ವೇದಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸಚಿವ ಎನ್.ಮಹೇಶ್
ಚಾಮರಾಜನಗರ

ವೇದಿಕೆಯಲ್ಲಿ ಸಾಷ್ಟಾಂಗ ನಮಸ್ಕಾರ ಮಾಡಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ ಸಚಿವ ಎನ್.ಮಹೇಶ್

June 11, 2018

ಮಾದರಿ ಕ್ಷೇತ್ರ ನಿರ್ಮಾಣ, ತಿಂಗಳಿಗೊಮ್ಮೆ ಜನ ಸಂಪರ್ಕ ಸಭೆ, ಅಭಿವೃದ್ಧಿ ಕೆಲಸಕ್ಕೆ ಆದ್ಯತೆಯ ಭರವಸೆ

ಚಾಮರಾಜನಗರ:  ಅಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿ ದ್ದರು. ಸಭಾಂಗಣದೊಳಗಡೆ ಬಿಎಸ್‍ಪಿ ಬಾವುಟ ರಾರಾಜಿಸುತ್ತಿತ್ತು. ಎಲ್ಲರ ಬಾಯಿ ಯಲ್ಲೂ ಸಚಿವ ಮಹೇಶ್ ಅವರ ಪರ ಜಯ ಘೋಷಣೆ ಹರಿದಾಡುತ್ತಿತ್ತು. ಈ ವೇಳೆ ವೇದಿಕೆ ಕಾರ್ಯಕ್ರಮ ಆರಂಭವಾಯಿತು. ವೇದಿಕೆಯ ಮಧ್ಯಭಾಗದಲ್ಲಿ ರಾಜ ಸಿಂಹಾ ಸನದಲ್ಲಿ ಕುಳಿತಿದ್ದ ಸಚಿವ ಎನ್.ಮಹೇಶ್ ವೇದಿಕೆ ಮುಂಭಾಗಕ್ಕೆ ಬಂದು ‘ಮತದಾರರೇ ನನ್ನ ದೇವರು’ ಎನ್ನುತ್ತಾ ಮಂಡಿಯೂರಿ ಸಾಷ್ಟಾಂಗ ನಮಸ್ಕಾರ ಮಾಡಿದರು.ತಾಲೂಕಿನ ಸಂತೇಮರಹಳ್ಳಿಯ ಮಲ್ಲಿ ಕಾರ್ಜುನ ಕಲ್ಯಾಣ ಮಂಟಪದಲ್ಲಿ ಭಾನು ವಾರ ಬಿಎಸ್‍ಪಿಯಿಂದ ಕ್ಷೇತ್ರದ ಮತದಾ ರರು ಹಾಗೂ ಕಾರ್ಯಕರ್ತರಿಗೆ ಆಯೋ ಜಿಸಿದ್ದ ಕೃತಜ್ಞತಾ ಸಭೆಯಲ್ಲಿ ಕಂಡು ಬಂದ ದೃಶ್ಯವಿದು.

ಕಾರ್ಯಕ್ರಮ ಉದ್ಘಾಟಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎನ್.ಮಹೇಶ್ ಮಾತನಾಡಿ, ಕೊಳ್ಳೇಗಾಲ ಮೀಸಲು ಕ್ಷೇತ್ರ ದಲ್ಲಿ ಈ ಬಾರಿ ನಡೆದ ವಿಧಾನಸಭಾ ಚುನಾ ವಣೆಯಲ್ಲಿ ಕ್ಷೇತ್ರದ ಜನರು ನನಗೆ ಹೆಚ್ಚಿನ ಬಹುಮತದಿಂದ ಗೆಲುವು ನೀಡಿದ್ದಾರೆ. ಅವರು ನೀಡಿದ ಬೆಂಬಲದಿಂದಲೇ ನಾನು ಇಂದು ಇಷ್ಟೊಂದು ದೊಡ್ಡ ಖಾತೆಯ ನಿರ್ವ ಹಣೆಯ ಜವಾಬ್ದಾರಿ ದೊರಕಿದೆ ಎಂದರು.

ಕ್ಷೇತ್ರದ ಜನರ ಕಷ್ಟ-ಸುಖಗಳಿಗೆ ಸ್ಪಂದಿ ಸುವ ನಿಟ್ಟಿನಲ್ಲಿ ಕ್ಷೇತ್ರದ 32 ಗ್ರಾಮ ಪಂಚಾ ಯಿತಿ ವ್ಯಾಪ್ತಿಯಲ್ಲಿ ಜನ ಸಂಪರ್ಕ ಸಭೆ ಆಯೋಜಿಸುತ್ತೇನೆ. ಯಾವುದೇ ಮಧ್ಯವರ್ತಿ ಗಳಿಗೂ ಅಲ್ಲಿ ಅವಕಾಶ ನೀಡುವುದಿಲ್ಲ. ಸಾಮಾನ್ಯರು ಕೂಡ ನನ್ನನ್ನೂ ನೇರವಾಗಿ ಭೇಟಿಯಾಗುವ ಅವಕಾಶ ಕಲ್ಪಿಸಿ ಅವರು ನೀಡುವ ಅಹವಾಲುವನ್ನು ಸ್ವೀಕರಿಸಿ ಅದನ್ನು ಈಡೇರಿಸಲು ಪ್ರಾಮಾಣ ಕ ಪ್ರಯತ್ನ ಮಾಡು ತ್ತೇನೆ ಎಂದು ಭರವಸೆ ನೀಡಿದರು.

