ಚಾಮರಾಜ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪ್ರದಕ್ಷಿಣೆ
ಮೈಸೂರು

ಚಾಮರಾಜ ಕ್ಷೇತ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಪ್ರದಕ್ಷಿಣೆ

July 4, 2019

ಮೈಸೂರು, ಜು.3(ಪಿಎಂ)- ಚಾಮರಾಜ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಉನ್ನತ ಶಿಕ್ಷಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಬುಧವಾರ ಸಂಚರಿಸಿ ಸಾರ್ವಜನಿಕರ ಕುಂದು -ಕೊರತೆ ಆಲಿಸಿದ್ದು, ಈ ವೇಳೆ ಕೆಆರ್‍ಎಸ್ ರಸ್ತೆಯ ಲೋಕನಾಯಕನಗರ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಜಿಲ್ಲಾಸ್ಪತ್ರೆ ಆವ ರಣದಲ್ಲಿ ನಿರ್ಮಿಸುತ್ತಿರುವ ಶವಾಗಾರ ಸ್ಥಳಾಂತರ ಮಾಡುವಂತೆ ಲೋಕನಾಯಕ ನಗರ ನಿವಾಸಿಗಳು ಆಗ್ರಹಿಸಿದರು.

ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ ಸೇರಿದಂತೆ ಅಧಿಕಾರಿಗಳೊಂ ದಿಗೆ ಬುಧವಾರ ಕ್ಷೇತ್ರದಲ್ಲಿ ಸಂಚರಿಸಿ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿ ಸಾರ್ವ ಜನಿಕರ ಅಹವಾಲು ಆಲಿಸಿದ ಸಚಿವ ಜಿ.ಟಿ.ದೇವೇಗೌಡರು, ಜಿಲ್ಲಾಸ್ಪತ್ರೆ ಕಾಮ ಗಾರಿ ಪರಿಶೀಲನೆ ನಡೆಸುತ್ತಿದ್ದ ವೇಳೆ ಲೋಕನಾಯಕನಗರದ ನಿವಾಸಿಗಳು ಶವಾಗಾರವನ್ನು ಬೇರೆಡೆ ನಿರ್ಮಿಸಲು ಕ್ರಮ ವಹಿಸುವಂತೆ ಮನವಿ ಮಾಡಿದರು.

ಜಿಲ್ಲಾಸ್ಪತ್ರೆ ನಿರ್ಮಾಣ ಸಂತಸದ ಸಂಗತಿ. ಆದರೆ ಲೋಕನಾಯಕನಗರ ಬಡಾವಣೆ ಪಕ್ಕದಲ್ಲಿ ಜಿಲ್ಲಾಸ್ಪತ್ರೆ ಕಾಂಪೌಂಡ್ ನಿರ್ಮಿ ಸಿದ್ದು, ಸದರಿ ಕಾಂಪೌಂಡ್‍ನಿಂದ 4 ಅಡಿಯ ಅಂತರದಲ್ಲಿ ಶವಾಗಾರ ಕಟ್ಟಡ ನಿರ್ಮಿಸಲಾಗುತ್ತಿದೆ. ಇದು ಶವಾಗಾರದ ಕಟ್ಟಡ ಎಂದು ಇತ್ತೀಚೆಗಷ್ಟೇ ನಮಗೆ ತಿಳಿದು ಬಂದಿತು. ಬಡಾವಣೆ ಪಕ್ಕದಲ್ಲೇ ಶವಾ ಗಾರ ನಿರ್ಮಿಸಿದರೆ ಇಲ್ಲಿನ ನಿವಾಸಿಗಳಿಗೆ ಸಮಸ್ಯೆ ಆಗಲಿದೆ. ಮಕ್ಕಳಲ್ಲಿ ಒಂದು ರೀತಿಯ ಭಯಭೀತಿ ಉಂಟಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಅಲ್ಲದೆ, ಸಾವಿಗೀಡಾದವರ ಸಂಬಂಧಿ ಕರ ರೋದನೆ ಹಾಗೂ ಜನಜಂಗುಳಿ ಗಲಾಟೆಯಿಂದ ಬಡಾವಣೆ ನಿವಾಸಿಗಳು ಕಿರಿಕಿರಿ ಅನುಭವಿಸಬೇಕಾಗುತ್ತದೆ. ವೃದ್ಧರು ಹಾಗೂ ಮಕ್ಕಳು ಇದರಿಂದ ಮತ್ತಷ್ಟು ತೊಂದರೆಗೀಡಾಗಬೇಕಾಗುತ್ತದೆ. ಹೀಗಾಗಿ ಬೇರೆ ಕಡೆಗೆ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸಚಿವರಲ್ಲಿ ನಿವಾಸಿ ಗಳು ಮನವಿ ಮಾಡಿದರು.

