ಜಿಎಸ್‍ಟಿಯಿಂದ ರಾಷ್ಟ್ರದ ಆರ್ಥಿಕ ಸ್ಥಿತಿ ಸುಧಾರಣೆ
ಕೊಡಗು

ಜಿಎಸ್‍ಟಿಯಿಂದ ರಾಷ್ಟ್ರದ ಆರ್ಥಿಕ ಸ್ಥಿತಿ ಸುಧಾರಣೆ

July 2, 2018

ಮಡಿಕೇರಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಗೆ ಬಂದು ಒಂದು ವರ್ಷ ಆಗಿದ್ದು, ಈ ಒಂದು ವರ್ಷದಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಸಾಕಷ್ಟು ಬದಲಾವಣೆ ತಂದಿದೆ ಎಂದು ಸರಕು ಮತ್ತು ಸೇವಾ ತೆರಿಗೆ ವಿಭಾಗದ ಜಂಟಿ ಆಯುಕ್ತ ರವಿಕಿರಣ ಅವರು ಹೇಳಿದ್ದಾರೆ.

ನಗರದ ಖಾಸಗಿ ಹೋಟೆಲ್‍ನಲ್ಲಿ ಸರಕು ಮತ್ತು ಸೇವಾ ತೆರಿಗೆ ಸಂಬಂಧಿಸಿದಂತೆ ನಡೆದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸರಕು ಮತ್ತು ಸೇವೆ ತೆರಿಗೆ ಎಂಬುದು ವಾಣಿಜ್ಯೋದ್ಯಮಿ ಗಳು, ವ್ಯಾಪಾರಸ್ಥರು ಇತರರ ಮೇಲೆ ನಂಬಿಕೆ ಇಟ್ಟಿರುವುದಾಗಿದೆ. ಒಂದು ವರ್ಷದಲ್ಲಿ ತೆರಿಗೆ ಸಂಗ್ರಹವಾಗಿರುವುದು ದೇಶದಲ್ಲಿ ಸಾಕಷ್ಟು ಬದಲಾವಣೆ ತಂದಿರುವುದು ಹರ್ಷ ತಂದಿದೆ ಎಂದು ಅವರು ಹೇಳಿದರು.

ತೆರಿಗೆಯನ್ನು ಸಕಾಲದಲ್ಲಿ ಪಾವತಿಸಬೇಕು. ತೆರಿಗೆ ಪಾವತಿಸುವಲ್ಲಿ ವಿಳಂಬ ಮಾಡ ಬಾರದು, ತೆರಿಗೆ ಪಾವತಿಸುವಲ್ಲಿ ನುಣಿಚಿ ಕೊಳ್ಳುವಂತಾಗಬಾರದು ಎಂದು ಅವರು ಸಲಹೆ ಮಾಡಿದರು. ಸಹಾಯಕ ಆಯುಕ್ತ ರಾದ ಪಲ್ಲವಿ ಅವರು ಮಾತನಾಡಿ, ಜಿಎಸ್‍ಟಿ ಯಿಂದ ದೇಶದ ಆರ್ಥಿಕ ಪರಿಸ್ಥಿತಿ ಉತ್ತಮ ಗೊಂಡಿದೆ. ಹಲವು ತಾಂತ್ರಿಕ ಸಮಸ್ಯೆಗಳ ನಡುವೆಯೂ ತೆರಿಗೆ ಸಂಗ್ರಹ ಹೆಚ್ಚಳವಾಗ ಲಿದೆ ಎಂದು ಹೇಳಿದರು. ಜಿಎಸ್‍ಟಿ ಉಪ ಆಯುಕ್ತರಾದ ರಮೇಶ್ ಅವರು ಮಾತನಾಡಿ, ಸರಕು ಮತ್ತು ಸೇವಾ ತೆರಿಗೆ ಪಾವತಿಸಲು ಯಾರೂ ಸಹ ಹಿಂದೆ ಬೀಳಬಾರದು. ಈ ಸಂಬಂಧ ಸದ್ಯದಲ್ಲಿಯೇ ವಿಚ್ಛಕ್ಷಣ ದಳ ಆರಂಭವಾಗಲಿದೆ ಎಂದು ತಿಳಿಸಿದರು.

ಹಲವು ತಾಂತ್ರಿಕ ಅಡೆತಡೆಗಳ ನಡು ವೆಯೂ ಜಿಎಸ್‍ಟಿಯನ್ನು ಇನ್ನಷ್ಟು ಪರಿ ಣಾಮಕಾರಿಯಾಗಿ ಜಾರಿ ಮಾಡುವುದು ಅಗತ್ಯವಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಸಹಾಯಕ ಆಯುಕ್ತರಾದ ಪ್ರಧಾನ್ ಅವರು, ಜಿಎಸ್‍ಟಿ ವ್ಯಾಪ್ತಿಯಲ್ಲಿ ಬರುವವರೆಲ್ಲರೂ ತೆರಿಗೆ ಪಾವತಿಸಬೇಕು. ಯಾವುದೇ ಕಾರಣಕ್ಕೂ ಹಿಂಜರಿಯಬಾರದು ಎಂದು ಅವರು ಹೇಳಿದರು. ಜಿಲ್ಲಾ ಅಧೀಕ್ಷಕ ರಾದ ವೆಂಕಟೇಶ್ ಅವರು ಮಾತನಾಡಿ, ದೇಶದ ಅಭಿವೃದ್ಧಿಗೆ ತೆರಿಗೆಯನ್ನು ಕಡ್ಡಾಯ ವಾಗಿ ಪಾವತಿಸಬೇಕು ಎಂದರು.

ಸಂವಾದದಲ್ಲಿ ಚೇಂಬರ್ ಆಫ್ ಕಾಮರ್ಸ್‍ನ ಮಾಜಿ ಅಧ್ಯಕ್ಷ ಜಿ.ಚಿದ್ವಿಲಾಸ್ ಜಿಎಸ್‍ಟಿ ಜಾರಿಯಾದ ನಂತರ ರಾಷ್ಟ್ರದ ಆರ್ಥಿಕ ಪರಿ ಸ್ಥಿತಿ ಸುಧಾರಣೆ ಬಗ್ಗೆ ಮಾಹಿತಿ ಪಡೆದರು.

ಹೋಟೆಲ್ ಮತ್ತು ರೆಸಾರ್ಟ್ ಮಾಲೀಕರ ಸಂಘದ ಅಧ್ಯಕ್ಷ ನಾಗೇಂದ್ರಪ್ರಸಾದ್ ಹೋಟೆಲ್, ರೆಸಾರ್ಟ್‍ಗಳ ಮೇಲೆ ಹೆಚ್ಚಿನ ತೆರಿಗೆ ವಿಧಿಸಿದ್ದು, ಇದನ್ನು ಕಡಿಮೆ ಮಾಡ ಬೇಕು ಎಂದು ಒತ್ತಾಯಿಸಿದರು. ಲೆಕ್ಕ ಪರಿ ಶೋಧಕ ಅಬ್ದುಲ್ ರೆಹಮಾನ್, ಗೋಪಾಲ ಕೃಷ್ಣ, ಅಂತೋಣ , ಹೋಟೆಲ್ ಮತ್ತು ವಾಣಿಜ್ಯೋದ್ಯಮಿಗಳು ಇತರರಿದ್ದರು.

Translate »