ಅರಸೀಕೆರೆ: ನೂತನ ಬಸ್ ನಿಲ್ದಾಣ ನಿರ್ಮಾಣ
ಹಾಸನ

ಅರಸೀಕೆರೆ: ನೂತನ ಬಸ್ ನಿಲ್ದಾಣ ನಿರ್ಮಾಣ

July 2, 2018

ಅರಸೀಕೆರೆ: ಗ್ರಾಮೀಣ ಮತ್ತು ಎಕ್ಸ್‍ಪ್ರೆಸ್ ಬಸ್ ನಿಲುಗಡೆಗೆ ನಿಲ್ದಾಣ ಅವ ಶ್ಯಕವಾಗಿದ್ದು, ತಾಂತ್ರಿಕ ಅನುಮೋದನೆ ಯೊಂದಿಗೆ ಶೀಘ್ರವೇ ನೂತನ ಬಸ್ ನಿಲ್ದಾಣ ನಿರ್ಮಿಸಿ, ಹಾಲಿ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಭರವಸೆ ನೀಡಿದರು.

ಶಾಸಕ ಕೆ.ಎಂ.ಶಿವಲಿಂಗೇಗೌಡರ ಕನಸಿನ ಕೂಸಾದ ನೂತನ ಬಸ್ ನಿಲ್ದಾಣ ನಿರ್ಮಾಣ ಮತ್ತು ಅಭಿವೃದ್ಧಿ ವಿಚಾರವಾಗಿ ನಗರಕ್ಕೆ ಇಂದು ಸಂಜೆ ಆಗಮಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಸ್ಥಳೀಯ ಬಸ್ ಡಿಪೋ ನಿರ್ಮಾಣ ವಾಗಿ 50 ವರ್ಷವಾಗಿದ್ದು, ಈ ಡಿಪೋ ನವೀಕರಣ ಮತ್ತು ಕಾಂಕ್ರಿಟ್ ರಸ್ತೆ ನಿರ್ಮಾಣ ಕ್ಕಾಗಿ 2 ಕೋಟಿ ರೂ. ಬಿಡುಗಡೆ ಮಾಡ ಲಾಗುವುದು. 12ಕ್ಕೂ ಹೆಚ್ಚು ವರ್ಷಗಳ ಸೇವೆಯನ್ನು ಪೂರೈಸಿರುವ ಬಸ್‍ಗಳ ನವೀಕರಣ ಅಥವಾ ಇಂಜಿನ್ ಬದಲಾವಣೆ ಮಾಡುವ ಬಗ್ಗೆ ಅಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದೇನೆ ಎಂದರು.

