ಆಷಾಢ ಶುಕ್ರವಾರಕ್ಕೆ 35 ಸಾವಿರ ಲಾಡು ಸಿದ್ಧ
ಮೈಸೂರು

ಆಷಾಢ ಶುಕ್ರವಾರಕ್ಕೆ 35 ಸಾವಿರ ಲಾಡು ಸಿದ್ಧ

July 4, 2019

ಮೈಸೂರು, ಜು.3(ಎಂಕೆ)- ಮೈಸೂರಿನಲ್ಲಿ ಆಷಾಢ ಶುಕ್ರವಾರದ ಅಂಗವಾಗಿ ಬರೋಬ್ಬರಿ 35 ಸಾವಿರ ಲಾಡು ತಯಾರಿಸಲಾಗುತ್ತಿದೆ.

ಜೆ.ಪಿ. ನಗರದ ನಿತ್ಯಾನಂದ ಕಲ್ಯಾಣ ಮಂಟಪದಲ್ಲಿ ಚಾಮುಂಡೇಶ್ವರಿ ಸೇವಾ ಸಮಿತಿ ವತಿಯಿಂದ ಪ್ರತಿ ವರ್ಷ ಬೆಟ್ಟಕ್ಕೆ ಭೇಟಿ ನೀಡುವ ಭಕ್ತರಿಗೆ ಪ್ರತಿ ವರ್ಷದಂತೆ ಈ ವರ್ಷವು ಮೊದಲ ಆಷಾಡ ಶುಕ್ರವಾರ ದಿನದಂದು ಲಾಡುಗಳನ್ನು ವಿತರಿಸಲಾಗುತ್ತದೆ. ಚಾಮುಂಡೇಶ್ವರಿ ಸೇವಾ ಸಮಿತಿಯು ಕಳೆದ 28 ವರ್ಷದಿಂದ ನಾಡಿನ ಅದಿದೇವತೆ ಚಾಮುಂಡೇಶ್ವರಿ ದೇವಿಗೆ ವಿಶೇಷ ಹೂವಿನ ಅಲಂಕಾರ, 13 ವರ್ಷದಿಂದ ಅನ್ನದಾನ ಹಾಗೂ 16 ವರ್ಷದಿಂದ ಪ್ರಸಾದ ವಿತರಿಸುತ್ತಾ ಬಂದಿದೆ.

ಸುಮಾರು 2 ಲಕ್ಷ ವೆಚ್ಚದಲ್ಲಿ 30 ಮಂದಿ ಬಾಣಸಿಗರಿಂದ 35 ಸಾವಿರ ಲಾಡು ತಯಾರಿಸಲಾಗುತ್ತಿದ್ದು, ಚಾಮುಂಡಿ ಬೆಟ್ಟದ ದಾಸೋಹದಲ್ಲಿ ಭಕ್ತರಿಗೆ ಲಾಡು ವಿತರಣೆ ಮಾಡಲಾಗುತ್ತದೆ ಎಂದು ಸೇವಾ ಸಮಿತಿ ತಿಳಿಸಿದೆ.

ಲಾಡು ತಯಾರಿಕೆಗೆ 450 ಕೆಜಿ ಕಡಲೆ ಹಿಟ್ಟು, 60 ಕೆಜಿ ಗೋಡಂಬಿ, 10 ಕೆಜಿ ಬಾದಾಮಿ, 10 ಕೆಜಿ ಪಿಸ್ತಾ, 3 ಟನ್ ನಂದಿನಿ ತುಪ್ಪ, 25 ಟನ್ ಅಡುಗೆ ಎಣ್ಣೆ, 50 ಕೆಜಿ ಬೂದ್ ಸಕ್ಕರೆ, 750 ಕೆಜಿ ಸಕ್ಕರೆ, 25 ಕೆ.ಜಿ. ಕರ್ಜೂರ, 4 ಕೆಜಿ ಲವಂಗ, 3 ಕೆಜಿ ಏಲಕ್ಕಿ, 25 ಕೆ.ಜಿ. ದ್ರಾಕ್ಷಿಯನ್ನು ಬಳಸಲಾಗಿದೆ.

Translate »