ಚಾಮುಂಡಿಬೆಟ್ಟದಲ್ಲಿ ಭೂ ಕುಸಿತಕ್ಕೆ ಪರಿಹಾರೋಪಾಯ
ಮೈಸೂರು

ಚಾಮುಂಡಿಬೆಟ್ಟದಲ್ಲಿ ಭೂ ಕುಸಿತಕ್ಕೆ ಪರಿಹಾರೋಪಾಯ

December 2, 2021
  • ನಂದಿ ರಸ್ತೆಯನ್ನು ಚಾರಣ ಮಾರ್ಗವಾಗಿಸಿ ಇಲ್ಲವೇ ೮೦೦ ಮೀ. ಕಾಂಕ್ರೀಟ್ ಗೋಡೆ ನಿರ್ಮಿಸಿ
  • ಇಂಜಿನಿರ‍್ಸ್ ಸಂಸ್ಥೆಯ ಮೈಸೂರು ಸ್ಥಳೀಯ ಕೇಂದ್ರದ ತಾಂತ್ರಿಕ ಸಮಿತಿ ವರದಿಯಲ್ಲಿ ಶಿಫಾರಸ್ಸು
  • ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ಗೆ ವರದಿ ಸಲ್ಲಿಸಿದ ಸಮಿತಿ
  • ನಿವೃತ್ತ ಮೇಜರ್ ಜನರಲ್ ಡಾ.ಎಸ್.ಜಿ.ಒಂಬತ್ಕೆರೆ ನೇತೃತ್ವದ ಸಮಿತಿಯಿಂದ ಸಿದ್ಧಗೊಂಡ ವರದಿ

ಮೈಸೂರು,ಡಿ.೧(ಪಿಎಂ)- ಚಾಮುಂಡಿ ಬೆಟ್ಟದ ನಂದಿ ಪ್ರತಿಮೆ ಸಂಪರ್ಕ ರಸ್ತೆ ಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಚಾರಣ ಮಾರ್ಗವಾಗಿ ಪರಿವರ್ತಿಸುವ ಮೂಲಕ ಇಲ್ಲಿ ಪದೇ ಪದೆ ಉಂಟಾ ಗುತ್ತಿರುವ ಭೂ ಕುಸಿತ ತಡೆಗಟ್ಟಬಹು ದೆಂದು ಇಂಜಿನಿರ‍್ಸ್ ಸಂಸ್ಥೆಯ ಮೈಸೂರು ಸ್ಥಳೀಯ ಕೇಂದ್ರದ ತಾಂತ್ರಿಕ ಸಮಿತಿ ಶಿಫಾರಸ್ಸು ಮಾಡಿದೆ.

ಅಲ್ಲದೆ, ಚಾರಣ ಮಾರ್ಗ ಬೇಡವೆಂದು ವಾಹನ ಸಂಚಾರಕ್ಕೇ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದರೆ, ಸುಮಾರು ೮೦೦ ಮೀ. ಉದ್ದದ ಕಾಂಕ್ರೀಟ್ ಗೋಡೆಯನ್ನು ೫೦ ಅಡಿ ಆಳದಿಂದ ನಿರ್ಮಿಸಬೇಕಾಗು ತ್ತದೆ. ಇದಕ್ಕೆ ೩೦ ಕೋಟಿ ರೂ. ವೆಚ್ಚವಾ ಗಲಿದೆ ಎಂದು ಅಂದಾಜಿಸಿ, ಒಟ್ಟಾರೆ ಎರಡು ಆಯ್ಕೆಗಳ ಸಂಬAಧ ವಿಸ್ತೃತ ಅಂಶಗಳನ್ನು ಉಲ್ಲೇಖಿಸಿ, ವರದಿ ಸಿದ್ಧಪಡಿಸಲಾಗಿದೆ. ನಿವೃತ್ತ ಮೇಜರ್ ಜನರಲ್ ಡಾ.