ಮಳೆಗಾಗಿ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ
ಮೈಸೂರು

ಮಳೆಗಾಗಿ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ

June 7, 2019

ಮೈಸೂರು: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗುರುವಾರ ಮೈಸೂರು ಸೇರಿದಂತೆ ರಾಜ್ಯದ ಎಲ್ಲೆಡೆ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ, ವರುಣಹೋಮ ಸೇರಿದಂತೆ ವಿವಿಧ ಪೂಜೆ ನಡೆಸಿ ದೇವರ ಮೊರೆ ಹೋಗಲಾಯಿತು.

ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇ 31ರಂದು ಸುತ್ತೋಲೆ ಹೊರಡಿಸಿ, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ಜೂ.6 ರಂದು ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆ ನಡೆಸುವಂತೆ ಆದೇಶಿಸಿತ್ತು. ಈ ಹಿನ್ನೆಲೆ ಯಲ್ಲಿ ಇಂದು ಬೆಳಿಗ್ಗೆ ವಿವಿಧ ಪೂಜೆ ನೆರವೇರಿಸಿ, ಮಳೆ ಕರುಣಿಸುವಂತೆ ದೇವರಲ್ಲಿ ಪ್ರಾರ್ಥಿಸಲಾ ಯಿತು. ಮೈಸೂರು ಜಿಲ್ಲೆಯಲ್ಲಿ 1287 ದೇವಾ ಲಯಗಳು ಮುಜರಾಯಿ ಇಲಾಖೆಗೆ ಸೇರಿವೆ. ಅವುಗಳಲ್ಲಿ ಮೈಸೂರಿನ ಕೆಲವು ಪ್ರಮುಖ ದೇವಾಲಯಗಳು ಹಾಗೂ ತಾಲೂಕು ಕೇಂದ್ರ ಗಳಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ಪರ್ಜನ್ಯ ಜಪ ನೆರವೇರಿಸಲಾಯಿತು.

ಚಾಮುಂಡಿಬೆಟ್ಟದಲ್ಲಿ: ನಾಡಿನ ಅಧಿದೇವತೆ ಚಾಮುಂಡಿಬೆಟ್ಟದ ಚಾಮುಂಡೇಶ್ವರಿ ದೇವಾ ಲಯದಲ್ಲಿ ಇಂದು ಬೆಳಿಗ್ಗೆ ಬ್ರಾಹ್ಮೀ ಮುಹೂರ್ತ ದಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು. ದೇವಾಲಯದ ಪ್ರಧಾನ ಆಗಮಿಕ ಡಾ.ಎನ್. ಶಶಿಶೇಖರ್ ದೀಕ್ಷಿತ್
ನೇತೃತ್ವದಲ್ಲಿ ದೇವಾಲಯದ ಆಡ ಳಿತಾಧಿಕಾರಿ ಕೆ.ಎಂ.ಪ್ರಸಾದ್ ಸಮ್ಮುಖದಲ್ಲಿ ಮಣೆಗಾರ ನಾಗರಾಜು ಹಾಗೂ ಇನ್ನಿತರರ ಉಪಸ್ಥಿತಿಯಲ್ಲಿ ದೇವಾಲಯದ ಪ್ರಾಂಗಣದಲ್ಲಿರುವ ಹೋಮಕುಂಡದಲ್ಲಿ ಮುಂಜಾನೆ 5ಗಂಟೆಗೆ ಪೂಜಾ ಕಾರ್ಯ ಆರಂಭಿಸಲಾಯಿತು. ಗಣಪತಿ ಪೂಜೆ, ಪುಣ್ಯಾಹ ನೆರವೇರಿಸಲಾಯಿತು. ನಂತರ ಕಳಸ ಪ್ರತಿಷ್ಠಾಪಿಸಿ ಪೂಜಿಸಲಾ ಯಿತು. ಬಳಿಕ ಅಗ್ನಿ ಜನನ ಪೂಜೆ ಮಾಡಿ ಪರ್ಜನ್ಯ ಜಪ ನೆರವೇರಿಸಲಾಯಿತು. ಅಂತಿಮವಾಗಿ ವರುಣ ಹೋಮ ಮಾಡಿ, ವಿಶೇಷ ಪೂಜೆ ಪೂರ್ಣಗೊಳಿಸಲಾಯಿತು.

