ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರಿಗೆ  ಬೆಂಗಳೂರಲ್ಲಿರಲು ಮನೆಯಿಲ್ಲ!?
ಮೈಸೂರು

ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣರಿಗೆ ಬೆಂಗಳೂರಲ್ಲಿರಲು ಮನೆಯಿಲ್ಲ!?

July 5, 2018
  • ನಿತ್ಯ ಹೊಳೆನರಸೀಪುರ-ಬೆಂಗಳೂರಿಗೆ ಅಪ್ ಅಂಡ್ ಡೌನ್

ಬೆಂಗಳೂರು: ಲೋಕೋಪಯೋಗಿ ಸಚಿವ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರ ಪುತ್ರ ಹೆಚ್.ಡಿ. ರೇವಣ್ಣ ಅವರಿಗೆ ಬೆಂಗಳೂರಿನಲ್ಲಿ ಮನೆ ಇಲ್ಲವಂತೆ. ಮನೆ ಇಲ್ಲದ ಕಾರಣ ಪ್ರತಿ ನಿತ್ಯ ರಾಜಧಾನಿಯಿಂದ 172 ಕಿಲೋ ಮೀಟರ್ ದೂರವಿರುವ ಹೊಳೆನರಸೀಪುರದಿಂದ ವಿಧಾನ ಸೌಧಕ್ಕೆ ಬಂದು ಹೋಗುತ್ತಿದ್ದಾರೆ.

ರಾಜ್ಯ ಸರ್ಕಾರ ರೇವಣ್ಣ ಅವರಿಗೆ ಕುಮಾರ ಪಾರ್ಕ್‍ನಲ್ಲಿ ನಿವಾಸ ಮಂಜೂರು ಮಾಡಿದೆ. ಇವರಿಗೆ ನೀಡಿರುವ ನಿವಾಸವನ್ನು ಹಿಂದಿನ ಲೋಕೋಪಯೋಗಿ ಸಚಿವ ಡಾ. ಹೆಚ್.ಸಿ. ಮಹದೇವಪ್ಪ ತೆರವುಗೊಳಿಸಿಲ್ಲ. ಅವರು ತೆರವುಗೊಳಿಸಲು ಮೂರು ತಿಂಗಳು ಕಾಲಾವಕಾಶವಿದೆ. ಮಹದೇವಪ್ಪ ತೆರವು ಮಾಡಿ, ಮನೆ ನವೀಕರಣವಾಗುವವ ರೆಗೂ ರೇವಣ್ಣ ದಿನನಿತ್ಯ 350 ಕಿಲೋಮೀಟರ್ ಪ್ರವಾಸ ಮಾಡಬೇಕಾಗುತ್ತದೆ. ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು, ನನಗೆ ಬೆಂಗಳೂರಿನಲ್ಲಿ ಮನೆ ಇಲ್ಲ. ಇದಕ್ಕಾಗಿ ದಿನನಿತ್ಯ ಊರಿನಿಂದಲೇ ಬಂದು ಹೋಗುತ್ತಿದ್ದೇನೆ. ಮುಂಜಾನೆ 5 ಗಂಟೆಗೆ ಎದ್ದು, ದೇವರ ಪೂಜೆ ಸಲ್ಲಿಸಿ, ಕ್ಷೇತ್ರದ ಜನರ ಸಮಸ್ಯೆ ಆಲಿಸಿ, ನಂತರ 8 ಗಂಟೆಗೆ ಹೊಳೆ ನರಸೀಪುರ ಬಿಟ್ಟು 10.30ಕ್ಕೆ ಬೆಂಗಳೂರು ತಲುಪುತ್ತೇನೆ. ನನ್ನೆಲ್ಲ ಸರ್ಕಾರಿ ಕೆಲಸ ಮುಗಿಸಿ, ರಾತ್ರಿ 9 ಇಲ್ಲವೇ 10 ಗಂಟೆಗೆ ಬೆಂಗಳೂರು ಬಿಟ್ಟು ರಾತ್ರಿ 12 ಗಂಟೆಗೆ ಊರಿಗೆ ಹೋಗುತ್ತಿದ್ದೇನೆ ಎಂದಿದ್ದಾರೆ. ಇವರೇನು ಕಾರಿನಲ್ಲಿ ನಿದ್ದೆ ಮಾಡುತ್ತಾರೆ. ಅವರ ಚಾಲಕನ ಸ್ಥಿತಿ ಹೇಗಿರಬೇಕು ತಿಳಿಯದು.

ಬೆಂಗಳೂರಿನ ಪದ್ಮನಾಭನಗರದಲ್ಲಿ ಇವರ ಕುಟುಂಬಕ್ಕೆ ಸೇರಿದ ಮನೆಗಳಿವೆ. ಆದರೆ ಅವ್ಯಾವೂ ನನ್ನ ಒಡೆತನದಲ್ಲಿಲ್ಲ. ನನ್ನ ಸಹೋದರಿಯರು ಮತ್ತು ಸಹೋದರರದ್ದು ಎಂದು ಉತ್ತರಿಸುತ್ತಿದ್ದಾರೆ.

Translate »