ಎಸ್.ಜಿ. ಒಂಬತ್ಕೆರೆ ನೇತೃತ್ವದ ತಾಂತ್ರಿಕ ಸಮಿತಿ ಸ್ಥಳ ಪರಿಶೀಲಿಸಿ, ವರದಿ ಸಿದ್ಧಪಡಿಸಿದೆ. ಇಂಜಿನಿರ‍್ಸ್ ಸಂಸ್ಥೆಯ ಎಂ.ಲಕ್ಷö್ಮಣ್, ಬಿ.ಎಸ್.ಪ್ರಭಾಕರ್, ಹೆಚ್.ಎಸ್.ಸುರೇಶ್ ಬಾಬು, ಹೆಚ್. ಕಿಶೋರ್ ಚಂದ್ರ ಮತ್ತು ಎಂ.ಕೆ.ನAಜಯ್ಯ ಅವರನ್ನು ಒಳಗೊಂಡ ಸಮಿತಿಯು ಡಾ.ಎಸ್.ಜಿ. ಒಂಬತ್ಕೆರೆ ಅವರ ನೇತೃತ್ವದಲ್ಲಿ ನ.೧೯ರಂದು ಬೆಟ್ಟಕ್ಕೆ ಭೇಟಿ ನೀಡಿ, ಭೂ ಕುಸಿತ ಸಂಬAಧ ಸ್ಥಳ ಪರಿಶೀಲನೆ ನಡೆಸಿದ್ದರು. ಬಳಿಕ ಸಮಿತಿಯಿಂದ ವರದಿ ಸಿದ್ಧಗೊಂಡಿತ್ತು. ಮೈಸೂರು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಅವರಿಗೆ ಸಮಿತಿಯು ಬುಧವಾರ ಸದರಿ ವರದಿ ಸಲ್ಲಿಸಿತು. ಇಂದು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿದ ಸಮಿತಿ ಸದಸ್ಯರು, ಸರ್ಕಾರಕ್ಕೆ ಸಲ್ಲಿಸುವ ಸಲುವಾಗಿ ವರದಿ ಸಲ್ಲಿಸಿದರು. ಪದೇ ಪದೆ ಭೂ ಕುಸಿತಕ್ಕೆ ತುತ್ತಾಗುತ್ತಿರುವ ಚಾಮುಂಡಿ ಬೆಟ್ಟದ ನಂದಿ ಪ್ರತಿಮೆಗೆ ತೆರಳುವ ಸಂಪರ್ಕ ರಸ್ತೆಯ ದುರಸ್ತಿ ಮತ್ತು ಭೂ ಕುಸಿತ ಉಂಟಾಗದAತೆ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ತಾಂತ್ರಿಕ ಸಮಿತಿ ವರದಿಯಲ್ಲಿ ಮಾರ್ಗೋಪಾಯಗಳನ್ನು ಪ್ರಸ್ತಾಪಿಸಿದೆ.

