ಡಿ.೧೦ರಿಂದ ಬಹುರೂಪಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಚಾಲನೆ
ಮೈಸೂರು

ಡಿ.೧೦ರಿಂದ ಬಹುರೂಪಿ: ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಚಾಲನೆ

December 2, 2021
  • ಡಿ.೧೯ರವರೆಗೆ ಪ್ರತಿ ದಿನ ನಾಟಕ ಪ್ರದರ್ಶನ
  • `ತಾಯಿ’ ವಿಷಯದಡಿ ವಿಚಾರ ಸಂಕಿರಣ
  • ಭರದಿಂದ ಸಾಗಿದೆ ಸಿದ್ಧತಾ ಕಾರ್ಯ

ಮೈಸೂರು, ಡಿ.೧(ಎಂಟಿವೈ)- ಮೈಸೂರಿನ ರಂಗಾಯಣ ದಲ್ಲಿ ಡಿ.೧೦ರಿಂದ ೧೯ರವರೆಗೆ ನಡೆಯಲಿರುವ`ಬಹುರೂಪಿ ರಾಷ್ಟೀಯ ನಾಟಕೋತ್ಸವ-೨೦೨೧’ ಅನ್ನು ಪರಿಸರ ಪ್ರೇಮಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತುಳಸಿಗೌಡ ಉದ್ಘಾಟಿಸಲಿದ್ದು, ರಂಗಾಯಣದ ಆವರಣದಲ್ಲಿ ರಂಗ ವೈಭವದೊಂದಿಗೆ ಕಲಾ ಪ್ರಕಾರಗಳು ಅನಾವರಣಗೊಳ್ಳಲಿವೆ.

ರಂಗಾಯಣದ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಅವರು, ರಂಗಾಯಣದ ಆವರಣದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ, ಕೋವಿಡ್-೧೯ ಮುಂಜಾಗ್ರತಾ ಕ್ರಮ ದೊಂದಿಗೆ ೨೦೨೧ನೇ ಸಾಲಿನ ಬಹು ರೂಪಿ ನಾಟಕೋತ್ಸವವನ್ನು ಅರ್ಥ ಪೂರ್ಣವಾಗಿ ಆಚರಿಸಲು ನಿರ್ಧರಿಸಿ, ಸಿದ್ಧತಾ ಕಾರ್ಯ ನಡೆಸಲಾಗುತ್ತಿದೆ ಎಂದರು.

ಈ ಸಾಲಿನ ಬಹುರೂಪಿ ಯನ್ನು `ತಾಯಿ’ ಶೀರ್ಷಿಕೆಯಡಿ ನಡೆಸ ಲಾಗುತ್ತಿದೆ. ಬಹುತೇಕ ನಾಟಕಗಳು, ವಿಚಾರ ಸಂಕಿರಣ `ತಾಯಿ’ ವಿಷಯದಲ್ಲೇ ಕೇಂದ್ರೀ ಕೃತಗೊಂಡಿವೆ. ರಂಗಾಯಣ ಹಾಗೂ ಕಲಾಮಂದಿರ ಆವರಣದ ರಂಗಮಂದಿರಗಳಲ್ಲಿ ನಾಟಕೋತ್ಸವ ನಡೆಯಲಿದೆ. ೧೨, ೧೩ರಂದು `ತಾಯಿ’ ವಿಷಯದಡಿ ವಿಚಾರ ಸಂಕಿರಣ ಹಮ್ಮಿಕೊಳ್ಳಲಾಗಿದೆ. ಇಷ್ಟು ಮಾತ್ರವಲ್ಲದೆ ಚಲನಚಿತ್ರೋತ್ಸವ, ವಿಚಾರ ಸಂಕಿರಣ, ಪುಸ್ತಕ ಪ್ರದರ್ಶನ, ಕರಕುಶಲ ಪ್ರದರ್ಶನ, ಪ್ರಾತ್ಯಕ್ಷಿಕೆ, ಜಾನಪದ ಕಲಾ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮ ಜರುಗಲಿದೆ ಎಂದು ವಿವರಿಸಿದರು.

