- ಕಂದಾಯ ಸಚಿವ ಆರ್.ಅಶೋಕ್ ಭರವಸೆ
- ದಾಖಲೆ ಪತ್ರಗಳ ಪರಿಶೀಲಿಸಿ ತಕ್ಷಣ ಪರಿಹಾರ ನೀಡಲು ಸೂಚನೆ
ಮೈಸೂರು, ಡಿ.೧(ಎಂಕೆ)- ರಾಜ್ಯದಲ್ಲಿ ಸುರಿದ ಭಾರೀ ಮಳೆಗೆ ೩೯,೮೧೫ ಮನೆಗಳು ಕುಸಿದಿದ್ದು, ೨೦೪ ಕೋಟಿ ರೂ. ಪರಿಹಾರ ನೀಡಲಾಗಿದೆ. ಮಳೆ ಯಿಂದ ಉಂಟಾದ ಸಂಪೂರ್ಣ ಮನೆ ಹಾನಿಗೆ ೫ ಲಕ್ಷ ಪರಿಹಾರ ಕೊಡಬೇಕು. ಈ ಪೈಕಿ ಹಾನಿ ಗೀಡಾದ ಮನೆಗಳನ್ನು ಗುರುತಿಸಿ ೨-೩ ದಿನದಲ್ಲೇ ೧ ಲಕ್ಷ ರೂ. ಪರಿಹಾರವನ್ನು ತಕ್ಷಣದ ಅಗತ್ಯಗಳಿ ಗಾಗಿ ಸಂತ್ರಸ್ತರಿಗೆ ನೀಡಬೇಕು. ದಾಖಲೆಗಳನ್ನು ಪರಿಶೀಲಿಸಿದ ಬಳಿಕ ಉಳಿಕೆ ಪರಿಹಾರ ಮೊತ್ತ ವನ್ನು ನೀಡಲು ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.
ಮೈಸೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧ ವಾರ ಮಳೆ ಹಾನಿ ಹಾಗೂ ಕೋವಿಡ್ ಕುರಿತು ಅಧಿಕಾರಿಗಳೊಂದಿಗೆ ನಡೆಸಿದ ಪರಿಶೀಲನಾ ಸಭೆಯ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಡಿಸಾಸ್ಟರ್ ಮ್ಯಾನೇಜ್‌ಮೆಂಟ್(ವಿಪತ್ತು ನಿರ್ವ ಹಣೆ)ನ ಉಪಾಧ್ಯಕ್ಷನಾಗಿರುವ ಹಿನ್ನೆಲೆ ಮಳೆಹಾನಿ ಹಾಗೂ ಕೋವಿಡ್ ನಿಯಂತ್ರಣಕ್ಕೆ ಸಂಬAಧಿಸಿದAತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ. ಮಳೆ ಹಾನಿಗೆ ಕೆಲವು ಕಡೆ ಪರಿಹಾರವಾಗಿ ೩ ಲಕ್ಷ ನೀಡ ಲಾಗಿತ್ತು. ಈ ಪರಿಹಾರ ಮೊತ್ತವನ್ನು ೫ ಲಕ್ಷಕ್ಕೆ ಹೆಚ್ಚಿಸಲಾಗಿದೆ ಎಂದರು. ೨೦೧೯-೨೦ರಲ್ಲಾದ ಮಳೆ ಹಾನಿಗೆ ಸರ್ಕಾರ ಪರಿಹಾರ ನೀಡಿಲ್ಲ ಎಂದು ವಿರೋಧ ಪಕ್ಷದವರು ಹೇಳುತ್ತಿದ್ದರು. ಆದರೆ ರಾಜ್ಯ ಸರ್ಕಾರ ಇಲ್ಲಿಯವರೆಗೆ ೨೦೦೩ ಕೋಟಿ ರೂ. ಪರಿಹಾರ ನೀಡಿದೆ ಎಂದರು.
