ಮುಖ್ಯಮಂತ್ರಿ ಯಡಿಯೂರಪ್ಪ ಪರ ವಿಶೇಷ ಪೂಜೆ, ಸಿಹಿ ವಿತರಣೆ
ಮೈಸೂರು

ಮುಖ್ಯಮಂತ್ರಿ ಯಡಿಯೂರಪ್ಪ ಪರ ವಿಶೇಷ ಪೂಜೆ, ಸಿಹಿ ವಿತರಣೆ

February 28, 2020

ಮೈಸೂರು, ಫೆ.27- ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹುಟ್ಟುಹಬ್ಬದ ಪ್ರಯುಕ್ತ ಬಿ.ಎಸ್.ಯಡಿಯೂರಪ್ಪ ಅಭಿ ಮಾನಿ ಬಳಗದ ವತಿಯಿಂದ ಮೈಸೂರಿನ ಅಗ್ರಹಾರದಲ್ಲಿರುವ ನೂರೊಂದು ಗಣಪತಿ ದೇವಸ್ಥಾನದಲ್ಲಿ ಯಡಿಯೂರಪ್ಪ ನವರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ಆನಂದ್ ಮಾತನಾಡಿ ಬಿ.ಎಸ್. ಯಡಿಯೂರಪ್ಪನವರು ಜನನಾಯಕ. ಅವರು ಜನರಿಂದ ಉನ್ನತ ಸ್ಥಾನಕ್ಕೇರಿ ಈಗ ಜನರಿಗೋಸ್ಕರ ಬದುಕುತ್ತಿದ್ದಾರೆ.

ಬಿ.ಎಸ್.ಯಡಿಯೂರಪ್ಪನವರು ಯಾವತ್ತೂ ಮುಖ್ಯಮಂತ್ರಿ ಆಗಬೇಕೆಂದು ಬಯಸಿದವರಲ್ಲ. ಅವರಲ್ಲಿರುವ ನಿಸ್ವಾರ್ಥ ಸೇವೆ ಪರಿಗಣಿಸಿ ಜನರೇ ಅವರನ್ನು ಮುಖ್ಯ ಮಂತ್ರಿ ಮಾಡಿದ್ದಾರೆ. ಯಡಿಯೂರಪ್ಪ ನವರು ನೂರು ವರ್ಷ ಸುಖ ಸಂತೋಷ ದಿಂದ ಬಾಳಲಿ, ನಾಡಿನ ಜನರಿಗೆ ಇನ್ನೂ ಹೆಚ್ಚಿನದಾಗಿ ಸೇವೆ ಮಾಡಲು ಭಗವಂತನು ಇನ್ನೂ ಶಕ್ತಿ ನೀಡಲಿ ಎಂದು ಹಾರೈಸಿದರು.

ಕಷ್ಟಗಳನ್ನು ಮೆಟ್ಟಿ ನಿಂತು ಕರ್ನಾಟಕದ ಮುಖ್ಯಮಂತ್ರಿಯಾಗಿ ಜನರ ಸೇವೆಗೆ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ವ್ಯಕ್ತಿ ಬಿ.ಎಸ್.ಯಡಿಯೂರಪ್ಪನವರು. ಇಂದು ಎಪ್ಪತ್ತೆಂಟನೇ ವಸಂತಕ್ಕೆ ಕಾಲಿಡು ತ್ತಿರುವ ಅವರಿಗೆ ಮಂಗಳವಾಗಲಿ ಎಂದು ಶುಭಾಶಯ ಕೋರಿದರು.

ಬಿ.ಎಸ್.ಯಡಿಯೂರಪ್ಪ ಅಭಿಮಾನಿ ಬಳಗದ ಅಧ್ಯಕ್ಷ ಮಧು ಎನ್ ಪೂಜಾರ್ ಮಾತ ನಾಡಿ ಯಡಿಯೂರಪ್ಪನವರು ಕರ್ನಾಟಕ ಕಂಡಂತಹ ಅದ್ಭುತ ನಾಯಕ. 78ನೇ ವಸಂತಕ್ಕೆ ಕಾಲಿಡುತ್ತಿರುವ ಅವರಿಗೆ ಶುಭ ವಾಗಲಿ ಎಂದು ಹಾರೈಸಿದರು.

ಹಿಂದೆ ಬಿ.ಎಸ್.ಯಡಿಯೂರಪ್ಪ ಗುಡುಗಿ ದರೆ ವಿಧಾನಸೌಧ ನಡುಗುವುದು ಎಂಬ ಮಾತಿತ್ತು ಅಂತಹ ಹುಟ್ಟು ಹೋರಾಟ ಗಾರರು ಬಿ.ಎಸ್.ಯಡಿಯೂರಪ್ಪ. ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾ ನಾಯಕ ಎಂದು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಯುವ ನಾಯಕ ರಾದ ವಿಕ್ರಮ ಅಯ್ಯಂಗಾರ್, ಬಿಜೆಪಿ ಮುಖಂಡರಾದ ಲೋಹಿತ್, ಸುಚೀಂದ್ರ, ಮಹೇಶ್, ಚಕ್ರಪ್ರಾಣಿ, ಪ್ರಶಾಂತ್, ಶಿವಪ್ರಕಾಶ್, ಜಯಪ್ಪ, ಕಡಕೊಳ ಜಗದೀಶ್, ಜೀವನ್ ಮುಂತಾದ ಅಭಿಮಾನಿ ಬಳಗದವರು ಕಾರ್ಯಕರ್ತರು ಸಾರ್ವಜನಿಕರು ಕಾರ್ಯ ಕ್ರಮದಲ್ಲಿ ಭಾಗವಹಿಸಿದ್ದರು.

Translate »