ವಿಳಂಬವಾಗಿ ಜಿಎಸ್‍ಟಿ ಸಲ್ಲಿಸುವವರ ಮೇಲಿನ ಬಡ್ಡಿ ದರ ಶೇ.50ರಷ್ಟು ಇಳಿಸಿದ ಕೇಂದ್ರ ಸರ್ಕಾರ
ಮೈಸೂರು

ವಿಳಂಬವಾಗಿ ಜಿಎಸ್‍ಟಿ ಸಲ್ಲಿಸುವವರ ಮೇಲಿನ ಬಡ್ಡಿ ದರ ಶೇ.50ರಷ್ಟು ಇಳಿಸಿದ ಕೇಂದ್ರ ಸರ್ಕಾರ

June 13, 2020

ನವದೆಹಲಿ, ಜೂ. 12-ಜುಲೈ 2017 ಮತ್ತು ಜನವರಿ 2020ರ ನಡುವೆ ಜಿಎಸ್‍ಟಿ ತೆರಿಗೆ ಬಾಕಿಯನ್ನು ತಡವಾಗಿ ಸಲ್ಲಿಸಿದವರಿಗೆ ಯಾವುದೇ ಹೆಚ್ಚುವರಿ ದಂಡ ಶುಲ್ಕವನ್ನು ವಿಧಿಸಲಾಗುವುದಿಲ್ಲ ಮತ್ತು ಬಾಕಿ ಹಣದ ಮೇಲಿನ ಬಡ್ಡಿಯನ್ನೂ ಶೇ.50ರಷ್ಟು ಇಳಿಸ ಲಾಗಿದೆ ಎಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ಅನುಸರಣೆ ಮಾನದಂಡಗಳ ಕುರಿತು ಶುಕ್ರವಾರ ನಡೆದ ಸಭೆಯ ಬಳಿಕ ಕೇಂದ್ರ ಸರ್ಕಾರ ಪ್ರಕಟಣೆ ಹೊರಡಿಸಿದೆ. ಕೊರೊನಾ ವೈರಸ್ ಸಾಮುದಾಯಿಕವಾಗಿ ಹರಡುವು ದನ್ನು ತಡೆಗಟ್ಟುವ ಸಲುವಾಗಿ ದೇಶದಾದ್ಯಂತ ಲಾಕ್‍ಡೌನ್ ಜಾರಿಗೆ ತರಲಾಗಿದೆ. ಇಂತಹ ಸಂದರ್ಭದಲ್ಲಿ ತೆರಿಗೆಗಳನ್ನು ಹೆಚ್ಚಿಸುವ ಅಥವಾ ದಂಡ ಶುಲ್ಕ ವಿಧಿಸುವುದು ಸರಿಯಲ್ಲ. ಹೀಗಾಗಿ ಈ ಕುರಿತ ಎಲ್ಲಾ ಪ್ರಸ್ತಾಪವನ್ನೂ ಹಣಕಾಸು ಇಲಾಖೆ ತಳ್ಳಿಹಾಕಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಭೆಯ ಬಳಿಕ ತಿಳಿಸಿದ್ದಾರೆ.

ಇಂದಿನ ಜಿಎಸ್‍ಟಿ ಕೌನ್ಸಿಲ್ ಸಭೆಯಲ್ಲಿ ಜವಳಿ, ಉಡುಪುಗಳು, ರಸಗೊಬ್ಬರಗಳು ಮತ್ತು ಪಾದರಕ್ಷೆಗಳ ಮೇಲೆ ಹೆಚ್ಚುತ್ತಿರುವ ಜಿಎಸ್‍ಟಿಯನ್ನು ಮುಂದೂಡಲು ನಿರ್ಧರಿಸ ಲಾಗಿದೆ. ಏಕೆಂದರೆ “ಲಾಕ್‍ಡೌನ್ ಅನ್ನು ಈಗ ತೆರೆಯಲಾಗಿರುವ ಕಾರಣ ಇಷ್ಟು ತುರ್ತಾಗಿ ತೆರಿಗೆಯನ್ನು ಹೆಚ್ಚಿಸುವುದು ಸರಿಯಲ್ಲ” ಎಂದು ಎಲ್ಲಾ ಜಿಎಸ್‍ಟಿ ಕೌನ್ಸಿಲ್ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗುತ್ತಿದೆ.

Translate »