ದೇಶದಲ್ಲಿ ಒಂದೇ ದಿನ 10,956 ಮಂದಿಗೆ ಕೊರೊನಾ ಸೋಂಕು
ಮೈಸೂರು

ದೇಶದಲ್ಲಿ ಒಂದೇ ದಿನ 10,956 ಮಂದಿಗೆ ಕೊರೊನಾ ಸೋಂಕು

June 13, 2020

ನವದೆಹಲಿ, ಜೂ.12- ದೇಶದಲ್ಲಿ ಕೊರೊನಾ ಸ್ಫೋಟಗೊಂಡಿದ್ದು, ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ವೈರಸ್ ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2.97 ಲಕ್ಷಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಮಾಹಿತಿ ನೀಡಿದೆ.

ಲಾಕ್‍ಡೌನ್ ಸಡಿಲಗೊಳಿಸಿದ ಬೆನ್ನಲ್ಲೇ ದೇಶದಲ್ಲಿ ಸೋಂಕಿತರ ಸಂಖ್ಯೆ ದಿನ ದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ನಿನ್ನೆ ಒಂದೇ ದಿನ ಬರೋಬ್ಬರಿ 10,956 ಮಂದಿಯಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ದೇಶದಲ್ಲಿ ಸೋಂಕಿತರ ಸಂಖ್ಯೆ 297535ಕ್ಕೆ ಏರಿಕೆ ಯಾಗಿದೆ. ಅಲ್ಲದೆ, 24 ಗಂಟೆಗಳಲ್ಲಿ 396 ಮಂದಿ ಮೃತಪಟ್ಟಿದ್ದು, ಮಹಾಮಾರಿ ವೈರಸ್’ಗೆ ಬಲಿ ಯಾದವರ ಸಂಖ್ಯೆ ಕೂಡ 8498ಕ್ಕೆ ಏರಿಕೆಯಾಗಿದೆ. ಈ ನಡುವೆ 297535 ಮಂದಿ ಸೋಂಕಿತರ ಪೈಕಿ 147195 ಮಂದಿ ಸೋಂಕಿನಿಂದ ಗುಣ ಮುಖರಾಗಿದ್ದು, ಪ್ರಸ್ತುತ ದೇಶ ದಲ್ಲಿನ್ನೂ 141842 ಮಂದಿ ಸೋಂಕಿನಿಂದ ಬಳಲುತ್ತಿ ದ್ದಾರೆ. ಜಾಗತಿಕ ಮಟ್ಟದಲ್ಲಿ ಕೊರೋನಾ ಅಂಕಿಸಂಖ್ಯೆಗಳ ಮೇಲೆ ಕಣ್ಣಿಡುವ ವರ್ಲ್ಡೋಮೀಟರ್ ಲೆಕ್ಕದ ಅನ್ವಯ, ಗುರುವಾರ ಭಾರತದಲ್ಲಿ ಸೋಂಕಿ ತರ ಸಂಖ್ಯೆ 2.97 ಲಕ್ಷಕ್ಕೆ ತಲುಪುವ ಮೂಲಕ ಭಾರತದ ಜಾಗತಿಕ ಮಟ್ಟದಲ್ಲಿ ಬ್ರಿಟನ್ ಮತ್ತು ಸ್ಪೇನ್ ರಾಷ್ಟ್ರಗಳನ್ನು ಹಿಂದಿಕ್ಕಿ 6ರಿಂದ 4ನೇ ಸ್ಥಾನಕ್ಕೆ ಏರಿದೆ.

ಭಾರತದಲ್ಲಿ 2020ರ ಜ.30ಕ್ಕೆ ಮೊದಲ ಸೋಂಕು ಪತ್ತೆಯಾಗಿತ್ತು. ಆಗ ವಿಶ್ವ ಮಟ್ಟದಲ್ಲಿ 20ರ ಆಸುಪಾಸಿನ ಸ್ಥಾನ ದಲ್ಲಿದ್ದ ಭಾರತ ಮೇ.25ಕ್ಕೆ 10ನೇ ಸ್ಥಾನ ತಲುಪಿತ್ತು. ಆಗ ಸೋಂಕಿತರ ಸಂಖ್ಯೆ 1.41ಲಕ್ಷ ಇತ್ತು. ಅದಾದ ಒಂದು ತಿಂಗಳಲ್ಲಿ ಇದೀಗ 2.97 ಲಕ್ಷ ಸೋಂಕಿತ ರೊಂದಿಗೆ ದೇಶ 4ನೇ ಸ್ಥಾನಕ್ಕೆ ಏರಿದೆ. ಅಮೆರಿಕಾ. ಬ್ರೆಜಿಲ್, ರಷ್ಯಾ ಹೆಚ್ಚು ಸೋಂಕಿತರೊಂದಿಗೆ ಟಾಪ್ 3 ಸ್ಥಾನ ದಲ್ಲಿದೆ. ಇನ್ನು ಮಹಾರಾಷ್ಟ್ರದಲ್ಲಿ ಗುರು ವಾರ ದಾಖಲೆಯ 3607 ಮಂದಿಯಲ್ಲಿ ಹೊಸದಾಗಿ ಕೊರೋನಾ ಸೋಂಕು ಕಾಣಿಸಿಕೊಂಡಿದೆ.

ಈ ಮೂಲಕ ಇಲ್ಲಿ ಸೋಂಕಿತರ ಸಂಖ್ಯೆ 97,648ಕ್ಕೆ ಏರಿಕೆಯಾಗಿದೆ. ಮತ್ತೊಂದೆಡೆ, ಗುರುವಾರ ಒಂದೇ ದಿನ ವ್ಯಾಧಿಗೆ 152 ಮಂದಿ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟು ಸಾವಿನ ಸಂಖ್ಯೆ 3590ಕ್ಕೆ ಜಿಗಿದಿದೆ. ಉಳಿದಂತೆ ದೆಹಲಿಯಲ್ಲಿ 1877, ತಮಿಳು ನಾಡಿನಲ್ಲಿ 1871, ಗುಜರಾತ್ ನಲ್ಲಿ 513 ಹಾಗೂ ಉತ್ತರಪ್ರದೇಶದಲ್ಲಿ 477 ಮಂದಿಗೆ ಈ ಸೋಂಕಿಗೆ ತುತ್ತಾಗಿದ್ದಾರೆ.

Translate »