ತಾಲೂಕಿನಾದ್ಯಂತ ಸಂಚರಿಸುವ ಬಸ್‍ಗಳ ಕಳಪೆ ನಿರ್ವಹಣೆ ಬಗ್ಗೆ ಮಾಹಿತಿ ಬಂದಿದ್ದು, ಇಲ್ಲಿಯ ಬಸ್‍ಗಳ ವಾಸ್ತವಾಂಶ ವರದಿ ಮೇರೆಗೆ ಬಸ್‍ಗಳನ್ನು ವಿಲೇವಾರಿ ಮಾಡಿ ಪರ್ಯಾಯವಾಗಿ ಉತ್ತಮ ಗುಣ ಮಟ್ಟದ ಬಸ್‍ಗಳನ್ನು ಸಂಚಾರಕ್ಕೆ ಬಿಡಲು ಅದೇಶಿಸಿದ್ದೇನೆ. ಡಿಪೋದಲ್ಲಿ ವಿದ್ಯುತ್ ಸರಬರಾಜಿಗಾಗಿ ಪ್ರತ್ಯೇಕ ಸೋಲಾರ್ ಪ್ಲಾಂಟ್ ಸ್ಥಾಪಿಸುವುದರ ಮೂಲಕ 2 ಮೆಗಾ ವ್ಯಾಟ್ಸ್ ವಿದ್ಯುತ್ ತಯಾರಿಸಲು ಚಿಂತಿಸ ಲಾಗಿದೆ ಎಂದ ಸಚಿವರು, ತಾಲೂಕಿನ ಬಾಣಾವರ ಬಸ್ ನಿಲ್ದಾಣ ಅಭಿವೃದ್ಧಿ ಮತ್ತು ವಾಣಿಜ್ಯ ಸಂಕೀರ್ಣ ನಿರ್ಮಾಣಕ್ಕಾಗಿ ಒಂದು ಕೋಟಿ ರೂ.ಬಿಡುಗಡೆ ಮಾಡಲಾಗು ವುದು. ಸ್ಥಳೀಯ ಡಿಪೋದಲ್ಲಿ ತಂಗುವ ನೌಕರರಿಗೆ ಸೂಕ್ತ ವಸತಿ ವ್ಯವಸ್ಥೆ ಇಲ್ಲದಿರು ವುದು ಕಂಡು ಬಂದಿದ್ದು, ಆ ನಿಟ್ಟಿನಲ್ಲಿ ಜು.5ರ ನಂತರ ವಸತಿ ನಿರ್ಮಾಣ ಮತ್ತು ಮೂಲ ಸೌಲಭ್ಯಗಳ ನಿರ್ಮಾಣಕ್ಕಾಗಿ ಹಣ ಬಿಡುಗಡೆ ಮಾಡಲಾಗುವುದು. ನಗರದಲ್ಲಿ ಜನದಟ್ಟಣೆ ಮತ್ತು ವಾಹನಗಳ ದಟ್ಟಣೆ ಯಿದ್ದು, ಇಂದಿನ ಆಗು ಹೋಗುಗಳ ಬಗ್ಗೆ ಪೂರಕವಾಗಿ ಹಾಲಿ ಇರುವ ಬಸ್ ನಿಲ್ದಾಣವನ್ನು ಇದೇ ನಿಲ್ದಾಣದ ಪಕ್ಕದಲ್ಲಿ ರುವ ಪಶು ಸಂಗೋಪನೆ ಇಲಾಖೆಯ ಆಸ್ಪತ್ರೆ ಸ್ಥಳವನ್ನು ಸರ್ಕಾರದಿಂದ ಸ್ವಾಧೀನ ಪಡಿಸಿಕೊಂಡು ನಿಲ್ದಾಣವನ್ನು ವಿಸ್ತರಿಸಿ ಗ್ರಾಮೀಣ ಬಸ್ ನಿಲ್ದಾಣವನ್ನಾಗಿ ಅಭಿವೃದ್ಧಿ ಪಡಿಸಲಾಗುವುದು. ಈಗಾಗಲೇ ಸ್ಥಳ ಪರಿಶೀಲನೆ ಮಾಡಿಕೊಂಡು ಬಂದಿರುವ ಕಾಟನ್ ಸೊಸೈಟಿ ಸ್ವಾಧೀನದ ಸುಮಾರು 2.5 ಎಕರೆ ಜಾಗದಲ್ಲಿ ಎಕ್ಸ್‍ಪ್ರೆಸ್ ಬಸ್‍ಗಳ ನಿಲ್ದಾಣವನ್ನು ನಿರ್ಮಾಣ ಮಾಡಲಾಗು ವುದು. ತಾಲೂಕಿನಲ್ಲೂ ಹೆಣ್ಣು ಮಕ್ಕಳಿ ಗಾಗಿ ವಿಶೇಷ ಬಸ್‍ಗಳನ್ನು ಸಂಚರಿಸಲು ಅನುವು ಮಾಡಿಕೊಡುವಂತೆ ಅಧಿಕಾರಿ ಗಳಿಗೆ ಆದೇಶಿಸಲಾಗಿದೆ ಎಂದರು.

ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತ ನಾಡಿ, ತಾವು ಅಧಿಕಾರಕ್ಕೆ ಬಂದು 10 ವರ್ಷವಾದರೂ ಇಲ್ಲಿಯ ಬಸ್ ನಿಲ್ದಾಣ ವನ್ನು ಅಭಿವೃದ್ಧಿ ಪಡಿಸಲು ಹಾಗೂ ಸ್ಥಳಾಂ ತರಿಸುವುದಕ್ಕೆ ಅನೇಕ ಬಾರಿ ಪ್ರಯತ್ನ ಪಟ್ಟಿದ್ದೇನೆ. ಆದರೆ ಮಾಜಿ ಶಾಸಕರ ಹೇಳಿಕೆಗಳ ಮೇಲೆ ಈ ಪ್ರಕ್ರಿಯೆಯು ಮಂದಗತಿಯಲ್ಲಿ ಸಾಗಿತ್ತು. ಹಾಲಿ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರ ಅಧಿಕಾರಾವಧಿ ಯಲ್ಲಿ ಬಸ್ ನಿಲ್ದಾಣ ನವೀಕರಣ ಮತ್ತು ಸ್ಥಳಾಂತರ ಕನಸು ನನಸಾಗುವ ಸಮಯ ಹತ್ತಿರ ಬಂದಿದೆ. ಹಾಲಿ ಬಸ್ ನಿಲ್ದಾಣವನ್ನು ಉಳಿಸಿಕೊಂಡು ರೈಲ್ವೇ ಮಾರ್ಗಗಳಿಂದ ನಗರಕ್ಕೆ ಆಗಮಿಸುವ ಪ್ರಯಾಣ ಕರಿಗೆ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ ಯಾಗದಂತೆ ತಾಂತ್ರಿಕ ಅನುಮೋದನೆಗಳ ಮೂಲಕ ನಿರ್ಮಾಣ ಕಾರ್ಯ ಆರಂಭಿಸ ಲಾಗುವುದು. ಈಗಾಗಲೇ ಬಸ್ ಡಿಪೋಗೆ ಸೋಲಾರ್ ಪ್ಲಾಂಟ್ ಸ್ಥಾಪಿಸುವ ಮೂಲಕ ನಿಗಮಕ್ಕೆ ಆಗುತ್ತಿರುವ ವಿದ್ಯುತ್ ಅರ್ಥಿಕ ಹೊರೆಯನ್ನು ಕಡಿಮೆ ಮಾಡಿಕೊಳ್ಳ ಲಾಗುವುದು ಎಂದು ಸಚಿವರು ಹೇಳಿರು ವುದು ಶ್ಲಾಘನೀಯವಾಗಿದೆ ಎಂದರು. ಈ ವೇಳೆ ಚಿಕ್ಕಮಗಳೂರು ವಿಭಾಗದ ಡಿ.ಸಿ ಅನಿಲ್‍ಕುಮಾರ್, ಎಎಸ್‍ಓ ಗೋಪಾಲ್, ಡಿಎಂಇ ನಾಗರಾಜಮೂರ್ತಿ, ಡಿಟಿಓ ಅರುಣ್‍ಕುಮಾರ್, ಉಪ ತಹಶೀಲ್ದಾರ್ ಫಾಲಾ ಕ್ಷಯ್ಯ, ಡಿಪೋ ವ್ಯವಸ್ಥಾಪಕ ಕುಮಾರ್, ಜಿಪಂ ಸದಸ್ಯ ಬಿಳೀಚೌಡಯ್ಯ, ನಗರಸಭಾ ಅಧ್ಯಕ್ಷ ಶಮೀವುಲ್ಲಾ, ಮುಖಂಡರಾದ ಗಂಗಾಧರ್, ಧರ್ಮೇಶ್, ಗಿರೀಶ್, ಧರ್ಮ ಶೇಖರ್, ಸುಬ್ರಹ್ಮಣ್ಯ ಬಾಬು ಇನ್ನಿತರರಿದ್ದರು.

Translate »