ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಮಾಜಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಕರೆ]
ಮೈಸೂರು, ಫೆ.27(ಆರ್‍ಕೆ)-ಸಮಾ ನತೆ, ಸಾಮಾಜಿಕ, ನ್ಯಾಯ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸ ಬೇಕೆಂದು ಮಾಜಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಇಂದಿಲ್ಲಿ ಕರೆ ನೀಡಿದ್ದಾರೆ.
ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮೈಸೂರಿನ ಇಂದಿರಾ ಕಾಂಗ್ರೆಸ್ ಭವನದಲ್ಲಿ ಇಂದು ಏರ್ಪಡಿ ಸಿದ್ದ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಜನರು ಭಯದಿಂದ ಜೀವಿ ಸುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣ ವಾಗಿದೆ ಎಂದರು.
ಜವಾಹರಲಾಲ್ ನೆಹರು, ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಬಾಯ್ ಪಟೇಲ್ ರಂತಹ ಮಹಾಪುರುಷರು ಹೋರಾಡಿದ ಫಲವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತಾ ದರೂ, ಇಂದು ರಾಷ್ಟ್ರದಲ್ಲಿ ಅಧಿಕಾರ ನಡೆಸುತ್ತಿರುವ ಸರ್ಕಾರದ ಧೋರಣೆ ಯಿಂದ ಇಡೀ ದೇಶದ ಜನ ಪರಿತಪಿಸು ವಂತಾಗಿದೆ. ಪ್ರಬಲ ಎದುರಾಳಿ ಇಲ್ಲ ವೆಂಬುದನ್ನೇ ದುರುಪಯೋಗಪಡಿಸಿ ಕೊಂಡು ಏಕಸ್ವಾಮ್ಯ ನಿಲುವು ತೆಗೆದು ಕೊಳ್ಳುತ್ತಿರುವುದು ದೇಶದಲ್ಲಿ ಪ್ರತಿಭಟನೆ ಗಳು ಹಿಂಸಾರೂಪ ತಾಳಲು ಕಾರಣ ವಾಗಿದೆ ಎಂದು ತಿಳಿಸಿದರು.
ಅಸಮಾನತೆ, ಅಶಾಂತಿ, ಅರಾಜಕತೆ ತಾಂಡವವಾಡುತ್ತಿದೆ. ದಲಿತರು, ಹಿಂದು ಳಿದವರು, ಅಲ್ಪಸಂಖ್ಯಾತರು, ಬಡವರು ಬದುಕುವುದೇ ದುಸ್ತರವಾಗಿರುವಾಗ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತಂದಿರುವ ಬಿಜೆಪಿ ಸರ್ಕಾರ, ಜನರ ತಾಳ್ಮೆ ಪರೀಕ್ಷೆ ಮಾಡುತ್ತಿದೆ ಎಂದ ಅವರು, ದುರಾಡ ಳಿತ, ಅಧಿಕಾರ ದುರ್ಬಳಕೆಗೆ ಅಂತ್ಯ ಹಾಡ ದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಡಾ.ಮಹದೇವಪ್ಪ ನುಡಿದರು.
ಯುವಕರೇ ಬಹುಪಾಲು ಇರುವ ದೇಶ ದಲ್ಲಿ ಕಾಂಗ್ರೆಸ್ ಪಕ್ಷ ಸಂಘಟಿಸುವ ಮೂಲಕ ದೇಶ ಹಾಗೂ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ತಂದು ಮುಂದಿನ ದಿನ ಗಳಲ್ಲಿ ರಾಹುಲ್ ಗಾಂಧಿ ಅವರಿಗೆ ಶಕ್ತಿ ತುಂಬಬೇಕು. ಕಾಂಗ್ರೆಸ್ ಜನಪರ ತತ್ವ-ಸಿದ್ಧಾಂತವನ್ನು ಉಳಿಸಿ ಉತ್ತಮ ಸಮಾಜ ಕ್ಕಾಗಿ ದೇಶ ಮತ್ತು ರಾಜ್ಯದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರು ವುದು ಅನಿವಾರ್ಯವಾಗಿದೆ ಎಂದು ಅವರು ಯುವ ಕಾಂಗ್ರೆಸ್ ಪದಾಧಿಕಾರಿ ಗಳಿಗೆ ಸಲಹೆ ನೀಡಿದರು.
ಯುವಕರು ಪಕ್ಷದ ಚಟುವಟಿಕೆಯಿಂದ ದೂರ ಉಳಿದಿರುವುದೇ ಇಂದು ಕಾಂಗ್ರೆಸ್ ದುರ್ಬಲವಾಗಲು ಕಾರಣ. ಇಂದು ಸಂಜೆವರೆಗೂ ನಡೆಯಲಿರುವ ಯುವ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಈ ಬಗ್ಗೆ ಗಂಭೀರವಾಗಿ ಚರ್ಚಿಸಿ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಗೆ ರೂಪು-ರೇಷೆ ನಿರ್ಧರಿಸಿ ಎಂದ ಡಾ. ಮಹದೇವಪ್ಪ, ನಿಮ್ಮೊಂದಿಗೆ ಕೆಪಿಸಿಸಿ ಹಾಗೂ ಎಐಸಿಸಿ ಸದಾ ಬೆಂಬಲಕ್ಕಿರುತ್ತದೆ ಎಂದರು.
ಯುವ ಕಾಂಗ್ರೆಸ್ ಸಮಿತಿ ರಾಜ್ಯಾಧ್ಯಕ್ಷ ಬಸವನಗೌಡ ಬಾದರ್ಲಿ, ರಾಷ್ಟ್ರೀಯ ಉಸ್ತುವಾರಿ ಕೃಷ್ಣ ಅಲೇವಾರ್, ಯುವ ಪ್ರಧಾನ ಕಾರ್ಯದರ್ಶಿ ರವೀಂದ್ರ ದಾಸ್, ರಾಜ್ಯ ಉಪಾಧ್ಯಕ್ಷ ಶಿವಕುಮಾರ್, ರಾಷ್ಟ್ರೀಯ ಕಾರ್ಯದರ್ಶಿ ಇಬ್ರಾಹಿಂ ಕಲೀಲುಲ್ಲಾ, ರಾಜ್ಯ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮೋಸಿನ್ ಖಾನ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಮೈಸೂರು ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಮುಖಂಡರಾದ ರಾಜರಾಜೇಂದ್ರ, ಮಂಜು, ಯೋಗೇಶ್ ಸೇರಿದಂತೆ ರಾಜ್ಯ ಯುವ ಕಾಂಗ್ರೆಸ್ ಪದಾಧಿಕಾರಿಗಳು ಪಾಲ್ಗೊಂಡಿದ್ದರು.