ರಸ್ತೆ ಕುಸಿತಕ್ಕೆ ಕಾರಣ: ರಸ್ತೆ ಕುಸಿತಕ್ಕೆ ಭಾರೀ ಮಳೆ ಕಾರಣ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಇತ್ತೀಚೆಗೆ ಮೈಸೂರಿನಲ್ಲಿ ಅತೀ ಹೆಚ್ಚು ಮಳೆಯಾಗಿದೆ. ಇದೇ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್‌ನಲ್ಲಿ ಬಿಡುವಿಲ್ಲದಂತೆ ಅಸಾಧಾರಣ ಮಳೆಯಾಗಿದೆ. ಪರಿಣಾಮ ಇಲ್ಲಿನ ಚರಂಡಿ ವ್ಯವಸ್ಥೆ ಭಾರೀ ಪ್ರಮಾಣದ ನೀರನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂಬುದು ಸೇರಿದಂತೆ ಹಲವು ತಾಂತ್ರಿಕ ಅಂಶಗಳನ್ನು ವರದಿಯಲ್ಲಿ ಹೇಳಲಾಗಿದೆ. ಹೆಚ್.ಕಿಶೋರ್‌ಚಂದ್ರ ಹೊರತಾಗಿ ತಾಂತ್ರಿಕ ಸಮಿತಿಯ ಉಳಿದೆಲ್ಲಾ ಸದಸ್ಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ವರದಿ ಸಲ್ಲಿಸಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ತಾಂತ್ರಿಕ ಸಮಿತಿ ಸದಸ್ಯ ಎಂ.ಲಕ್ಷö್ಮಣ್, ಇಂಜಿನಿಯರ್‌ಗಳ ಸಂಸ್ಥೆಯಿAದ ತಾಂತ್ರಿಕ ಸಮಿತಿ ರಚಿಸಲಾಗಿತ್ತು. ಸಮಿತಿ ಸದಸ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದೆವು. ಸದರಿ ಸಂಪರ್ಕ ರಸ್ತೆಯಲ್ಲಿ ಈಗಾಗಲೇ ೪ ಕಡೆಗಳಲ್ಲಿ ಭೂ ಕುಸಿತ ಉಂಟಾಗಿದೆ. ೨೦೧೯ರಲ್ಲೂ ಮಳೆಯ ಕಾರಣ ಇಲ್ಲಿ ಭೂ ಕುಸಿತ ಉಂಟಾಗಿತ್ತು. ತಡೆಗೋಡೆ ನಿರ್ಮಿಸಿ, ದುರಸ್ತಿಪಡಿಸಲಾಗಿತ್ತು. ಆದಾಗ್ಯೂ ಪದೇ ಪದೆ ಅಂತಹದ್ದೇ ಸಮಸ್ಯೆ ಮರುಕಳಿಸುತ್ತಿದ್ದು, ಇದಕ್ಕೆ ಭಾರೀ ಮಳೆ ಕಾರಣವಾಗಿದೆ ಎಂದರು. ಹಾಗಾಗಿ ಸದರಿ ಸಂಪರ್ಕ ರಸ್ತೆಯನ್ನು ಚಾರಣ ಮಾರ್ಗವಾಗಿ ಪರಿವರ್ತಿಸುವ ಶಿಫಾರಸ್ಸು ಮಾಡಿದ್ದೇವೆ. ಹೀಗೆ, ಪರಿವರ್ತಿಸುವ ಮೂಲಕ ಇನ್ನೂ ನೂರಾರು ವರ್ಷಗಳ ಕಾಲ ಈ ರಸ್ತೆ ಸಂರಕ್ಷಿಸಿಕೊಳ್ಳಲು ಸಾಧ್ಯವಿದೆ. ಈ ರಸ್ತೆ ೧೯೦೩ರಲ್ಲಿ ನಿರ್ಮಾಣಗೊಂಡಿದ್ದು, ೧೧೮ ವರ್ಷಗಳ ಸೇವೆ ಕೊಟ್ಟಿದೆ. ಚಾರಣ ಮಾರ್ಗ ಬೇಡವೆಂದು ವಾಹನ ಸಂಚಾರಕ್ಕೇ ಅವಕಾಶ ನೀಡಲು ಸರ್ಕಾರ ನಿರ್ಧರಿಸಿದರೆ, ಸುಮಾರು ೮೦೦ ಮೀ. ಉದ್ದದ ಕಾಂಕ್ರೀಟ್ ಗೋಡೆಯನ್ನು ೫೦ ಅಡಿ ಆಳದಿಂದ ನಿರ್ಮಿಸಬೇಕಾಗುತ್ತದೆ. ಇದಕ್ಕೆ ೩೦ ಕೋಟಿ ರೂ. ವೆಚ್ಚವಾಗಲಿದೆ ಎಂದು ಲೋಕೋಪಯೋಗಿ ಇಲಾಖೆ ಅಂದಾಜು ಮಾಡಿದೆ ಎಂದು ತಿಳಿಸಿದರು.