ಮಾದರಿ ಕ್ಷೇತ್ರ ನಿರ್ಮಾಣ: ಕೊಳ್ಳೇ ಗಾಲ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಸಲು ಶ್ರಮಿಸುತ್ತೇನೆ. ರಾಜ್ಯದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಿಂದ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯವಾದ ಅನುದಾನವನ್ನು ತಂದು ಹಂತ-ಹಂತವಾಗಿ ಅಭಿವೃದ್ಧಿ ಗೊಳಿಸುತ್ತೇನೆ ಎಂದು ತಿಳಿಸಿದರು.

ಕ್ಷೇತ್ರದಲ್ಲಿ ಎಲ್ಲ ಸಮುದಾಯದ ಜನರು ನನಗೆ ಬೆಂಬಲ ನೀಡಿದ್ದಾರೆ. 5 ವರ್ಷದ ನನ್ನ ಅಧಿಕಾರದ ಅವಧಿಯಲ್ಲಿ ಎಲ್ಲ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಅಧಿಕಾರವನ್ನು ದುರುಪಯೋಗ ಮಾಡಿಕೊಳ್ಳದೇ ಬಡವರ ಪರ ಕೆಲಸಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತೇನೆ ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಿಂದ ನಾನು ಈ ಮಟ್ಟಕ್ಕೆ ಬರಲು ಸಾಧ್ಯವಾಯಿತು. ನನ್ನ ಬಗ್ಗೆ ಅನ್ಯ ಪಕ್ಷದ ಮುಖಂಡರು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಪಕ್ಷದ ಕಾರ್ಯಕರ್ತರು ಹಾಗೂ ಮತ ದಾರರು ಕಿವಿಗೊಡಬಾರದು. ಕಾನೂನು ವ್ಯಾಪ್ತಿಯಲ್ಲಿ ಸಾಧ್ಯವಾಗುವ ಎಲ್ಲ ಕೆಲಸ ಗಳನ್ನು ನಾನು ಮಾಡುತ್ತೇನೆ. ಚಾಮರಾಜ ನಗರ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿಯನ್ನು ಕಳಚುವಂತೆ ಮಾಡಿ ಜಿಲ್ಲೆ ಯನ್ನು ಅಭಿವೃದ್ಧಿಗೊಳಿಸಲು ನನ್ನ ಅಧಿಕಾರದ ಅವಧಿಯಲ್ಲಿ ಹೆಚ್ಚಿನ ಗಮನ ಹರಿಸುತ್ತೇನೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಪಕ್ಷದ ಜಿಲ್ಲಾ ಘಟ ಕದ ಅಧ್ಯಕ್ಷ ಬಾಗಳಿ ರೇವಣ್ಣ, ತಾಲೂಕು ಪಂಚಾಯಿತಿ ಸದಸ್ಯ ನಾಗರಾಜು, ಮುಖಂಡ ರಾದ ಅರಕಲವಾಡಿ ನಾಗೇಂದ್ರ, ಮಲ್ಲೇ ಶಪ್ಪ, ಕಮರವಾಡಿ ರೇವಣ್ಣ, ಮಹದೇವ ನಾಯಕ, ನಾಗಬಸವಣ್ಣ, ಮಹದೇವ ಉಪ್ಪಾರ್, ಜಯಶಂಕರ್, ವೀರಮಾಧು, ಬಸವರಾಜು ಹಾಜರಿದ್ದರು.

ನಿರೀಕ್ಷೆಗೂ ಮೀರಿದ ಖಾತೆ ಸಿಕ್ಕಿದೆ

ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಮುಖಂಡರು ನನಗೆ ನಿರೀಕ್ಷೆಗೂ ಮೀರಿದ ದೊಡ್ಡ ಖಾತೆಯನ್ನೇ ನೀಡಿದ್ದಾರೆ’ ಎಂದು ಸಚಿವ ಎನ್.ಮಹೇಶ್ ಹೇಳಿದರು.ಸಭೆಯಲ್ಲಿ ಮಾತನಾಡಿದ ಅವರು, ನನಗೆ ಸಣ್ಣ ನೀರಾವರಿ ಖಾತೆ ದೊರೆಯಲಿದೆ ಎಂದುಕೊಂಡಿದ್ದೆ. ಆದರೆ, ಜೆಡಿಎಸ್ ವರಿಷ್ಠರು ನನ್ನ ಊಹೆಗೂ ಮೀರಿದಂತಹ ಶಿಕ್ಷಣ ಇಲಾಖೆಯ ದೊಡ್ಡ ಖಾತೆಯ ಜವಾಬ್ದಾರಿ ನೀಡಿರುವುದು ಸಂತಸ ತಂದಿದೆ ಎಂದು ತಿಳಿಸಿದರು.

ಜಿಲ್ಲಾ ಉಸ್ತುವಾರಿ ಸ್ಥಾನವನ್ನು ನನಗೆ ನೀಡಬೇಕು ಎಂದು ಸಿಎಂ ಎಚ್.ಡಿ. ಕುಮಾರ ಸ್ವಾಮಿ ಅವರಿಗೆ ಮನವಿ ಮಾಡಿದ್ದೇನೆ. ಆದರೆ, ಅವರು ಈ ಸಂಬಂಧ ಯಾವುದೇ ನಿರ್ಧಾರ ತೆಗೆದುಕೊಂಡರೂ ನಾನು ಸಂತೋಷದಿಂದ ಸ್ವೀಕರಿಸುತ್ತೇನೆ ಎಂದರು.

Translate »