ಅರಸೀಕೆರೆ: ನಗರದಲ್ಲಿಂದು ಸಾರ್ವ ಜನಿಕ ಅಹವಾಲು ಸ್ವೀಕಾರ ಸಭೆ ನಡೆಸಿದ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಅಹ ವಾಲುಗಳ ಮಹಾಪೂರವೇ ಹರಿದು ಬಂತು. ಸಭೆಯಲ್ಲಿ ಶಾಸಕ ಕೆ.ಎಂ.ಶಿವಲಿಂಗೇಗೌಡ ಭಾಗವಹಿಸಿ, ಸಾರ್ವಜನಿಕರ ಸಮಸ್ಯೆ ಮನವರಿಕೆ ಮಾಡಿ ಕೊಟ್ಟಿದ್ದು ವಿಶೇಷವಾಗಿತ್ತು. ನಗರದ ವೆಂಕಟೇಶ್ವರ ಕಲಾಭವನದಲ್ಲಿ ನಡೆದ ಸಾರ್ವಜನಿಕ ಕುಂದುಕೊರತೆ ಅರ್ಜಿ ಸ್ವೀಕಾರ ಸಭೆಯಲ್ಲಿ 573 ಅರ್ಜಿಗಳು ಸಲ್ಲಿಕೆಯಾದವು. ಸಭೆ ಅಂತ್ಯದವರೆಗೂ ಶಾಸಕ ಕೆ.ಎಂ.ಶಿವಲಿಂಗೇಗೌಡ ಹಾಜರಿದ್ದು, ಜನತೆಯ ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿ ಗಮನ ಸೆಳೆದರಲ್ಲದೆ, ಸ್ವತಃ ಕೆಲ ಸಮಸ್ಯೆಗಳ ಬಗ್ಗೆ ಕೈಗೊಂಡಿರುವ…
ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆ
July 8, 2018ಅರಸೀಕೆರೆ: ವಿವಿಧ ಬೇಡಿಕೆ ಈಡೇರಿಸುವಂತೆ ನಗರದಲ್ಲಿ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು, ಎಐಟಿಯುಸಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.ನಗರದ ಪ್ರವಾಸಿ ಮಂದಿರದಿಂದ ಮೆರ ವಣಿಗೆ ಹೊರಟ ಪ್ರತಿಭಟನಾಕಾರರು, ಸಿಡಿಪಿಓ ಕಚೇರಿಯಲ್ಲಿ ಕೆಲಕಾಲ ಪ್ರತಿಭಟಿಸಿ ನಂತರ ತಾಲೂಕು ಕಚೇರಿಯಲ್ಲಿ ಜಮಾಯಿಸಿ ಬೇಡಿಕೆ ಈಡೇರಿಕೆ ಆಗ್ರಹಿಸಿದರು. ಎಐಟಿಯುಸಿ ರಾಜ್ಯಾಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ರಾಜ್ಯದಲ್ಲಿ ಅಂಗನ ವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡಗಳಿಲ್ಲ. ಅತೀ ತುರ್ತಾಗಿ ಕಟ್ಟಡಗಳು ನಿರ್ಮಾಣ ವಾಗಬೇಕಿದೆ. ಮಿನಿ ಅಂಗನವಾಡಿ ಕೇಂದ್ರ ಗಳಿಗೆ ಸಹಾಯಕಿಯರನ್ನು ತುರ್ತಾಗಿ…
ಅರಸೀಕೆರೆ: ನೂತನ ಬಸ್ ನಿಲ್ದಾಣ ನಿರ್ಮಾಣ
July 2, 2018ಅರಸೀಕೆರೆ: ಗ್ರಾಮೀಣ ಮತ್ತು ಎಕ್ಸ್‍ಪ್ರೆಸ್ ಬಸ್ ನಿಲುಗಡೆಗೆ ನಿಲ್ದಾಣ ಅವ ಶ್ಯಕವಾಗಿದ್ದು, ತಾಂತ್ರಿಕ ಅನುಮೋದನೆ ಯೊಂದಿಗೆ ಶೀಘ್ರವೇ ನೂತನ ಬಸ್ ನಿಲ್ದಾಣ ನಿರ್ಮಿಸಿ, ಹಾಲಿ ನಿಲ್ದಾಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ. ತಮ್ಮಣ್ಣ ಭರವಸೆ ನೀಡಿದರು. ಶಾಸಕ ಕೆ.ಎಂ.ಶಿವಲಿಂಗೇಗೌಡರ ಕನಸಿನ ಕೂಸಾದ ನೂತನ ಬಸ್ ನಿಲ್ದಾಣ ನಿರ್ಮಾಣ ಮತ್ತು ಅಭಿವೃದ್ಧಿ ವಿಚಾರವಾಗಿ ನಗರಕ್ಕೆ ಇಂದು ಸಂಜೆ ಆಗಮಿಸಿದ್ದ ಸಚಿವರು ಸುದ್ದಿಗಾರರೊಂದಿಗೆ ಮಾತನಾಡಿದರು. ಸ್ಥಳೀಯ ಬಸ್ ಡಿಪೋ ನಿರ್ಮಾಣ ವಾಗಿ 50 ವರ್ಷವಾಗಿದ್ದು, ಈ ಡಿಪೋ ನವೀಕರಣ…
