ಅರಸೀಕೆರೆ: ರಾಜಕಾರಣ ಕ್ಕಾಗಿ ನನ್ನ ಕ್ಷೇತ್ರದಲ್ಲಿ ಜಾತಿ ರಾಜಕಾರಣ ಮಾಡಿದ್ದಲ್ಲಿ ನಾನು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ಫುಲ್ ಮಾಕ್ರ್ಸ್ ನೀಡಿ ನನ್ನನ್ನು ಸತತ 3ನೇ ಬಾರಿ ಗೆಲ್ಲಿಸಿದ್ದಾರೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ನುಡಿದರು.
ನಗರದ ಗೃಹ ಕಚೇರಿಯಲ್ಲಿ ತಾಲೂಕು ಬೇಡ ಜಂಗಮ ಸಮಾಜದ ವತಿಯಿಂದ ನೀಡಿದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ನನ್ನ ಅಭಿವೃದ್ಧಿ ಕಾರ್ಯಗಳನ್ನು ಅರಿತು 3ನೇ ಬಾರಿ ದಾಖಲೆ ಮತಗಳ ಅಂತರಲ್ಲಿ ನನ್ನನ್ನು ಗೆಲ್ಲಿಸಿ ವಿಧಾನಸಭೆಗೆ ಕಳಿಸಿಕೊಟ್ಟಿ ರುವ ಕ್ಷೇತ್ರದ ಜನತೆಗೆ ನಾನು ಅಭಾರಿ ಯಾಗಿದ್ದೇನೆ. ಎಲ್ಲಾ ಪಂಗಡಗಳ ಜನತೆಯೇ ನನಗೆ ಶ್ರೀರಕ್ಷೆ ಎಂದ ಶಾಸಕರು, ಇಂದು ಬೇಡ ಜಂಗಮ ಸಮಾಜದವರು ಮನವಿ ಮೂಲಕ ನೀಡಿರುವ ಬೇಡಿಕೆಗಳನ್ನು ಪ್ರ್ರಾಮಾಣ ಕವಾಗಿ ಈಡೇರಿಸುವ ಪ್ರಯತ್ನ ಮಾಡುತ್ತೇನೆ ಎಂದರು.
ಚುನಾವಣೆ ಪೂರ್ವದಲ್ಲಿ ಜನತೆಗೆ ನೀಡಿ ರುವ ಭರವಸೆಯಂತೆ ಕ್ಷೇತ್ರದ 530 ಹಳ್ಳಿಗಳಿಗೆ ಹೇಮಾವತಿ ಮೂಲದಿಂದ ಶುದ್ಧ ಕುಡಿಯುವ ನೀರು ಪೂರೈಸುವುದು ಹಾಗೂ ಎತ್ತಿನ ಹೊಳೆ ಯೋಜನೆಯ ಕಾಮ ಗಾರಿಯನ್ನ ಪೂರ್ಣಗೊಳಿಸುವ ಮೂಲಕ ತಾಲೂಕಿನ ಕೆರೆ-ಕೆರೆಗಳಿಗೆ ನೀರು ತುಂಬಿಸುವ ಮಹತ್ಕಾರ್ಯದ ಜೊತೆಗೆ ಇಂಜಿನಿಯರಿಂಗ್, ಪಾಲಿಟೆಕ್ನಿಕ್ ಕಾಲೇಜು ತೆರೆÀಯಲಾಗುವುದು. ಅಲ್ಲದೆ ದೊಡ್ಡ ಕೈಗಾರಿಕೆ ಘಟಕಗಳನ್ನು ಸ್ಥಾಪಿಸುವ ಮೂಲಕ ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ಮಾಡಿ ಜನತೆಯ ಋಣ ತೀರಿಸುತ್ತೇನೆ ಹೇಳಿದರು.
ತೆಂಗು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವಂತೆ ನಾನೇ ಒಂದು ವಾರ ಅಹೋ ರಾತ್ರಿ ಪ್ರತಿಭಟನೆ ನಡೆಸಿದ್ದು, ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಈ ಬಾರಿ ಕುಮಾರಸ್ವಾಮಿ ನೇತೃತ್ವದ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬಂದಿರುವುದ ರಿಂದ ತೆಂಗು ಬೆಳೆಗಾರರಿಗೆ ಸೂಕ್ತ ಪರಿಹಾರ ಕೊಡಿಸುವ ನಿಟ್ಟಿನಲ್ಲೂ ಸಹ ನನ್ನ ಹೋರಾಟ ಮುಂದುವರೆಯಲಿದೆ ಎಂದರು.
ಕಾಂಗ್ರೆಸ್‍ನ ಪಾಲುದಾರಿಕೆಯಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಿದೆ ಸಮ್ಮಿಶ್ರ ಸರ್ಕಾರ ದಲ್ಲಿ ಹಲವು ತೊಡರುಗಳು ಸಹಜ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಿ 5 ವರ್ಷ ಗಳ ಕಾಲ ರಾಜ್ಯದಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪೂರ್ಣ ಸುಭದ್ರ ಸರ್ಕಾರ ನೀಡಲಿ ದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೇಡ ಜಂಗಮ ಸಮಾಜದ ಜಿಲ್ಲಾಧ್ಯಕ್ಷ ಕೊಂಡಜ್ಜಿ ರುದ್ರ ಸ್ವಾಮಿ, ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಹಿರೇಮಠ್, ಉಪಾಧ್ಯಕ್ಷ ಬಿ.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಎಂ.ವಿರು ಪಾಕ್ಷಪ್ಪ, ಖಜಂಜಿ ಮೃತ್ಯುಂಜಯ, ಹೋಬಳಿ ಅಧ್ಯಕ್ಷರಾದ ಮುರುಂಡಿ ಲೋಕೇಶ್, ಜಾವಗಲ್ ರೇಣುಕಾ ಚಾರ್ಯ, ಕಾರ್ಯದರ್ಶಿ ಸದಾಶಿವಯ್ಯ, ಸದಸ್ಯರುಗಳಾದ ಬಸವರಾಜ್, ಮಂಜು ನಾಥ್, ವೀರಭದ್ರಯ್ಯ, ಮಂಜುನಾಥ್, ಟಿ.ಎಸ್.ಎಸ್.ಸುನೀಲ್, ಕುಮಾರ್, ಮತ್ತಿತರರಿದ್ದರು.