ರಂಗಾಯಣದ ವನರಂಗದಲ್ಲಿ ಡಿ.೧೧ರಂದು ಸಂಜೆ ೫.೩೦ಕ್ಕೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ಬಹು ರೂಪಿ ನಾಟಕೋತ್ಸವವನ್ನು ಉದ್ಘಾಟಿಸಲಿದ್ದಾರೆ. ಚಲನಚಿತ್ರ ನಟಿ ಹಾಗೂ ವಕೀಲರಾದ ಮಾಳವಿಕಾ ಅವಿನಾಶ್ ಆಶಯ ಭಾಷಣ ಮಾಡಲಿದ್ದಾರೆ. ಅದೇ ದಿನ ಬೆಳಗ್ಗೆ(ಡಿ.೧೧) ೧೧ ಗಂಟೆಗೆ ಚಲನಚಿತ್ರೋತ್ಸವವನ್ನು ಸುರೇಶ್ ಹೆಬ್ಳಿಕರ್ ಉದ್ಘಾ ಟಿಸಲಿದ್ದು, ಮುಖ್ಯ ಅತಿಥಿಗಳಾಗಿ ಕನ್ನಡ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಪಾಲ್ಗೊ ಳ್ಳಲಿದ್ದಾರೆ ಎಂದು ವಿವರಿಸಿದರು.

ಡಿ.೧೨ ರಂದು ಬೆಳಗ್ಗೆ ೧೦.೩೦ಕ್ಕೆ ವಿಚಾರ ಸಂಕಿರಣವನ್ನು ಸಾಹಿತಿ ನಾ.ಡಿಸೋಜ ಉದ್ಘಾಟಿಸಲಿದ್ದಾರೆ. ಲೇಖಕಿ ಡಾ. ವಿಜಯಲಕ್ಷ್ಮೀ ಬಾಳೆಕುಂದ್ರಿ, ವಿಶೇಷ ಆಹ್ವಾನಿತರಾಗಿ ಚೂಡಾ ರತ್ನಮ್ಮ ಹಾಗೂ ದಕ್ಷಿಣಾಮೂರ್ತಿ ಕೃಷ್ಣಕುಮಾರ್ ಪಾಲ್ಗೊ ಳ್ಳಲಿದ್ದಾರೆ. ಅಂದು ಮಧ್ಯಾಹ್ನ ೧೨.೧೫ಕ್ಕೆ `ಸೃಜನಶೀಲತೆ ಮತ್ತು ತಾಯ್ತನ’ ಕುರಿತು ರಂಗಕರ್ಮಿ ಅಭಿರುಚಿ ಚಂದು ಹಾಗೂ ಕವಯಿತ್ರಿ ಭುವನೇಶ್ವರಿ ಹೆಗಡೆ ವಿಷಯ ಮಂಡಿಸಲಿದ್ದಾರೆ. ಮಧ್ಯಾಹ್ನ ೨.೩೦ರ ವಿಚಾರಗೋಷ್ಠಿಯಲ್ಲಿ `ರೈತ ಮತ್ತು ತಾಯ್ತನ’ ಕುರಿತು ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಲೇಖಕಿ ಕೆ.ರಾಜಲಕ್ಷ್ಮೀ ವಿಷಯ ಮಂಡನೆ ಮಾಡಲಿದ್ದಾರೆ.

