7.5 ಕೋಟಿ ರೂ. ಜಿಎಸ್‍ಟಿ ವಂಚಿಸಿದ್ದ ಉದ್ಯಮಿ ಬಂಧನ
ಮೈಸೂರು

7.5 ಕೋಟಿ ರೂ. ಜಿಎಸ್‍ಟಿ ವಂಚಿಸಿದ್ದ ಉದ್ಯಮಿ ಬಂಧನ

July 4, 2019

ಮೈಸೂರು,ಜು.3(ಎಂಟಿವೈ)- ನಕಲಿ ಇನ್‍ವಾಯ್ಸ್ ಹಾಜರುಪಡಿಸಿ 7.5 ಕೋಟಿ ಜಿಎಸ್‍ಟಿ ವಂಚಿಸಿದ್ದ ಉದ್ಯಮಿಯೊಬ್ಬರನ್ನು ಕೇಂದ್ರ ಜಿಎಸ್‍ಟಿ ಅಧಿಕಾರಿಗಳು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೈಸೂರಿನ ಹೂಟಗಳ್ಳಿಯಲ್ಲಿ ಸ್ಪೆಟ್ರಾ ಪೈಪ್ ಕಂಪನಿ ನಡೆಸುತ್ತಿದ್ದ ಅನಿಲ್ ಮೆಹ್ರಾ ಎಂಬುವರೇ ನಕಲಿ ಇನ್‍ವಾಯ್ಸ್ ನೀಡಿ ಜಿಎಸ್‍ಟಿ ವಂಚಿಸಿ ಬಂಧನಕ್ಕೊಳಗಾದ ಉದ್ಯಮಿಯಾಗಿದ್ದಾರೆ. ಕೃಷಿ ಚಟುವಟಿಕೆಗೆ ನೀರು ಸರಬರಾಜು ಮಾಡಲು ಬಳಸುವ ಪ್ಲಾಸ್ಟಿಕ್ (ಪಿವಿಸಿ) ಪೈಪ್ ತಯಾರಿಕಾ ಸಂಸ್ಥೆ ನಡೆಸುತ್ತಿರುವ ಅನಿಲ್ ಮೆಹ್ರಾ, ತಮ್ಮ ಸಂಸ್ಥೆಗೆ 50 ಕೋಟಿ ರೂ. ಮೌಲ್ಯದ ಕಚ್ಚಾ ವಸ್ತು ತಂದಿರುವುದಾಗಿ ಸುಳ್ಳು ಹೇಳಿ ನಕಲಿ ದಾಖಲೆ ಹಾಗೂ ಇನ್ ವಾಯ್ಸ್ ಅನ್ನು ಸಲ್ಲಿಸಿದ್ದರು. ಅಲ್ಲದೆ ತೆರಿಗೆ ಪಾವತಿ ಸಿರುವುದಾಗಿ ತಿಳಿಸಿದ್ದರು. ಇದ ರಿಂದ ಮೆಹ್ರಾ ಅವರಿಗೆ ಇನ್‍ಪುಟ್ ಟ್ಯಾಕ್ಸ್ ನಲ್ಲಿ 7.5 ಕೋಟಿ ರೂ. ಕ್ರೆಡಿಟ್ ದೊರೆತಿತ್ತು.

ಕಚ್ಚಾ ವಸ್ತುವಿಗೆ ಡ್ಯೂಟಿ (ತೆರಿಗೆ) ಪಾವ ತಿಸಿದರೆ ದೊರೆತ ಕ್ರೆಡಿಟ್ ಅನ್ನು, ತಮ್ಮ ಸಂಸ್ಥೆಯಲ್ಲಿ ಉತ್ಪಾದನೆಯಾಗುವ ವಸ್ತುಗಳ ಮಾರಾಟ ಮಾಡುವಾಗ ವಿನಾಯಿತಿ ಪಡೆಯ ಬಹುದಾಗಿದೆ. ಆದರೆ ಕಚ್ಛಾ ವಸ್ತುಗಳನ್ನು ನಕಲಿ ಇನ್‍ವಾಯ್ಸ್ ಕಳಿಸಿ 7.5 ಕೋಟಿ ರೂ. ಜಿಎಸ್‍ಟಿ ವಂಚಿಸಿದ್ದರು. ಖಚಿತ ಮಾಹಿತಿ ಮೇರೆಗೆ ಕೇಂದ್ರ ಜಿಎಸ್‍ಟಿ ಸಂಸ್ಥೆಯ ಸಹಾ ಯಕ ಆಯುಕ್ತ ವೈ.ಸಿ.ಎಸ್.ಸ್ವಾಮಿ ನೇತೃತ್ವ ದಲ್ಲಿ ಅಧೀಕ್ಷಕರಾದ ಬೋಪಣ್ಣ, ಎಂ.ಜಿ. ಕೃಷ್ಣನ್, ಗುರುರಾಜ್ ಹಾಗೂ ಇನ್ನಿತರ ಸಿಬ್ಬಂದಿ ಹೂಟಗಳ್ಳಿಯಲ್ಲಿರುವ ಸ್ಪೆಕ್ಟ್ರಾ ಪೈಪ್ ಕಂಪನಿಗೆ ತೆರಳಿ ದಾಖಲೆಗಳನ್ನು ಪರಿಶೀಲಿ ಸಿದಾಗ ನಕಲಿ ದಾಖಲೆ ನೀಡಿ 7.5 ಕೋಟಿ ರೂ. ಜಿಎಸ್‍ಟಿ ವಂಚಿಸಿರುವುದು ಕಂಡು ಬಂದಿದೆ. ಕೂಲಂಕುಷವಾಗಿ ಪರಿಶೀಲಿಸಿದ ಬಳಿಕ ವಂಚನೆ ನಡೆಸಿರುವುದು ದೃಢಪಟ್ಟಿದೆ. ಕೂಡಲೇ ಉದ್ಯಮಿ ಅನಿಲ್ ಮೆಹ್ರಾ ಅವ ರನ್ನು ತಮ್ಮ ವಶಕ್ಕೆ ಪಡೆದು ಅಧಿಕಾರಿಗಳು, ಬಳಿಕ ಕಂಪನಿಯಲ್ಲಿದ್ದ ದಾಖಲೆಗಳನ್ನು ಮುಟ್ಟುಗೋಲು ಹಾಕಿಕೊಂಡರು. ವಂಚನೆ ಪ್ರಕರಣದಲ್ಲಿ ಬಂಧಿಸಲ್ಪಟ್ಟ ಮೆಹ್ರಾ ಅವರನ್ನು ಇಂದು ಬೆಳಿಗ್ಗೆ ಕೆ.ಆರ್.ಆಸ್ಪತ್ರೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಸುಮಾರು ಒಂದೂವರೆ ಗಂಟೆ ತಪಾಸಣೆ ನಡೆಸಿದ ನಂತರ ಆರೋಗ್ಯ ಉತ್ತಮವಾಗಿ ರುವುದಾಗಿ ವೈದ್ಯರು ದೃಢಪಡಿಸಿದರು. ಬಳಿಕ ಜಯದೇವ ಹೃದ್ರೋಗ ಆಸ್ಪತ್ರೆಗೆ ಕರೆತಂದು ಹೃದಯ ಸಂಬಂಧಿ ಖಾಯಿಲೆ ಇದೆಯಾ ಎಂದು ಪರೀಕ್ಷಿಸಲಾಯಿತು. ಮಧ್ಯಾಹ್ನ ಕೋರ್ಟ್‍ಗೆ ಹಾಜರುಪಡಿಸಲಾಯಿತು.

Translate »