ಜಿಲ್ಲೆಯಲ್ಲಿ ಸಾರಿಗೆ ವ್ಯವಸ್ಥೆಯ ಸುಧಾರಣೆ ಭರವಸೆ: ಡಿ.ಸಿ.ತಮ್ಮಣ್ಣ
June 27, 2018ಹಾಸನ: ರಾಜ್ಯ ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಜಿಲ್ಲೆಯಲ್ಲಿಂದು ಸಂಚರಿಸಿ, ವಿವಿಧ ಬಸ್ ನಿಲ್ದಾಣ ಹಾಗೂ ಡಿಪೋಗಳಿಗೆ ಭೇಟಿ ನೀಡಿ ಪರಿಶೀಲಿಸಿದರ ಲ್ಲದೆ, ಮೂಲ ಸೌಕರ್ಯ ಅಭಿವೃದ್ಧಿ ಕುರಿತು ಸಂಪೂರ್ಣ ಮಾಹಿತಿ ಪಡೆದು ಕೊಂಡರು. ಬೆಳಿಗ್ಗೆ ಚನ್ನರಾಯಪಟ್ಟಣಕ್ಕೆ ಆಗಮಿ ಸಿದ ಸಾರಿಗೆ ಸಚಿವರು, ಶಾಸಕ ಸಿ.ಎನ್. ಬಾಲಕೃಷ್ಣ ಅವರೊಂದಿಗೆ ನಗರದ ಬಸ್ ನಿಲ್ದಾಣ ಹಾಗೂ ಡಿಪೋವನ್ನು ವೀಕ್ಷಣೆ ಮಾಡಿ ಅಗತ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು, ಸಲಹೆ ಸೂಚನೆ ನೀಡಿದರು. ನಂತರ ಹೊಳೆ ನರಸೀಪುರಕ್ಕೆ ಆಗಮಿಸಿ,…
ಬಾಣಾವರ ಜಿಲ್ಲಾ ಪಂಚಾಯತ್ ಉಪಚುನಾವಣೆ ಜೆಡಿಎಸ್‍ನ ಬಿಳಿಚೌಡಯ್ಯ ಗೆಲುವು
June 18, 2018ಅರಸೀಕೆರೆ: ತಾಲೂಕಿನ ಬಾಣಾವರ ಜಿಪಂ ಚುನಾವಣೆ ಫಲಿತಾಂಶದಲ್ಲಿ ನಿರೀಕ್ಷೆಯಂತೆ ಜೆಡಿಎಸ್ ಅಭ್ಯರ್ಥಿ ಬಿಳಿಚೌಡಯ್ಯ ಗೆಲುವು ಸಾಧಿಸಿದ್ದು, ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಅರಸೀಕೆರೆ ಕ್ಷೇತ್ರ ಭದ್ರ ಕೋಟೆಯಾಗಿದೆ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಕಳೆದ ವಿಧಾನ ಸಭಾ ಚುನಾವಣೆ ಪೂರ್ವ ದಲ್ಲಿ ನಡೆದ ನಾಟಕೀಯ ಬೆಳವಣ ಗೆಯಲ್ಲಿ ಹಾಸನ ಜಿಪಂನ ಬಾಣಾವರ ಕ್ಷೇತ್ರದ ಸದಸ್ಯರಾಗಿದ್ದ ಬಿ.ಎಸ್. ಅಶೋಕ್ ಕಾಂಗ್ರೆಸ್ `ಬಿ’ ಫಾರಂ ಬಹುತೇಕ ಖಚಿತ ಎಂಬ ಆಸೆಯೊಂದಿಗೆ ಶಾಸಕ ಶಿವಲಿಂಗೇಗೌಡರಿಗೆ ಸೆಡ್ಡು ಹೊಡೆದು ಜೆಡಿಎಸ್‍ನ ಪ್ರಾಥಮಿಕ ಸದಸ್ಯತ್ವ ಹಾಗೂ ಜಿಪಂ ಸದಸ್ಯತ್ವ…
ಅಭಿವೃದ್ಧಿ ಕಾರ್ಯಗಳಿಗೆ ಜನತೆಯಿಂದ ಫುಲ್ ಮಾಕ್ರ್ಸ್ಶಾಸಕ ಕೆ.ಎಂ.ಶಿವಲಿಂಗೇಗೌಡ ಮೆಚ್ಚುಗೆ ನುಡಿ
June 11, 2018ಅರಸೀಕೆರೆ: ರಾಜಕಾರಣ ಕ್ಕಾಗಿ ನನ್ನ ಕ್ಷೇತ್ರದಲ್ಲಿ ಜಾತಿ ರಾಜಕಾರಣ ಮಾಡಿದ್ದಲ್ಲಿ ನಾನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಫುಲ್ ಮಾಕ್ರ್ಸ್ ನೀಡಿ ನನ್ನನ್ನು ಸತತ 3ನೇ ಬಾರಿ ಗೆಲ್ಲಿಸಿದ್ದಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ನುಡಿದರು. ನಗರದ ಗೃಹ ಕಚೇರಿಯಲ್ಲಿ ತಾಲೂಕು ಬೇಡ ಜಂಗಮ ಸಮಾಜದ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನ್ನ ಅಭಿವೃದ್ಧಿ ಕಾರ್ಯಗಳನ್ನು ಅರಿತು 3ನೇ ಬಾರಿ ದಾಖಲೆ ಮತಗಳ ಅಂತರಲ್ಲಿ ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿಕೊಟ್ಟಿ ರುವ ಕ್ಷೇತ್ರದ ಜನತೆಗೆ ನಾನು ಅಭಾರಿ…