ಡಿ.೧೩ರಂದು ಬೆಳಗ್ಗೆ ೧೦ ರಿಂದ ಸಂಜೆ ೪ ಗಂಟೆಯವರೆಗೆ `ಮನುಕುಲದ ಒಳಿತಿಗೆ ಪ್ರಕೃತಿಯೋ, ಪ್ರಗತಿಯೋ?’ ವಿಷಯ ಕುರಿತು ವಿದ್ಯಾರ್ಥಿಗಳಿಂದ ಭಾಷಣ ಸ್ಪರ್ಧೆ ನಡೆಯಲಿದೆ. ಉತ್ತಮವಾಗಿ ಭಾಷಣ ಮಾಡುವ ಮೂವರು ವಿದ್ಯಾರ್ಥಿ ಗಳಿಗೆ ಮೊದಲ ಬಹುಮಾನ ೧೫ ಸಾವಿರ ರೂ, ೨ನೇ ಬಹು ಮಾನ ೧೦ ಸಾವಿರ ರೂ. ಹಾಗೂ ೩ನೇ ಬಹುಮಾನವಾಗಿ ೫ ಸಾವಿರ ರೂ.ಗಳನ್ನು ನೀಡಲಾಗುತ್ತದೆ. ಡಿ.೧೯ರಂದು ಸಮಾ ರೋಪ ಸಮಾರಂಭ ನಡೆಯಲಿದ್ದು, ಯುವಬ್ರಿಗೆಡ್ ಸಂಸ್ಥಾ ಪಕ ಚಕ್ರವರ್ತಿ ಸೂಲಿಬೆಲೆ ಪಾಲ್ಗೊಳ್ಳಲಿz್ದÁರೆ ಎಂದರು.

ಪ್ರದರ್ಶನಗೊಳ್ಳುವ ನಾಟಕ: ನಾಟಕೋತ್ಸವದಲ್ಲಿ ೧೨ ಹೊರ ರಾಜ್ಯದ ನಾಟಕಗಳು, ೨೧ ಕನ್ನಡ ಹಾಗೂ ಇತರೆ ಭಾಷೆಗಳ ನಾಟಕಗಳು ಸೇರಿದಂತೆ ಒಟ್ಟು ೩೩ ನಾಟಕಗಳು ಪ್ರದರ್ಶನಗೊಳ್ಳಲಿವೆ. ಹೊರ ರಾಜ್ಯದ ನಾಟಕಗಳು: ಬುಡ್ಡೇನೇ ಕಹ (ಹಿಂದಿ), ಸಹೀದ್ ಉದಮ್‌ಸಿಂಗ್ ಆಜಾ಼ದ್ (ಪಂಜಾಬಿ), ಕಾಜುಮರಮ್ (ತಮಿಳು), ಓಲ್ಡ್ ಮ್ಯಾನ್ ಆ್ಯಂಡ್ ಸೀ (ಮಲೆಯಾಳಂ), ರುಢಾಲಿ (ರಾಜಾಸ್ಥಾನ), ಲಹೇರೋಂಕ ರಾಜಹಂಸ (ಹಿಂದಿ), ಸೂರ್ಜ್ಯಾಸ್ತುç ಸೂರ್ಜೋದಯ್ (ಒರಿಯಾ), ಅಶಾಂತಿ ಪರ್ವ (ಮರಾಠಿ), ಮನಲೋ ಮನಯಾಟ (ತೆಲುಗು), ಮುಂಬೈನ ಕರ್ನಾಟಕ ಸಂಘ ತಂಡದಿAದ ಆಟಿ ತಿಂಗಳ್ದ ಒಂಜಿ ದಿನ (ತುಳು) ನಾಟಕ ಗಳು ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು.

