Tag: Chamundi Hill Temple

ಮಳೆಗಾಗಿ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ
ಮೈಸೂರು

ಮಳೆಗಾಗಿ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ

June 7, 2019

ಮೈಸೂರು: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಮಳೆಗಾಗಿ ಪ್ರಾರ್ಥಿಸಿ ಗುರುವಾರ ಮೈಸೂರು ಸೇರಿದಂತೆ ರಾಜ್ಯದ ಎಲ್ಲೆಡೆ ಮುಜರಾಯಿ ದೇವಾಲಯಗಳಲ್ಲಿ ಪರ್ಜನ್ಯ ಜಪ, ವರುಣಹೋಮ ಸೇರಿದಂತೆ ವಿವಿಧ ಪೂಜೆ ನಡೆಸಿ ದೇವರ ಮೊರೆ ಹೋಗಲಾಯಿತು. ಮಳೆ ಕೊರತೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೇ 31ರಂದು ಸುತ್ತೋಲೆ ಹೊರಡಿಸಿ, ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಬರುವ ರಾಜ್ಯದ ಎಲ್ಲಾ ದೇವಾಲಯಗಳಲ್ಲಿ ಮಳೆಗಾಗಿ ಪ್ರಾರ್ಥಿಸಿ ಜೂ.6 ರಂದು ಪರ್ಜನ್ಯ ಜಪ ಹಾಗೂ ವಿಶೇಷ ಪೂಜೆ ನಡೆಸುವಂತೆ ಆದೇಶಿಸಿತ್ತು. ಈ ಹಿನ್ನೆಲೆ ಯಲ್ಲಿ ಇಂದು…

ಮೂವರ ಅಮಾನತು: ಪಾರುಪತ್ತೆದಾರ್ ವಿರುದ್ಧ ಗೋಪಾಲಕ ದೂರು ದಾಖಲು
ಮೈಸೂರು

ಮೂವರ ಅಮಾನತು: ಪಾರುಪತ್ತೆದಾರ್ ವಿರುದ್ಧ ಗೋಪಾಲಕ ದೂರು ದಾಖಲು

September 21, 2018

ಮೈಸೂರು: ನಾಡದೇವತೆ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಗಣಕೀಕೃತ ಟಿಕೆಟ್ ನೀಡುವಾಗ ನಡೆದ 6.79 ಲಕ್ಷ ರೂ. ಅವ್ಯವಹಾರಕ್ಕೆ ಸಂಬಂಧಪಟ್ಟಂತೆ ದೇವ ಸ್ಥಾನದ ವ್ಯವಸ್ಥಾಪನಾ ಸಮಿತಿಯು ಇಂದು ಮೂವರನ್ನು ಅಮಾನತುಗೊಳಿಸಿದೆ. ಅದೇ ವೇಳೆ ದೇವಸ್ಥಾನದ ಪಾರುಪತ್ತೆದಾರ್ ವಿರುದ್ಧ ಗೋಪಾಲಕ ಕೆ.ಆರ್.ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಕಳೆದ ಏಪ್ರಿಲ್ ಮತ್ತು ಮೇ ತಿಂಗಳಿನಲ್ಲಿ ಟಿಕೆಟ್ ವಿತರಿಸುವ ಗಣಕಯಂತ್ರದಲ್ಲಿ 2018ನೇ ವರ್ಷ ಎಂಬುದನ್ನು 2008 ಎಂದು ಬದಲಿಸಿ, 6.79 ಲಕ್ಷ ರೂ. ಅವ್ಯವಹಾರ ನಡೆಸಲಾಗಿತ್ತು. ಈ ಸಂಬಂಧ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ…

ಚಾಮುಂಡಿ ಬೆಟ್ಟ ದೇವಸ್ಥಾನ ಸುತ್ತಮುತ್ತ ಗುಂಡಿ ಮುಚ್ಚಲು ಒತ್ತಾಯ
ಮೈಸೂರು

ಚಾಮುಂಡಿ ಬೆಟ್ಟ ದೇವಸ್ಥಾನ ಸುತ್ತಮುತ್ತ ಗುಂಡಿ ಮುಚ್ಚಲು ಒತ್ತಾಯ

July 5, 2018

ಮೈಸೂರು: ಚಾಮುಂಡಿಬೆಟ್ಟದ ದೇವಸ್ಥಾನದ ಹೊರಭಾಗದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಇಲ್ಲಿಗೆ ಆಗಮಿಸುವ ಭಕ್ತರು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ. ಮುಂದಿನ ಶುಕ್ರವಾರದಿಂದ ಆಷಾಢ ಪೂಜೆ ಆರಂಭವಾಗುವುದರಿಂದ ದೇಶದ ನಾನಾ ಭಾಗದಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಈ ವೇಳೆ ದೇವಸ್ಥಾನ ಹೊರ ಭಾಗದ ರಸ್ತೆಗಳಲ್ಲಿ ಆಳುದ್ದ ಗುಂಡಿಗಳು ಬಿದ್ದಿರುವುದರಿಂದ ವೃದ್ಧರು, ಮಹಿಳೆಯರು ಬಿದ್ದರೆ ಏನು ಗತಿ?. ಇದರಿಂದ ಮೈಸೂರಿಗೆ ಕೆಟ್ಟ ಹೆಸರು ಬರುವುದಿಲ್ಲವೆ? ಎಂದು ಭಕ್ತರು ಪ್ರಶ್ನಿಸಿದ್ದಾರಲ್ಲದೆ, ಸ್ಥಳೀಯ ಆಡಳಿತದ ನಿರ್ಲಕ್ಷ್ಯತನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. ಹಲವು ದಿನಗಳಿಂದ ಮೈಸೂರಿನಲ್ಲಿ ಸುರಿಯುತ್ತಿರುವ…

Translate »