ಮಳೆಗಾಗಿ ವಿಶೇಷ ಪೂಜೆ: ಪರ್ಜನ್ಯ ಜಪ ಕುರಿತಂತೆ ಚಾಮುಂಡೇಶ್ವರಿ ದೇವಾ ಲಯದ ಪ್ರಧಾನ ಆಗಮಿಕ ಡಾ.ಎನ್. ಶಶಿಶೇಖರ್ ದೀಕ್ಷಿತ್ `ಮೈಸೂರು ಮಿತ್ರ’ ನೊಂದಿಗೆ ಮಾತನಾಡಿ, ಸರ್ಕಾರಿ ಆದೇಶ ದಂತೆ ಇಂದು ಬೆಳಿಗ್ಗೆ 5 ಗಂಟೆಯಿಂದ 7.30ರವರೆಗೆ ದೇವಾಲಯದಲ್ಲಿ ಪರ್ಜನ್ಯ ಜಪ ನೆರವೇರಿಸಿ ಮಳೆಗಾಗಿ ಪ್ರಾರ್ಥಿಸ ಲಾಗಿದೆ. ಸಕಾಲಕ್ಕೆ ಮಳೆ ಬಂದು, ರೈತರ ಸಂಕಷ್ಟ ದೂರವಾಗಲಿ. ಜನ-ಜಾನು ವಾರುಗಳಿಗೆ ಕುಡಿಯುವ ನೀರು, ಆಹಾರ ದೊರೆಯಲು ದೇವರ ಅನುಗ್ರಹ ಲಭ್ಯವಾಗಲಿ. ವರುಣ ದೇವನ ಮುನಿಸು ದೂರವಾಗಿ ಮಳೆ ಬಂದು ನಾಡು ಸಮೃದ್ಧಿಯಾಗಲೆಂದು ಪ್ರಾರ್ಥಿಸಿ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ದೇವಾಲಯ ಪ್ರಾಂಗಣದಲ್ಲಿ ನಡೆದ ಪರ್ಜನ್ಯ ಜಪದಲ್ಲಿ ದೇವಾಲಯಕ್ಕೆ ಬಂದಿದ್ದ ಹಲವು ಭಕ್ತರು ಪಾಲ್ಗೊಂಡು ಮಳೆಗಾಗಿ ಪ್ರಾರ್ಥಿಸಿದರು. ಹೋಮ ಪೂರ್ಣಗೊಂಡ ಬಳಿಕ ಭಕ್ತರು ಹೋಮ ಕುಂಡದಲ್ಲಿದ್ದ ವಿಭೂತಿಯನ್ನು ಪ್ರಸಾದವಾಗಿ ಸ್ವೀಕರಿಸಿ ಮನೆಗೆ ಕೊಂಡೊಯ್ದರು. ಪರ್ಜನ್ಯ ಜಪ, ಹೋಮದ ವೇಳೆ ಮಂಗಳವಾದ್ಯ ಮೊಳಗಿಸಿ, ನಾಡದೇವಿಯನ್ನು ಆರಾಧಿಸಲಾಯಿತು.

ಅರಮನೆಯಲ್ಲಿ: ಮೈಸೂರು ಅರಮನೆ ಆವರಣದಲ್ಲಿರುವ ತ್ರಿನೇಶ್ವರಸ್ವಾಮಿ ದೇವಾ ಲಯದಲ್ಲಿಯೂ ಪರ್ಜನ್ಯ ಜಪ ನೆರವೇರಿಸಲಾಯಿತು. ಅರಮನೆ ಆವರಣದಲ್ಲಿರುವ ಪ್ರಮುಖ ದೇವಾಲಯಗಳಲ್ಲಿ ತ್ರಿನೇಶ್ವರಸ್ವಾಮಿ ದೇವಾಲಯ ಒಂದಾಗಿದ್ದು, ಶಿವರಾತ್ರಿ ಹಬ್ಬದ ದಿನ ಚಿನ್ನದ ಕೊಳಗ ಧರಿಸಿ ಪೂಜಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಸರ್ಕಾರಿ ಆದೇಶದ ಅನುಸಾರ ಮಳೆಗಾಗಿ ಅರ್ಚಕರಾದ ಶ್ರೀಹರಿ ಹಾಗೂ ಸಂತಾನ್ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದಲ್ಲದೆ ಮಹಾ ಬಲೇಶ್ವರ ದೇವಾಲಯ, ಉತ್ತನಹಳ್ಳಿಯಲ್ಲಿರುವ ಶ್ರೀ ಜ್ವಾಲಾಮುಖಿ ತ್ರಿಪುರಸುಂದರಿ ದೇವಿ, ನಂಜನಗೂಡಿನ ಶ್ರೀಕಂಠೇಶ್ವರ, ಮುಡುಕುತೊರೆ ಮಲ್ಲಿಕಾರ್ಜುನಸ್ವಾಮಿ ದೇವಾಲಯ, ತಲಕಾಡು, ಟಿ.ನರಸೀಪುರ, ಶ್ರೀರಂಗಪಟ್ಟಣ ಸೇರಿದಂತೆ ವಿವಿಧೆಡೆ ಪ್ರಮುಖ ದೇವಾಲಯಗಳಲ್ಲಿ ಪರ್ಜನ್ಯ ಜಪ, ಹೋಮ ನೆರವೇರಿಸಲಾಯಿತು.

