ಚಾಮುಂಡಿ ಬೆಟ್ಟ ದೇವಸ್ಥಾನ ಸುತ್ತಮುತ್ತ ಗುಂಡಿ ಮುಚ್ಚಲು ಒತ್ತಾಯ
ಮೈಸೂರು

ಚಾಮುಂಡಿ ಬೆಟ್ಟ ದೇವಸ್ಥಾನ ಸುತ್ತಮುತ್ತ ಗುಂಡಿ ಮುಚ್ಚಲು ಒತ್ತಾಯ

July 5, 2018

ಮೈಸೂರು: ಚಾಮುಂಡಿಬೆಟ್ಟದ ದೇವಸ್ಥಾನದ ಹೊರಭಾಗದಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚುವಂತೆ ಇಲ್ಲಿಗೆ ಆಗಮಿಸುವ ಭಕ್ತರು ಸ್ಥಳೀಯ ಆಡಳಿತವನ್ನು ಒತ್ತಾಯಿಸಿದ್ದಾರೆ.

ಮುಂದಿನ ಶುಕ್ರವಾರದಿಂದ ಆಷಾಢ ಪೂಜೆ ಆರಂಭವಾಗುವುದರಿಂದ ದೇಶದ ನಾನಾ ಭಾಗದಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ. ಈ ವೇಳೆ ದೇವಸ್ಥಾನ ಹೊರ ಭಾಗದ ರಸ್ತೆಗಳಲ್ಲಿ ಆಳುದ್ದ ಗುಂಡಿಗಳು ಬಿದ್ದಿರುವುದರಿಂದ ವೃದ್ಧರು, ಮಹಿಳೆಯರು ಬಿದ್ದರೆ ಏನು ಗತಿ?. ಇದರಿಂದ ಮೈಸೂರಿಗೆ ಕೆಟ್ಟ ಹೆಸರು ಬರುವುದಿಲ್ಲವೆ? ಎಂದು ಭಕ್ತರು ಪ್ರಶ್ನಿಸಿದ್ದಾರಲ್ಲದೆ, ಸ್ಥಳೀಯ ಆಡಳಿತದ ನಿರ್ಲಕ್ಷ್ಯತನಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ.

ಹಲವು ದಿನಗಳಿಂದ ಮೈಸೂರಿನಲ್ಲಿ ಸುರಿಯುತ್ತಿರುವ ಮಳೆಗೆ ದೇವಸ್ಥಾನಕ್ಕೆ ಪ್ರವೇಶ ಪಡೆಯುವ ಜಾಗದಿಂದ ಕೂಗಳತೆಯಲ್ಲಿ ಗುಂಡಿಗಳು ಬಿದ್ದಿವೆ. ಅಮ್ಮನವರ ದರುಶನಕ್ಕೆ ಇದೇ ರಸ್ತೆಯಲ್ಲಿ ಗಣ್ಯಾತಿಗಣ್ಯರು ಗುಂಡಿ ದಾಟಿಕೊಂಡೇ ಅಮ್ಮನವರ ದರ್ಶನ ಪಡೆಯಬೇಕಾಗಿದೆ. ಸಂಗತಿ ಗೊತ್ತಿದ್ದರೂ ಸ್ಥಳೀಯ ಅಧಿಕಾರಿಗಳು ಸುಮ್ಮನಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.

Translate »