ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯ: ಶಾಸಕ ಪ್ರೀತಮ್ ಜೆ.ಗೌಡ
ಹಾಸನ

ಉತ್ತಮ ಆರೋಗ್ಯಕ್ಕೆ ಯೋಗ ಅವಶ್ಯ: ಶಾಸಕ ಪ್ರೀತಮ್ ಜೆ.ಗೌಡ

June 11, 2018

ಹಾಸನ: ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿತ್ಯ ಯೋಗಾಭ್ಯಾಸ ಅವಶ್ಯಕ ಎಂದು ಕ್ಷೇತ್ರದ ಶಾಸಕ ಪ್ರೀತಮ್ ಜೆ.ಗೌಡ ತಿಳಿಸಿದರು.ನಗರದ ಶ್ರೀ ಶಂಕರ ಮಠದಲ್ಲಿ ವೇದ ಭಾರತಿ ಸಹಕಾರದೊಂದಿಗೆ ಪತಂಜಲಿ ಪರಿ ವಾರದಿಂದ ಇಂದು ಬೆಳಿಗ್ಗೆ ಹಮ್ಮಿಕೊಂಡಿದ್ದ ರಾಷ್ಟ್ರಯಜ್ಞದಲ್ಲಿ ಭಾಗವಹಿಸಿ ನಂತರ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

ಇಂದಿನ ಜೀವನ ಪದ್ಧತಿಯಲ್ಲಿ ಯೋಗಾ ಭ್ಯಾಸ ಅನಿವಾರ್ಯ. ಪ್ರತಿ ವಾರ್ಡಿನಲ್ಲೂ ಒಂದು ಯೋಗ ಕೇಂದ್ರ ತೆರೆದು ಎಲ್ಲರೂ ಯೋಗಾಭ್ಯಾಸದಲ್ಲಿ ತೊಡಗಿ ಆರೋಗ್ಯ ಕಾಪಾಡಿಕೊಳ್ಳುವಂತೆ ಮಾಡಬೇಕು ಎಂದರು. ಅಂದು ಪತಂಜಲಿ ಪರಿವಾರ ಆಶೀರ್ವದಿಸಿದಂತೆ ಇಂದು ಶಾಸಕನಾಗಿದ್ದೇನೆ. ದೇಶಕ್ಕಾಗಿ ಕೆಲಸ ಮಾಡುವವರಿಗೆ ಬಾಬಾ ರಾಮದೇವ್ ಮಾರ್ಗದರ್ಶನದಲ್ಲಿ ಎಲ್ಲೆಡೆ ಪ್ರೇರಣೆ ಸಿಗುತ್ತಿದೆ ಎಂದ ಶಾಸಕರು, ಮನೆಯಲ್ಲಿ ಕುಳಿತು ದೇವರ ಪೂಜೆ ಮಾಡಿ ಕುಟುಂಬ ಕ್ಕಾಗಿ ಬೇಡಿಕೊಳ್ಳುವುದು ಸಾಮಾನ್ಯ. ಆದರೆ ಪತಂಜಲಿ ಪರಿವಾರ ಇಡೀ ದೇಶದ ಒಳಿತಿಗಾಗಿ ಇಂತಹ ರಾಷ್ಟ್ರ ಯಜ್ಞ ಮಾಡುತ್ತಿ ರುವುದು ಶ್ಲಾಘನೀಯ ಎಂದು ತಿಳಿಸಿದರು.

ರಾಜ್ಯ ಪತಂಜಲಿ ಯೋಗ ಪೀಠದ ಅಧ್ಯಕ್ಷ ಭವರ್ ಲಾಲ್‍ಜಿ ಆರ್ಯ ಮಾತ ನಾಡಿ, ಪತಂಜಲಿ ಪರಿವಾರವೂ ನಿರಂತರ ಯೋಗ ಶಿಕ್ಷಕರ ಶಿಬಿರವನ್ನು ಮಾಡುವ ಮೂಲಕ ಪ್ರತಿ ವಾರ್ಡಿಗೊಂದು ಯೋಗ ಕೇಂದ್ರಗಳನ್ನು ಸ್ಥಾಪಿಸುವ ಉದ್ದೇಶ ಹೊಂದಿದೆ. ಸಮಾಜದಲ್ಲಿ ಎಲ್ಲಾ ರೀತಿಯ ಬದಲಾವಣೆ ಗಳು ಆಗಬೇಕು. ನಮ್ಮ ನಾಗರಿಕರು ಎಲ್ಲಾ ಆರೋಗ್ಯವಂತರಾಗಿ ಇರುವುದು ಮುಖ್ಯ ಎಂದು ಹೇಳಿದರು. ಜೂ.21ಕ್ಕೆ ವಿಶ್ವ ಯೋಗ ದಿನವನ್ನು ಆಚರಿಸುತ್ತಿದ್ದು, ಇದನ್ನು ಒಂದು ದಿನಕ್ಕೆ ಮಾತ್ರ ಸೀಮಿತಗೊಳಿಸದೆ ಪ್ರತಿನಿತ್ಯ ಮನೆ ಮನೆಯಲ್ಲಿಯೂ ಯೋಗಾ ಭ್ಯಾಸ ಮಾಡುವಂತೆ ಕಿವಿಮಾತು ಹೇಳಿದರು.ಪತಂಜಲಿ ಯೋಗ ಸಮಿತಿ ಜಿಲ್ಲಾ ಪ್ರಭಾರಿ ಹಾಗೂ ರಾಜ್ಯ ಸದಸ್ಯ ಹರಿಹರ ಪುರ ಶ್ರೀಧರ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಷ್ಟ್ರಯಜ್ಞದ ನಂತರ ರಾಜ್ಯ ಪತಂಜಲಿ ಯೋಗ ಪೀಠ ಅಧ್ಯಕ್ಷ ಭವರ್ ಲಾಲ್‍ಜಿ ಆರ್ಯ ಅವರು ಸತ್ಸಂಗ ನಡೆಸಿಕೊಟ್ಟರು. ಈ ಸಂದರ್ಭದಲ್ಲಿ ನೂತನ ಶಾಸಕ ಪ್ರೀತಮ್ ಜೆ.ಗೌಡರನ್ನು ಗೌರವಿಸಲಾಯಿತು. ಇದೇ ವೇಳೆ ಭಾರತ್ ಸ್ವಾಭಿಮಾನ್ ಟ್ರಸ್ಟ್ ಜಿಲ್ಲಾ ಪ್ರಭಾರಿ ಶೇಷಪ್ಪ, ಜಯರಾಂ, ನಗರ ಸಹ ಪ್ರಭಾರಿ ಗಿರೀಶ್, ಕಿಸಾನ್ ಸಮಿತಿ ಜಿಲ್ಲಾ ಪ್ರಭಾರಿ ನಾಗೇಶ್, ಯುವ ಪ್ರಭಾರಿ ಮಂಜು ನಾಥ್, ಸುರೇಶ್ ಪ್ರಜಾಪತಿ, ದೊರೆ ಸ್ವಾಮಿ, ಕಲಾವತಿ ಇತರರಿದ್ದರು.

Translate »