ಎಲ್ಲರೊಂದಿಗೆ ಚರ್ಚಿಸಿ ಬೇಲೂರು ಮುಖ್ಯರಸ್ತೆ ಅಗಲೀಕರಣ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ
ಹಾಸನ

ಎಲ್ಲರೊಂದಿಗೆ ಚರ್ಚಿಸಿ ಬೇಲೂರು ಮುಖ್ಯರಸ್ತೆ ಅಗಲೀಕರಣ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ

June 11, 2018

ಬೇಲೂರು: ವಿಶ್ವಪ್ರಸಿದ್ಧ ಪ್ರವಾಸಿ ಕೇಂದ್ರವಾದ ಬೇಲೂರು ಪಟ್ಟಣದ ಅಭಿವೃದ್ಧಿಗೆ ಮುಖ್ಯರಸ್ತೆ ಅಗಲೀಕರಣ ಅಗತ್ಯವಾಗಿದ್ದು, ವರ್ತಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ವಿಸ್ತರಣೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಹೇಳಿದರು.

ಪಟ್ಟಣದ ಶ್ರೀಚನ್ನಕೇಶವ ದೇವಾಲಯಕ್ಕೆ ಭೇಟಿ ನೀಡಿ, ದೇವರ ದರ್ಶನ ಪಡೆದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೆ ನಾನು ಮಂತ್ರಿಯಾಗಿದ್ದಾಗ ಬೇಲೂರು, ಶ್ರವಣಬೆಳಗೊಳ, ಹಳೇಬೀಡನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಲು ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಪ್ರಯತ್ನಿಸಿದ್ದೆ. ವಿಶ್ವಪರಂಪರೆ ಪಟ್ಟಿಗೆ ಸೇರಿದರೆ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.

ಚನ್ನಕೇಶವಸ್ವಾಮಿ ಅನುಗ್ರಹದಿಂದ ಈಗ ಹೆಚ್‍ಡಿಕೆ ಮುಖ್ಯಮಂತ್ರಿಯಾಗಿದ್ದಾರೆ. ಉತ್ತಮ ಮಳೆಯೂ ಆಗುತ್ತಿದೆ. ರಾಜ್ಯದ ರೈತರು ಹಸನ್ಮುಖಿಯಾಗಿರಬೇಕೆಂಬುದು ನಮ್ಮ ಆಶಯ. ಜಿಲ್ಲೆಯಲ್ಲಿ 10 ವರ್ಷ ದಿಂದ ಜನ ನೋವನ್ನು ಅನುಭವಿಸಿ ದ್ದಾರೆ. ಇದೀಗ ಅದು ದೂರವಾಗಲಿದೆ ಎಂದ ಅವರು, ಚನ್ನಕೇಶವಸ್ವಾಮಿ ದೇವಾ ಲಯ ನಿರ್ಮಿಸಿ 900 ವರ್ಷಗಳಾಗಿದ್ದು, ಇದರ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಹೊಯ್ಸಳೋತ್ಸವದ ಮಾದರಿಯಲ್ಲಿ ಆಚರಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಸಂಸದ ಹೆಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಶಾಸಕ ಕೆ.ಎಸ್.ಲಿಂಗೇಶ್ ಸೇರಿ ದಂತೆ ಪ್ರಮುಖರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈ ಗೊಳ್ಳಲಾಗುವುದು. ಉತ್ಸವ ಆಚರಣೆಯಿಂದ ಕ್ಷೇತ್ರದ ಅಭಿವೃದ್ಧಿಗೂ ಅನುಕೂಲವಾಗಲಿದೆ. ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗಮನ ಹರಿಸಲಾಗುವುದು. ಮೈಸೂರು, ಬಿಳಿಕೆರೆ, ಹಾಸನ, ಬೇಲೂರು, ಚಿಕ್ಕಮಗಳೂರು ರಸ್ತೆಯನ್ನು ಅಭಿವೃದ್ಧಿಪಡಿಸಲು ಯೋಚಿ ಸಲಾಗಿದೆ ಎಂದರು.

ಸಚಿವರಾದ ಬಳಿಕ ಪ್ರಥಮ ಬಾರಿಗೆ ಚನ್ನಕೇಶವನ ಸನ್ನಿದಿಗೆ ಆಗಮಿಸಿದ ಲೋಕೋಪಯೋಗಿ ಸಚಿವ ಹೆಚ್.ಡಿ. ರೇವಣ್ಣ ಪೂರ್ಣ ಕುಂಭಸ್ವಾಗತ ನೀಡಲಾ ಯಿತು. ದೇವಾಲಯ ಸಮಿತಿಯಿಂದ ಗೌರವಿಸಲಾಯಿತು. ಈ ವೇಳೆ ಶಾಸಕ ಕೆ.ಎಸ್.ಲಿಂಗೇಶ್, ತಾಲೂಕು ಅಧ್ಯಕ್ಷ ತೊ.ಚ.ಅನಂತಸುಬ್ಬರಾಯ, ಕಾರ್ಯಾ ಧ್ಯಕ್ಷ ಬಿ.ಸಿ.ಮಂಜುನಾಥ್, ರಾಜ್ಯ ಸಮಿತಿ ಸದಸ್ಯ ಆರ್.ಎಸ್.ಪ್ರಸನ್ನ ಕುಮಾರ್, ಹೆಚ್‍ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಂ.ಎ. ನಾಗರಾಜ್, ಪುರಸಭಾಧ್ಯಕ್ಷೆ ಭಾರತಿ ಅರುಣಕುಮಾರ್, ತಾಪಂ ಸದಸ್ಯ ಅಶ್ವಥ್, ಜಿಪಂ ಮಾಜಿ ಅಧ್ಯಕ್ಷ ಬಿ.ಡಿ. ಚಂದ್ರೇಗೌಡ, ಜಿ.ಟಿ.ಇಂದಿರಾ, ಪುರಸಭಾ ಮಾಜಿ ಅಧ್ಯಕ್ಷ ದಯಾನಂದ್, ಶ್ರೀನಿಧಿ, ಜೆಡಿಎಸ್ ಯುವ ಅಧ್ಯಕ್ಷ ಉಮೇಶ್, ಪ್ರಮುಖರಾದ ಖಾದರ್, ಎಂ.ಕೆ.ಆರ್. ನಾಗೇಶ್, ಸಂತೋಷ್, ಪುರಸಭ ಮಾಜಿ ಉಪಾಧ್ಯಕ್ಷರಾದ ನಾಗಮ್ಮ, ಜಯಶ್ರೀ ಇತರರಿದ್ದರು.

Translate »