ಕನ್ನಡ ಹಾಗೂ ಇತರೆ ಭಾಷೆ ನಾಟಕಗಳು: ವೆಲ್ಕಂ ಜಾನಕಿ ಕಂ ಜಿಂಗಾನಿಯಾ, ಕಾಮರೂಪಿಗಲ್, ಉಚ್ಛಿಷ್ಠ, ಶಕ್ತಿ ೧.೦, ಪ್ರಾಜೆಕ್ಟ್ ನಗ್ನ, ಮತ್ತೆ ಮುಖ್ಯಮಂತ್ರಿ, ಏಸೂರ ಕೊಟ್ಟರೂ ಈಸೂರ ಬಿಡೆವು, ಈಡಿಪಸ್, ನೀನೇ ಬಸಲಿಂಗಿ, ಜಾನಪೋಳ, ಹಕ್ಕಿಕತೆ, ಲಾಕ್‌ಡೌನ್, ಶ್ರೀ ಕೃಷ್ಣ ರಾಯಭಾರ, ಸಂಕ್ರಾಂತಿ, ಚಾವುಂಡರಾಯ, ಸಾಮ್ರಾಟ್ ಅಶೋಕ ಕನ್ನಡ ನಾಟಕಗಳು, ಏಕ್ಲೊ ಅನೇಕ್ಲೊ-ಕರ್ಮದೀನ್ ಕೊಂಕಣಿ ನಾಟಕ ಮತ್ತು ದ ಸ್ಕೆö್ವÊರ್ ರೂಟ್ ಆಫ್ ಎ ಸಾನೆಟ್ (ಇಂಗ್ಲಿಷ್) ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.

ರಾಮ ರಾವಣ ಯುದ್ಧ (ಬಯಲಾಟ), ವೀರ ವಿರಾಗಿ ಬಾಹುಬಲಿ (ದೊಡ್ಡಾಟ), ಚಕ್ರವ್ಯೂಹ (ಯಕ್ಷಗಾನ) ಹಾಗೂ ಗೊಂಬೆಯಾಟ ಪ್ರದರ್ಶನ ಏರ್ಪಡಿಸಲಾಗಿದೆ. ರಂಗಾ ಯಣದ ನಾಟಕಗಳಾದ ಪರ್ವ, ಸೂತ್ರಧಾರ, ಮೂಕನ ಮಕ್ಕಳು, ಚಿತ್ರಪಟ, ಚಂದ್ರಿಗಿರಿಯ ತೀರದಲ್ಲಿ ಪ್ರದರ್ಶನ ಗೊಳ್ಳಲಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಂಗಾಯಣ ಜಂಟಿ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ, ನಾಟಕೋತ್ಸವದ ಪ್ರಧಾನ ಸಂಚಾಲಕ ಅಂಜು ಸಿಂಗ್, ಹಿರಿಯ ಕಲಾವಿದ ಪ್ರಶಾಂತ್ ಹಿರೇಮಠ್, ಗೀತಾ ಮೊಂಟಡ್ಕೆ, ರಾಮನಾಥ್ ಇದ್ದರು.

ಪೋಸ್ಟರ್ ಬಿಡುಗಡೆ: ರಂಗಾಯಣ ವತಿಯಿಂದ ಡಿ.೧೦ ರಿಂದ ೧೯ರವರೆಗೆ ಆಯೋಜಿಸಿರುವ `ಬಹುರೂಪಿ ರಾಷ್ಟಿçÃಯ ನಾಟಕೋತ್ಸವ-೨೦೨೧’ದ ಪೋಸ್ಟರ್ ಬಿಡುಗಡೆ ಮಾಡಲಾ ಯಿತು. ರಂಗಾಯಣದ ಅಂಗಳದಲ್ಲಿ ಆಯೋಜಿಸಿದ್ದ ಕಾರ್ಯ ಕ್ರಮದಲ್ಲಿ ರಂಗಾಯಣದ ಮಹಿಳಾ ಕಲಾವಿದರು ಸಾರೋ ಟಿನ ಮೇಲೆ `ತಾಯಿ’ ಶೀರ್ಷಿಕೆಯಡಿ ಬಹುರೂಪಿಯ ಪೋಸ್ಟರ್ ಗಳನ್ನು ಪ್ರದರ್ಶಿಸುವ ಮೂಲಕ ಬಿಡುಗಡೆ ಮಾಡಿದರು.

Translate »