ಇಂಜಿನಿಯರ್‌ಗಳ ಸಂಸ್ಥೆ ವತಿಯಿಂದ ಸ್ವಯಂ ಪ್ರೇರಿತವಾಗಿ ಯಾವುದೇ ಸಂಭಾವನೆ ಇಲ್ಲದೇ ಈ ವರದಿ ಸಿದ್ಧಪಡಿಸಲಾಗಿದೆ. ಸರ್ಕಾರ ಸದರಿ ವರದಿಯನ್ನು ಪರಿಗಣಿಸಬೇಕು. ಇಂಜಿನಿಯರ್‌ಗಳ ಸಂಸ್ಥೆಯ ತಜ್ಞ ಇಂಜಿನಿಯರ್‌ಗಳ ಸೇವೆಯನ್ನು ಪಡೆದುಕೊಳ್ಳಬೇಕು ಎಂದು ಸರ್ಕಾರಕ್ಕೆ ಕೋರಿದರು.
¸
Àಮಗ್ರ ದುರಸ್ತಿಗೆ ಆದ್ಯತೆ: ೧೧೮ ವರ್ಷಗಳಿಂದ ಸದರಿ ರಸ್ತೆಯಲ್ಲಿ ವಾಹನ ಸಂಚಾರ ಇರುವ ಕಾರಣ ಈಗ ಸಂಪೂರ್ಣ ವಾಹನ ಸಂಚಾರಕ್ಕೆ ನಿರ್ಬಂಧಿಸಿದರೆ ಬಹುತೇಕ ಜನತೆಯ ಆಕ್ಷೇಪ ವ್ಯಕ್ತವಾಗಬಹುದು. ಹಾಗಾಗಿ ೩೦ ಕೋಟಿ ರೂ. ವೆಚ್ಚದಲ್ಲಿ ಸಮಗ್ರ ದುರಸ್ತಿ ಮಾಡಬೇಕೆಂಬ ಆಯ್ಕೆಗೆ ಆದ್ಯತೆ ನೀಡಿದ್ದೇವೆ.

ಸದರಿ ರಸ್ತೆ ಸಮಗ್ರ ದುರಸ್ತಿಯಾದರೂ ಸುರಕ್ಷತೆ ಖಾತರಿ ಇಲ್ಲ; ನಿವೃತ್ತ ಮೇಜರ್ ಜನರಲ್ ಡಾ.ಎಸ್.ಜಿ.ಒಂಬತ್ಕೆರೆ

ಮೈಸೂರು:ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್‌ನಿAದ ನಂದಿ ಪ್ರತಿಮೆಗೆ ಸಂಪರ್ಕ ಕಲ್ಪಿಸುವ ೧.೪ ಕಿ.ಮೀ. ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿ ಗೊಳಿಸಿದರೆ, ಸಂಚಾರ ಮತ್ತೆ ಸಾಧ್ಯವಾಗಲಿದೆ. ಆದರೆ ಭಾರೀ ಮಳೆ ಸುರಿಯು ವುದನ್ನು ತಳ್ಳಿ ಹಾಕಲಾಗದ ಹಿನ್ನೆಲೆಯಲ್ಲಿ ಸಮಗ್ರ ದುರಸ್ತಿಯಾದರೂ ಅದರ ಸುರಕ್ಷತೆಗೆ ಖಾತರಿ ಇರುವುದಿಲ್ಲ ಎಂದು ನಿವೃತ್ತ ಮೇಜರ್ ಜನರಲ್ ಡಾ.ಎಸ್.ಜಿ. ಒಂಬತ್ಕೆರೆ ಅಭಿಪ್ರಾಯಪಟ್ಟರು. ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್‌ನಿAದ ನಂದಿ ಪ್ರತಿಮೆಗೆ ಸಂಪರ್ಕ ಕಲ್ಪಿಸುವ ರಸ್ತೆಯ ದುರಸ್ತಿಗೆ ಸಂಬAಧಿಸಿದAತೆ ಎರಡು ಆಯ್ಕೆಗಳನ್ನು ಶಿಫಾರಸ್ಸು ಮಾಡಲಾಗಿದೆ. ಅದರಲ್ಲಿ ಮೊದಲನೆಯದು ಈ ೧.೪ ಕಿ.ಮೀ. ಸಂಪರ್ಕ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ಸಮಗ್ರ ದುರಸ್ತಿಗೊಳಿಸಿದರೆ, ಸಂಚಾರ ಮತ್ತೆ ಸಾಧ್ಯವಾಗಲಿದೆ ಎಂದರು. ಈ ಆಯ್ಕೆ ಮಾತ್ರವಲ್ಲದೆ, ಸದರಿ ೧.೪ ಕಿ.ಮೀ. ರಸ್ತೆಯನ್ನು ಟ್ರಕ್ಕಿಂಗ್ ಟ್ರಾö್ಯಕ್ (ಚಾರಣ ಮಾರ್ಗ) ಆಗಿ ಪರಿವರ್ತಿಸುವ ಅವಕಾಶದ ಬಗ್ಗೆ ಶಿಫಾರಸ್ಸು ಮಾಡಲಾಗಿದೆ. ಆ ಮೂಲಕ ಕನಿಷ್ಠ ವೆಚ್ಚದಲ್ಲಿ ದುರಸ್ತಿಗೊಳಿಸಿ, ಬೃಹತ್ ಕಾಮಗಾರಿಗೆ ವ್ಯಯಿಸುವ ದೊಡ್ಡ ಪ್ರಮಾಣದ ಹಣವನ್ನು ಬೆಟ್ಟದ ಮುಖ್ಯ ರಸ್ತೆ ಅಭಿವೃದ್ಧಿ ಬಳಸಿಕೊಳ್ಳಬಹುದು. ಕಾರಣ ಹವಾಮಾನ ಬದಲಾಗಿದ್ದು, ಭಾರೀ ಮಳೆ ಸುರಿಯುವುದನ್ನು ತಳ್ಳಿ ಹಾಕಲಾಗದು. ಹಾಗಾಗಿ ದುರಸ್ತಿ ಮಾಡಿದರೂ ಅದರ ಸುರಕ್ಷತೆಗೆ ಖಾತರಿ ಇರುವುದಿಲ್ಲ ಎಂದು ತಿಳಿಸಿದರು. ನಂದಿ ಪ್ರತಿಮೆ ಬಳಿಗೆ ತಾವರೆಕಟ್ಟೆ ರಸ್ತೆ ಮತ್ತು ಮೆಟ್ಟಿಲು ಸೇರಿದಂತೆ ಎರಡು ಮಾರ್ಗದಲ್ಲಿ ತೆರಳಲು ಅವಕಾಶವಿದೆ. ಹಾಗಾಗಿ ಚಾರಣ ಮಾರ್ಗವಾಗಿ ಪರಿವರ್ತಿಸಬಹುದು. ಸದರಿ ಸಂಪರ್ಕ ರಸ್ತೆಯನ್ನು ಪೂರ್ಣ ಪ್ರಮಾಣದಲ್ಲಿ ದುರಸ್ತಿಗೆ ದೊಡ್ಡ ಪ್ರಮಾಣದ ಹಣ ವ್ಯಯಿಸುವ ಬದಲು ಇದೇ ಹಣವನ್ನು ಬೆಟ್ಟದ ಮುಖ್ಯ ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಲು ಅವಕಾಶವಾಗಲಿದೆ ಎಂದು ಹೇಳಿದರು.

Translate »