22, 2018

ಸುತ್ತೂರು:  ಸುತ್ತೂರು ಜೆಎಸ್‍ಎಸ್ ಶಾಲೆಯಲ್ಲಿ ಬಿಳಿಗೆರೆ ಹೋಬಳಿ ಮಟ್ಟದ ಕ್ರೀಡಾಕೂಟವು ನಡೆಯಿತು. ಕ್ರೀಡಾಕೂಟದಲ್ಲಿ ಜೆಎಸ್‍ಎಸ್ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 50 ಬಾಲಕಿಯರು, 50 ಬಾಲಕರು ಆಟ ಮೇಲಾಟಗಳಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ.

ಬಾಲಕರ ವಿಭಾಗದಲ್ಲಿ ಅಶೋಕ ಪ್ರಭುಗೌಡ 7ನೇ ‘ಸಿ’-400 ಮೀ, 600 ಮೀ.,- ಪ್ರಥಮ, ರಾಹುಲ್ ಮೆಹತೊ 7ನೇ ‘ಬಿ’- ತಟ್ಟೆ ಎಸೆತ, ಗುಂಡು ಎಸೆತ, ಉದ್ದ ಜಿಗಿತ-ಪ್ರಥಮ, ಅಶೊಕ ಪ್ರಭುಗೌಡ ಮತ್ತು ತಂಡ 4ಘಿ100 ಮೀ ರಿಲೇ -ಪ್ರಥಮ ಸ್ಥಾನ ಗಳಿಸಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ಲಿಂಗ್‍ತೊಯ್ 6ನೇ ‘ಬಿ’ 100 ಮೀಟರ್ -ಪ್ರಥಮ, ಲೇಖನ 7ನೇ ‘ಎ’-400 ಮೀಟರ್ – ಪ್ರಥಮ. ಮಾನಿನಿ-7ನೇ‘ಇ’ 600 ಮೀಟರ್-ದ್ವಿತೀಯ, ಇಬಾಲಿಷಾ 7ನೇ ‘ಬಿ’ ತಟ್ಟೆ ಎಸೆತ-ತೃತೀಯ, ಎತ್ತರ ಜಿಗಿತ – ದ್ವಿತೀಯ ಸ್ಥಾನ.

ಮೋನಿಕ 7ನೇ ‘ಬಿ’ – ಗುಂಡು ಎಸೆತ-ಪ್ರಥಮ ಹಾಗೂ ಲಿಂಗ್‍ತೊಯ್ ಮತ್ತು ತಂಡ 4ಘಿ100 ಮೀಟರ್ ರಿಲೇ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕರ ವಿಭಾಗದಲ್ಲಿ ರಾಹುಲ್‍ಮೆಹತೊ 7ನೇ ‘ಬಿ’ ವೈಯಕ್ತಿಕ ಚಾಂಪಿಯನ್‍ಶಿಪ್ ಪಡೆದುಕೊಂಡಿದ್ದಾನೆ.
ಗುಂಪು ಆಟಗಳಲ್ಲಿ ಬಾಲಕರ ವಿಭಾಗದಲ್ಲಿ ಥ್ರೋಬಾಲ್ ಪ್ರಥಮ, ಖೋಖೋ ಪ್ರಥಮ, ಕಬಡ್ಡಿ ಪ್ರಥಮ ಹಾಗೂ ಬಾಲಕಿಯರ ವಿಭಾಗದಲ್ಲಿ ಖೋಖೋ ಪ್ರಥಮ, ವಾಲಿಬಾಲ್ ಪ್ರಥಮ, ಕಬಡ್ಡಿ ಪ್ರಥಮ ಹಾಗೂ ಥ್ರೋಬಾಲ್ ಪ್ರಥಮ ಸ್ಥಾನ ಪಡೆದು ತಾಲ್ಲೂಕು ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಸಂಸ್ಥೆಯ ಆಡಳಿತಾಧಿಕಾರಿಗಳಾದ ಶ್ರೀ ಎಸ್.ಪಿ. ಉದಯಶಂಕರ್, ಸಂಸ್ಥೆಯ ಮುಖ್ಯಸ್ಥರು, ಮುಖ್ಯೋಪಾಧ್ಯಾಯರು ಸಮಗ್ರ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕರನ್ನು ಅಭಿನಂದಿಸಿದ್ದಾರೆ.

Translate »