ಮೈಸೂರು ಜಿಲ್ಲೆಯಲ್ಲಿ ೧,೨೮೮ ಹೆಕ್ಟೇರ್ ಪ್ರದೇಶ ದಲ್ಲಿ ಬೆಳೆದ ರಾಗಿ, ಭತ್ತ ಸೇರಿದಂತೆ ಇನ್ನಿತರ ಬೆಳೆಗಳು ಮಳೆಗೆ ಹಾನಿಯಾಗಿದ್ದು, ೨೨೯ ಕೋಟಿ ರೂ.ನಷ್ಟು ಹಾನಿಯಾಗಿದೆ ಎಂದು ಜಿಲ್ಲಾಧಿಕಾರಿ ಗಳು ವರದಿ ನೀಡಿದ್ದಾರೆ. ಮಳೆಯಿಂದ ಮನೆ ಕಳೆದುಕೊಂಡವರಿಗೆ ಒಂದೆರಡು ದಿನಗಳಲ್ಲಿ ೧ ಲಕ್ಷ ರೂ. ಪರಿಹಾರ ನೀಡುವಂತೆ ವ್ಯವಸ್ಥೆ ಮಾಡಿ ದ್ದೇವೆ. ಅದರಂತೆ ಬೆಳೆ ಹಾನಿಯಿಂದ ಸಂಕಷ್ಟದಲ್ಲಿ ರುವ ರೈತರಿಗೆ ಕೂಡಲೇ ಪರಿಹಾರ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಮೈಸೂರು ನಗರ ಮತ್ತು ಜಿಲ್ಲೆ ಸೇರಿ ಕೊರೊನಾ ಲಸಿಕೆ ವಿತರಣೆಯಲ್ಲಿ ಶೇ.೯೩ ಮೊದಲ ೨ನೇ ಡೋಸ್ ಶೇ.೯೭ ರಷ್ಟು ನೀಡಲಾಗಿದೆ. ಡಿಸೆಂಬರ್ ತಿಂಗಳ ಅಂತ್ಯದೊಳಗೆ ೨ನೇ ಡೋಸ್ ಲಸಿಕೆ ವಿತರಣೆ ಶೇ.೯೭ ಕ್ಕೆ ಹಾಗೂ ಮೊದಲ ಡೋಸ್ ಲಸಿಕೆಯನ್ನು ಶೇ.೧೦೦ ರಷ್ಟು ಮಾಡಲಾಗುವುದು ಎಂದು ತಿಳಿಸಿದ್ದಾರೆ. ಪ್ರತಿನಿತ್ಯ ೩೦-೩೫ ಸಾವಿರ ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದು ಸಹ ಹೇಳಿದ್ದಾರೆ ಎಂದು ಮಾಹಿತಿ ನೀಡಿದರು.
೨೦೦೦ ಬೆಡ್‌ಗಳ ಸಿದ್ಧತೆ: ಸೌತ್ ಆಫ್ರಿಕಾ, ಇಸ್ರೇಲ್ ಸೇರಿದಂತೆ ಇನ್ನಿತರೆ ದೇಶಗಳಲ್ಲಿ ಕೊರೊನಾ ರೂಪಾಂತರಿ ವೈರಸ್(ಒಮಿಕ್ರಾನ್) ಹೆಚ್ಚಾಗಿ ಹರಡುತ್ತಿದ್ದು, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಲಾಗಿದೆ. ಇದು ಮೊದಲಿ ಗಿಂತ ೫ ಪಟ್ಟು ವೇಗವಾಗಿ ಹರಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಕೊರೊನಾ ೨ನೇ ಅಲೆ ವೇಳೆ ಎದುರಾದ ಸಮಸ್ಯೆಗಳು ಮತ್ತೆ ಎದುರಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಮೈಸೂರಿನಲ್ಲಿ ೧೭೨೦ ಆಕ್ಸಿಜನ್ ಬೆಡ್‌ಗಳು, ಐಸಿಯು ಬೆಡ್‌ಗಳು ಸೇರಿ ಒಟ್ಟು ೨೦೦೦ ಬೆಡ್‌ಗಳನ್ನು ಈಗಾಗಲೇ ಸಿದ್ಧಪಡಿ ಸಲಾಗಿದೆ. ಕಳೆದ ಬಾರಿ ಕೇವಲ ೧೦೦-೧೫೦ರಷ್ಟಿದ್ದ ಆಕ್ಸಿಜನ್ ಬೆಡ್‌ಗಳನ್ನು ೧೭೦೦ಕ್ಕೆ ಹೆಚ್ಚಿಸಲಾಗಿದ್ದು, ಸಿದ್ಧಪಡಿಸಿರುವ ಎಲ್ಲಾ ಬೆಡ್‌ಗಳನ್ನು ಮತ್ತೊಮ್ಮೆ ಪರಿಶೀಲನೆ ಮಾಡುವಂತೆ ಜಿಲ್ಲಾ ಆರೋಗ್ಯಾ ಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ತಪಾಸಣೆ: ಕೇರಳ ರಾಜ್ಯದಿಂದ ಬರುವವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆ ಬಾವಲಿ ಚೆಕ್‌ಪೋಸ್ಟ್ನಲ್ಲಿ ತೀವ್ರ ಕಟ್ಟೆಚ್ಚರ ವಹಿಸು ವಂತೆ ಸೂಚಿಸಿದ್ದು, ದಿನದ ೨೪ ಗಂಟೆಯೂ ತಪಾ ಸಣೆ ನಡೆಸುವಂತೆ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಯೊಬ್ಬರಿಗೂ ಆರ್‌ಟಿಪಿಸಿಆರ್ ಪರೀಕ್ಷೆ ನೆಗೆಟಿವ್ ವರದಿ ನೋಡಿ ಬಿಡಲಾಗುತ್ತಿದೆ. ನಾಡಿನ ಜನರ ರಕ್ಷಣೆ ಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲಾ ಬಗೆಯ ಅಗತ್ಯ ಕ್ರಮಗಳನ್ನು ತೆಗದುಕೊಳ್ಳಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಡಿಸಿ ಡಾ.ಮಂಜುನಾಥಸ್ವಾಮಿ, ಡಿಹೆಚ್‌ಓ ಡಾ.ಕೆ.ಹೆಚ್. ಪ್ರಸಾದ್, ಎಂ.ಎA.ಸಿ & ಆರ್.ಐ ನಿರ್ದೇಶಕ ಡಾ.ನಂಜರಾಜ್ ಮತ್ತಿತರರು ಸಭೆಯಲ್ಲಿದ್ದರು.