ಪ್ರಾಮಿಸ್ ಮಾಡಿ: ಲೋಕನಾಯಕ ನಗರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆ ಯರೇ ಆಗಮಿಸಿ ಶವಾಗಾರ ಬೇರೆಡೆಗೆ ಸ್ಥಳಾಂತರ ಮಾಡುವಂತೆ ಸಚಿವರಿಗೆ ಅಹವಾಲು ಸಲ್ಲಿಸಿದರು. ಈ ವೇಳೆ ಸಚಿವ ಜಿ.ಟಿ.ದೇವೇಗೌಡರು, ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸುತ್ತಿದ್ದಂತೆ ಸ್ಥಳ ದಲ್ಲೇ ಪ್ರಾಮಿಸ್ (ವಾಗ್ದಾನ) ಮಾಡು ವಂತೆ ನಯವಾಗಿಯೇ ಮಹಿಳೆಯರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಈಗ ನಿರ್ಮಿಸಿರುವ ಕಟ್ಟಡ ವನ್ನು ಮತ್ತೊಂದು ಕಾರ್ಯಕ್ಕೆ ಬಳಸಿ ಕೊಂಡು, ಬೇರೆಡೆ ಶವಾಗಾರದ ಕಟ್ಟಡ ನಿರ್ಮಿಸಲು ಖಂಡಿತ ಕ್ರಮ ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಕಾಮಗಾರಿ 2 ತಿಂಗಳಲ್ಲಿ ಪೂರ್ಣ: 64 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಜಿಲ್ಲಾಸ್ಪತ್ರೆ ಕಾಮಗಾರಿ ಎರಡು ತಿಂಗಳಲ್ಲಿ ಬಹುತೇಕ ಪೂರ್ಣಗೊಳ್ಳಲಿದೆ ಎಂದು ಸಚಿವರಿಗೆ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಿ. ಬಸವರಾಜು ಮಾಹಿತಿ ನೀಡಿದರು. ನಾಲ್ಕು ಅಂತಸ್ತಿನ ಸುಸಜ್ಜಿತ ಕಟ್ಟಡ ಇದಾ ಗಿದ್ದು, ಲಿಫ್ಟ್ ಸೌಲಭ್ಯ ಕೂಡ ಇರಲಿದೆ ಎಂಬಿತ್ಯಾದಿ ಮಾಹಿತಿ ನೀಡಿದರು.

ಆಸ್ಪತ್ರೆಗೆ ನೇರ ರಸ್ತೆ ಕಲ್ಪಿಸಲು ಕ್ರಮ: ಕೆಆರ್‍ಎಸ್ ರಸ್ತೆಯ ಸಾಂಕ್ರಾಮಿಕ ರೋಗ ಗಳ ಆಸ್ಪತ್ರೆ ಆವರಣಕ್ಕೆ ಹೊಂದಿ ಕೊಂಡಂತೆ ಜಿಲ್ಲಾಸ್ಪತ್ರೆ ನಿರ್ಮಾಣ ಆಗು ತ್ತಿದ್ದು, ಕೆಆರ್‍ಎಸ್ ರಸ್ತೆ ಮೂಲಕ ಜಿಲ್ಲಾ ಸ್ಪತ್ರೆಗೆ ನೇರವಾಗಿ ರಸ್ತೆ ಕಲ್ಪಿಸಲು ಆಸ್ಪತ್ರೆ ಮುಖ್ಯ ದ್ವಾರದ ಎಡಭಾಗದಲ್ಲಿನ ಖಾಲಿ ನಿವೇಶನವನ್ನು ಆಸ್ಪತ್ರೆ ಸುಪರ್ದಿಗೆ ನೀಡಲು ಕ್ರಮ ವಹಿಸುವಂತೆ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಬಗ್ಗೆ ಸಂಬಂಧಿಸಿದ ಅಧಿಕಾರಿ ಗಳಿಗೆ ಸ್ಥಳದಲ್ಲೇ ದೂರವಾಣಿ ಕರೆ ಮಾಡಿ ಮಾತನಾಡಿದ ಸಚಿವರು, ಸದರಿ ಖಾಲಿ ಜಾಗದಲ್ಲಿ ಈ ಹಿಂದೆ ಕೈಗಾರಿಕೆಯೊಂದು ಕಾರ್ಯನಿರ್ವಹಿಸುತ್ತಿತ್ತು. ಅದು ಸ್ಥಳಾಂ ತರಗೊಂಡು ಈಗ ಖಾಲಿ ನಿವೇಶನವಾಗಿ ರುವ ಹಿನ್ನೆಲೆಯಲ್ಲಿ ಅದನ್ನು ಆಸ್ಪತ್ರೆಗೆ ವಹಿಸಲು ಕ್ರಮ ಕೈಗೊಳ್ಳುವಂತೆ ಅಧಿ ಕಾರಿಗಳಿಗೆ ಸೂಚನೆ ನೀಡಿದರು.

ಮೇಯರ್ ಪುಷ್ಪಲತಾ ಜಗನ್ನಾಥ್, ನಗರಪಾಲಿಕೆ ಸದಸ್ಯರಾದ ಎಸ್‍ಬಿಎಂ ಮಂಜು, ಕೆ.ವಿ.ಶ್ರೀಧರ್, ಸುಬ್ಬಯ್ಯ, ಜಿಲ್ಲಾ ಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಶಿವಾನಂದ ಮೂರ್ತಿ, ಮುಡಾ ಆಯುಕ್ತ ಕಾಂತ ರಾಜು ಸೇರಿದಂತೆ ಮತ್ತಿತರ ಅಧಿಕಾರಿ ಗಳು ಹಾಗೂ ಸಿಬ್ಬಂದಿ ಹಾಜರಿದ್ದರು.

Translate »