ಭಾರೀ ಮಳೆಗೆ ಕುಸಿದಿದ್ದ ಚಾಮುಂಡಿ ಬೆಟ್ಟದ ರಸ್ತೆಗೆ ಸುಭದ್ರ ತಡೆಗೋಡೆ
ಮೈಸೂರು

ಭಾರೀ ಮಳೆಗೆ ಕುಸಿದಿದ್ದ ಚಾಮುಂಡಿ ಬೆಟ್ಟದ ರಸ್ತೆಗೆ ಸುಭದ್ರ ತಡೆಗೋಡೆ

February 28, 2020

ಇಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣರಿಂದ ಕಾಮಗಾರಿ ಪರಿಶೀಲನೆ
ಮೈಸೂರು, ಫೆ.27(ಆರ್‍ಕೆ)-ಭಾರೀ ಮಳೆಯಿಂದಾಗಿ ಕುಸಿದಿದ್ದ ಚಾಮುಂಡಿ ಬೆಟ್ಟದ ನಂದಿ ಪ್ರತಿಮೆ ರಸ್ತೆ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.

2019ರ ಅಕ್ಟೋಬರ್ ತಿಂಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ನೀರು ರಭಸ ವಾಗಿ ನುಗ್ಗಿದ ಕಾರಣ, ಚಾಮುಂಡಿಬೆಟ್ಟದ ವ್ಯೂ ಪಾಯಿಂಟ್ ಮತ್ತು ನಂದಿ ಪ್ರತಿಮೆ ನಡುವಿನ ರಸ್ತೆ ಕುಸಿದಿದ್ದರಿಂದ ಇಲ್ಲಿ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು.

ವಿಷಯ ತಿಳಿಯುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಅಧಿ ಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿ ಕುಸಿದಿದ್ದ ರಸ್ತೆ ಸರಿಪಡಿಸಿ, ಅತ್ಯಾಧುನಿಕ ತಂತ್ರಜ್ಞಾ ನದ ತಡೆಗೋಡೆ ನಿರ್ಮಿಸಿ, ಆದಷ್ಟು ಶೀಘ್ರ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಿ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಅದರಂತೆ ಈ ರಸ್ತೆಯನ್ನು ಬಂದ್ ಮಾಡಿ, ತಕ್ಷಣವೇ ಕಾಮಗಾರಿ ಕೈಗೊಂಡ ಅಧಿಕಾರಿ ಗಳು, ಕುಸಿದಿದ್ದ 35 ಮೀಟರ್ ಅಗಲ ಹಾಗೂ 6 ಮೀಟರ್ ಎತ್ತರಕ್ಕೆ ತಡೆಗೋಡೆ ನಿರ್ಮಿಸಿ ರಸ್ತೆ ಡಾಂಬರೀಕರಣ ಮಾಡ ಲಾಗಿದ್ದು, ಈಗ ವಾಹನ ಸಂಚಾರಕ್ಕೆ ನಂದಿ ಪ್ರತಿಮೆ ರಸ್ತೆ ಸಿದ್ಧವಾಗಿದೆ.

ಸಿಮೆಂಟ್ ಕಾಂಕ್ರಿಟ್ ಬೇಸ್ ಮೇಲೆ ಕಬ್ಬಿಣ ಕಟ್ಟಿ ಕಾಂಕ್ರಿಟ್ ತಡೆಗೋಡೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿದ್ದು, ಮುಂದೆ ಎಂತಹ ಜೋರು ಮಳೆ ಸುರಿದು ನೀರು ನುಗ್ಗಿದರೂ ಈ ತಡೆಗೋಡೆಗೆ ತೊಂದರೆ ಯಾಗದಂತೆ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗಿದ್ದು, ಈ ಕೆಲಸಕ್ಕೆ ಒಟ್ಟು 49 ಲಕ್ಷ ರೂ. ಖರ್ಚು ಮಾಡಲಾಗಿದೆ ಎಂದು ಕಾಮಗಾರಿ ನಡೆಸಿದ ಗುತ್ತಿಗೆದಾರ ದಶರಥ್ ತಿಳಿಸಿದ್ದಾರೆ.

ಬೆಟ್ಟದಿಂದ ಬರುವ ನೀರು ಸರಾಗ ವಾಗಿ ಹರಿದು ಹೋಗಲು ರಸ್ತೆ ಬದಿಯಲ್ಲಿ ವ್ಯವಸ್ಥೆ ಮಾಡಿರುವುದರಿಂದ ಮುಂದೆ ಈ ರೀತಿಯ ತೊಂದರೆ ಉಂಟಾಗುವು ದಿಲ್ಲ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ನಾಳೆ (ಫೆ.28) ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಿ, ತಡೆಗೋಡೆ ಕಾಮಗಾರಿಯನ್ನು ಪರಿಶೀಲಿಸಿ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಿ ದ್ದಾರೆ. ನಂದಿ ಪ್ರತಿಮೆಯಿಂದ ಉತ್ತನಹಳ್ಳಿ ಕಡೆಗೆ ಹೋಗುವ ರಸ್ತೆಯನ್ನು ಬೇಸಿಗೆ ಹಿನ್ನೆಲೆಯಲ್ಲಿ ಸಿಗರೇಟ್, ಬೀಡಿ ಸೇದಿ ಬಿಸಾಡಿ ಬೆಂಕಿ ಹೊತ್ತಿಕೊಳ್ಳಬಹುದು. ಬೆಂಕಿ ಅವಘಡ ವೇಳೆ ಬೆಂಕಿ ನಂದಿಸಲು ಸ್ಥಳಕ್ಕೆ ಹೋಗಲು ಮಾರ್ಗವಿಲ್ಲದ ಕಾರಣದಿಂದ ಪ್ರತೀ ವರ್ಷದಂತೆ ಈ ಬಾರಿಯೂ ಫೆಬ್ರವರಿ ಯಿಂದ ಏಪ್ರಿಲ್ ಮಾಹೆವರೆಗೆ ವಾಹನ ಗಳ ಪ್ರವೇಶವನ್ನು ಅರಣ್ಯ ಇಲಾಖೆ ಕೋರಿಕೆಯಂತೆ ಬಂದ್ ಮಾಡಲಾಗಿದೆ.

ಅದೇ ರೀತಿ ನಂದಿ ಪ್ರತಿಮೆಯಿಂದ ತಾವರೆಕಟ್ಟೆ ಬಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ರಿಪೇರಿ ಕಾಮಗಾರಿ ನಡೆಯು ತ್ತಿರುವುದರಿಂದ ವ್ಯೂ ಪಾಯಿಂಟ್‍ನಿಂದ ನಂದಿ ಬಳಿಗೆ ಹೋಗುವ ವಾಹನಗಳು ಮುಂದೆ ಹೋಗದೆ ಅದೇ ಮಾರ್ಗ ವಾಪಸ್ ಬರಬೇಕಾಗಿರುವುದರಿಂದ ಸಂಚಾರಕ್ಕೆ ತೊಂದರೆ ಉಂಟಾಗುತ್ತದೆ ಎಂಬ ಕಾರಣಕ್ಕೆ ಸಿದ್ದಾರ್ಥ ಸಂಚಾರ ಠಾಣೆ ಪೊಲೀಸರು ವ್ಯೂ ಪಾಯಿಂಟ್ ಬಳಿಯೇ ಬ್ಯಾರಿಕೇಡ್ ಹಾಕಿ ಸಂಚಾರ ಬಂದ್ ಮಾಡಿದ್ದಾರೆ.

Translate »