ಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಈ ಬಾರಿ ಹುಂಡಿಯಿಂದ 1.58 ಕೋಟಿ ರೂ. ಸಂಗ್ರಹ
ಮೈಸೂರು

ಬೆಟ್ಟದ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ಈ ಬಾರಿ ಹುಂಡಿಯಿಂದ 1.58 ಕೋಟಿ ರೂ. ಸಂಗ್ರಹ

December 21, 2019

ಮೈಸೂರು, ಡಿ.20(ಪಿಎಂ)- ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಸ್ಥಾನದ ಹುಂಡಿ ಎಣಿಕೆ ನಡೆದಿದ್ದು, ಈ ಬಾರಿ 1.58 ಕೋಟಿ ರೂ. ಸಂಗ್ರಹವಾಗಿದೆ. ಚಾಮುಂಡೇಶ್ವರಿ ದೇವಸ್ಥಾನಕ್ಕೆ ಕಾಣಿಕೆ ರೂಪದಲ್ಲಿ ಕೋಟ್ಯಾಂತರ ರೂಪಾಯಿ ಹರಿದು ಬರುತ್ತಿದೆ. ಭಕ್ತರು ಹಾಗೂ ಪ್ರವಾಸಿಗರು ಹುಂಡಿಗೆ ಭಕ್ತಿಪೂರ್ವಕವಾಗಿ ಕಾಣಿಕೆ ಅರ್ಪಿಸುತ್ತಾರೆ. ಹೀಗೆ ಸಂಗ್ರಹ ವಾಗುವ ಹುಂಡಿ ಹಣವನ್ನು 1 ಅಥವಾ ಒಂದೂವರೆ ತಿಂಗಳಿ ಗೊಮ್ಮೆ ಎಣಿಕೆ ಮಾಡಲಾಗುತ್ತದೆ. ಅದರಂತೆ ಬುಧವಾರ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಈ ಬಾರಿ 1,57,81, 481 (1.58 ಕೋಟಿ) ರೂ. ಸಂಗ್ರಹಗೊಂಡಿದೆ. ಕಳೆದ ಬಾರಿಗೆ ಹೋಲಿಸಿದರೆ 46 ಲಕ್ಷ ರೂ. ಈ ಬಾರಿ ಹೆಚ್ಚು ವರಿ ಹಣ ಸಂಗ್ರಹವಾಗಿರುವುದು ಗಮನಾರ್ಹ. ಈ ಬಾರಿಯ ವಿವಿಧ ಮುಖ ಬೆಲೆಯ 1,54,31,034 ರೂ. ನೋಟುಗಳು ಹಾಗೂ 3,50,447 ರೂ. ನಾಣ್ಯಗಳು ಸಂಗ್ರಹವಾಗಿವೆ. ದೇವಸ್ಥಾನದಲ್ಲಿ ವಿಶೇಷ ದರ್ಶನ, ಲಾಡು ಹಾಗೂ ಸೀರೆ ಹರಕೆ ಆದಾಯ ಹೊರತುಪಡಿಸಿ ಹುಂಡಿಗೂ ಕೋಟ್ಯಾಂತರ ಹಣ ಹರಿದು ಬರುತ್ತಿದೆ. ರಾಜ್ಯ ಮಾತ್ರವಲ್ಲದೆ, ದೇಶ-ವಿದೇಶಗಳಿಂದಲೂ ಮೈಸೂರಿಗೆ ಆಗಮಿಸುವ ಪ್ರವಾಸಿಗರು ಹಾಗೂ ಭಕ್ತಾದಿಗಳು ಚಾಮುಂಡೇಶ್ವರಿ ದರ್ಶನ ಪಡೆದು ಕಾಣಿಕೆ ಅರ್ಪಿಸುತ್ತಾರೆ.
ಸೂರ್ಯಗ್ರಹಣ ಹಿನ್ನೆಲೆ

ಚಾಮುಂಡಿಬೆಟ್ಟದಲ್ಲಿ ಡಿ.26ರಂದು ಬೆಳಿಗ್ಗೆ 8ರಿಂದ  ಮಧ್ಯಾಹ್ನ 1ರವರೆಗೆ ದೇವರ ದರ್ಶನವಿಲ್ಲ
ಮೈಸೂರು, ಡಿ.20(ಆರ್‍ಕೆಬಿ)-ಚಾಮುಂಡಿಬೆಟ್ಟದ ಶ್ರೀ ಚಾಮುಂಡೇಶ್ವರಿ ದೇವಸ್ಥಾನ ದಲ್ಲಿ ಡಿ.26ರ ಗುರುವಾರ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಗ್ರಹಣ ಸ್ಪರ್ಶಕಾಲ ಹಾಗೂ ಮೋಕ್ಷ ಕಾಲದಲ್ಲಿ ಗ್ರಹಣದ ಶಾಂತಿಗಾಗಿ ನಡೆಯುವ ವಿಶೇಷ ಪೂಜೆ ನಿಮಿತ್ತ ಅಂದು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಚಾಮುಂಡೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಯತಿರಾಜ್ ತಿಳಿಸಿದ್ದಾರೆ. ಅಂದು ದೇವಸ್ಥಾನದ ವತಿಯಿಂದ ಬೆಳಿಗ್ಗೆ ಭಕ್ತಾದಿಗಳಿಗೆ ವಿತರಿಸಲಾಗುವ ಪ್ರಸಾದ ವ್ಯವಸ್ಥೆ ಇರುವುದಿಲ್ಲ. ಮಧ್ಯಾಹ್ನ 1 ಗಂಟೆ ನಂತರ ದಾಸೋಹದ ವ್ಯವಸ್ಥೆ ಇರುತ್ತದೆ ಎಂದು ತಿಳಿಸಿದ್ದಾರೆ.

Translate »