ಶಾಸಕ ವಿಶ್ವನಾಥ್ ಹತ್ಯೆಗೆ ಹಿಂದಿನಿAದಲೂ ಪ್ರಯತ್ನ ನಡೆದಿದೆ: ಅಶೋಕ್ ಸಂಶಯ
ಮೈಸೂರು

ಶಾಸಕ ವಿಶ್ವನಾಥ್ ಹತ್ಯೆಗೆ ಹಿಂದಿನಿAದಲೂ ಪ್ರಯತ್ನ ನಡೆದಿದೆ: ಅಶೋಕ್ ಸಂಶಯ

December 2, 2021

ಮೈಸೂರು,ಡಿ.೧(ಎಂಕೆ)- ಶಾಸಕ ಎಸ್.ಆರ್. ವಿಶ್ವನಾಥ್ ಕೊಲೆ ಸಂಚು ದೊಡ್ಡ ಷಡ್ಯಂತ್ರ ವಾಗಿದ್ದು, ಬಹಳ ಹಿಂದಿನಿAದಲೂ ಕೊಲೆ ಪ್ರಯತ್ನ ನಡೆದಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ಸಂಶಯ ವ್ಯಕ್ತಪಡಿಸಿದರು.

ಮೈಸೂರು ಡಿಸಿ ಕಚೇರಿ ಬಳಿ ವಿಶ್ವನಾಥ್ ಕೊಲೆ ಸಂಚು ಕುರಿತು ಮಾಧ್ಯಮಗಳಿಗೆ ಪ್ರತಿ ಕ್ರಿಯಿಸಿದ ಅವರು, ವಿಶ್ವನಾಥ್ ಅವರು ಈಗಾ ಗಲೇ ರಾಜಾನುಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಕೊಲೆ ಸಂಚು ಕುರಿತು ಮಾತನಾಡಿರುವ ಆಡಿಯೋ ಕೇಳಿದರೆ, ಇದು ಇವತ್ತು ನಿನ್ನೆ ಮಾಡಿರುವ ಸಂಚಲ್ಲ. ಬಹಳ ಹಿಂದಿನಿಂದಲೇ ಕೊಲೆ ಪ್ರಯತ್ನ ನಡೆದಿದೆ ಎಂದು ಸಂಶಯ ವ್ಯಕ್ತಪಡಿಸಿದರು.

ರಾಜಕೀಯವಾಗಿ ದೊಡ್ಡ ದೊಡ್ಡ ನಾಯಕ ರೊಂದಿಗೆ ಸಂಪರ್ಕ ಹೊಂದಿರುವ ವಿಶ್ವನಾಥ್ ಬಿಡಿಎ ಮುಖ್ಯಸ್ಥರೂ ಆಗಿದ್ದಾರೆ. ಅವರ ಮೇಲೆ ನಡೆದಿರುವ ಕೊಲೆ ಸಂಚು ಗಮನಿಸಿದರೆ ನಾವು ಗಳು ಎಚ್ಚರಿಕೆಯಿಂದ ಇರಬೇಕು ಎನ್ನಿಸುತ್ತಿದೆ. ರಾಜಕೀಯ ಸ್ಪರ್ಧೆ ಬೇರೆ. ಆದರೆ ಕೊಲೆ ಮಾಡು ವುದು ಅಪರಾಧ. ಕೊಲೆ ಸಂಚಿನ ಹಿಂದೆ ಯಾರಿದ್ದಾರೆ? ಸಂಚಿಗೆ ಯಾರ ಕುತಂತ್ರವಿದೆ ಎಂಬುದನ್ನು ಬಯಲು ಮಾಡಲಾಗುವುದು. ಈ ಕುರಿತು ಪೊಲೀಸ್ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.

ನನಗಿರುವ ಮಾಹಿತಿ ಪ್ರಕಾರ ಬೇರೆ ರಾಜ್ಯದ ಸುಪಾರಿ ಹಂತಕರನ್ನು ಕರೆದುಕೊಂಡು ಬಂದು ಇಲ್ಲಿ ವಿಶ್ವನಾಥ್ ಅವರನ್ನು ಮುಗಿಸಬೇಕು ಎನ್ನುವ ಮಾತುಗಳನ್ನು ಕೇಳಿಪಟ್ಟಿದ್ದೇನೆ. ಇದೊಂದು ದೊಡ್ಡ ಷಡ್ಯಂತ್ರವಾಗಿದೆ. ಈ ಕುರಿತು ಮುಖ್ಯ ಮಂತ್ರಿಗಳ ಜೊತೆಗೆ ಮಾತನಾಡುತ್ತೇನೆ. ಈ ರೀತಿ ಗೂಂಡಾಗಿರಿ ಮೂಲಕ ರಾಜಕೀಯದಲ್ಲಿ ಬೆಳೆಯಲು ಯತ್ನಿಸುವವರನ್ನು ಮಟ್ಟ ಹಾಕು ತ್ತೇವೆ. ನಾನು ಪೊಲೀಸರ ಜೊತೆಗೆ ನಿರಂತರ ಸಂಪರ್ಕದಲ್ಲಿದ್ದೇನೆ ಎಂದು ಹೇಳಿದರು.

ಕಾಂಗ್ರೆಸ್‌ನವರು ಇಂತಹವರಿಗೆ ಬೆಂಬಲ ನೀಡಬಾರದು. ಯಾಕೆಂದರೆ ಸಂಚು ರೂಪಿಸಿ ದವರು ವಿಶ್ವನಾಥ್ ವಿರುದ್ಧ ೨ ಬಾರಿ ಪ್ರತಿಸ್ಪರ್ಧಿ ಯಾಗಿದ್ದವರು ಎಂದು ಕೇಳಲ್ಪಟ್ಟಿದ್ದೇನೆ. ಇದು ತನಿಖೆಯಾಗಬೇಕು. ಇವರು ಯಾರೇ ಇದ್ದರೂ ಹೊರತರುತ್ತೇವೆ. ಇಂತಹ ಗೂಂಡಾಗಿರಿ, ಸಮಾಜ ಘಾತುಕ ವ್ಯಕ್ತಿಗಳನ್ನು ಮಟ್ಟ ಹಾಕುತ್ತೇವೆ ಎಂದರು.

Translate »