ಋಷ್ಯಶೃಂಗನಿಗೆ ಡಿಕೆಶಿ ಪರ್ಜನ್ಯ ಪೂಜೆ

ಚಿಕ್ಕಮಗಳೂರು: ಮಳೆಗಾಗಿ ಪ್ರಾರ್ಥಿಸಿ ಸರ್ಕಾರದ ವತಿ ಯಿಂದ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಪಿ.ಟಿ.ಪರ ಮೇಶ್ವರ್ ನಾಯಕ್ ಅವರು ಜಿಲ್ಲೆಯ ಶೃಂಗೇರಿ ತಾಲೂಕು ಕಿಗ್ಗಾದ ಋಷ್ಯಶೃಂಗೇಶ್ವರ ದೇಗುಲದಲ್ಲಿ ಗುರುವಾರ ವಿಶೇಷ ಪರ್ಜನ್ಯ ಪೂಜೆ ಸಲ್ಲಿಸಿದರು. ರಾಜ್ಯದಲ್ಲಿ ಉತ್ತಮ ಮಳೆಯಾ ಗಲಿ ಎಂದು ಪ್ರತಿ ವರ್ಷದ ಪ್ರತೀತಿಯಂತೆ ಚಿಕ್ಕಮಗಳೂ ರಿನ ಕಿಗ್ಗಾದ ಋಷ್ಯಶೃಂಗೇಶ್ವರ ದೇವಾಲಯದಲ್ಲಿ ಪರ್ಜನ್ಯ ಪೂಜೆ ಸಲ್ಲಿಸಿದ್ದೇವೆ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರು ಟ್ವೀಟ್ ಮಾಡಿದ್ದಾರೆ. ಸುಮಾರು 2 ಗಂಟೆಗೂ ಕಾಲ ನಡೆದ ವಿಶೇಷ ಪೂಜೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಮತ್ತು ಪರಮೇಶ್ವರ್ ನಾಯ್ಕ್ ಪಾಲ್ಗೊಂಡು ಪ್ರಾರ್ಥನೆ ಸಲ್ಲಿಸಿದರು. ಈ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್.ಎಂ. ಕೃಷ್ಣ ಸಹ ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದ್ದರು. ಅವರ ಆಡಳಿತಾ ವಧಿಯಲ್ಲಿ ರಾಜ್ಯದಲ್ಲಿ ಭೀಕರ ಬರಗಾಲ ಎದುರಾಗಿತ್ತು.

ಮಡಿಕೇರಿಯಲ್ಲಿ, ಬೆಳಗಾವಿಯ ಸವದತ್ತಿಯ ಶ್ರೀ ರೇಣುಕಾ ದೇವಿ ಯಲ್ಲಮ್ಮದೇವಿ ಗುಡ್ಡದಲ್ಲಿ,ಮಡಿಕೇರಿ, ಚಾಮ ರಾಜನಗರದ ಮಲೆ ಮಹದೇಶ್ವರ ಬೆಟ್ಟದಲ್ಲಿ, ರಾಮನಗರ ದಲ್ಲಿ ಮಳೆಗಾಗಿ ಸರ್ಕಾರದಿಂದ ಜಲಾಮೃತ ಅಭಿಷೇಕ, ಪಂಚಾಮೃತ ಅಭಿಷೇಕ, ಹೋಮ, ಹವನ, ವಿಶೇಷ ಪೂಜೆ ಇಂದು ಬೆಳಗ್ಗೆ 6 ಗಂಟೆಯಿಂದಲೇ ನಡೆಯಿತು. ಕಳೆದ ವರ್ಷ ಕೂಡ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ನೀರಿಗೆ ತತ್ವಾರ ಕಂಡುಬಂದು ಬರಗಾಲ ಉಂಟಾಗಿತ್ತು. ಬೆಳೆಗಳು ರೈತರಿಗೆ ಕೈಕೊಟ್ಟಿದ್ದವು. ಈ ಹಿನ್ನೆಲೆಯಲ್ಲಿ ಮಳೆಗಾಲದ ಆರಂಭದ ಲ್ಲಿಯೇ ಸರ್ಕಾರ ಎಚ್ಚೆತ್ತುಕೊಂಡು ದೇವರ ಮೊರೆ ಹೋಗಿದೆ.

ರಾಜ್ಯದ ಹಲವು ಭಾಗಗಳಲ್ಲಿ ನೀರಿಗಾಗಿ ತೀವ್ರ ಹಾಹಾಕಾರ ಉಂಟಾಗಿದ್ದು, ಜನ, ಜಾನುವಾರುಗಳು ನೀರು ಸಿಗದೆ ಪರದಾಡುತ್ತಿವೆ. ಕೆಲವೆಡೆ ಕಳೆದೆರಡು ದಿನಗಳಿಂದ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದೆ. ಜೂನ್ 8 ರಂದು ಮುಂಗಾರು ಮಾರುತಗಳು ರಾಜ್ಯವನ್ನು ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Translate »