ಕೊಡಗು

ಗೋಣ ಕೊಪ್ಪಲಿನ ವಿವಿಧೆಡೆ ವಿಶ್ವ ಪರಿಸರ ದಿನಾಚರಣೆ

June 11, 2018

ಗೋಣಿಕೊಪ್ಪಲು: ವಿಶ್ವ ಪರಿಸರ ದಿನಾಚರಣೆಯನ್ನು ವಿವಿಧೆಡೆ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಯ ಮಹತ್ವವನ್ನು ಸಾರಿದರು.

ಜೆಸಿಐ ಪೊನ್ನಂಪೇಟೆ ಗೋಲ್ಡನ್ ವತಿ ಯಿಂದ ಗೋಣಿಕೊಪ್ಪಲುವಿನ ಮಾದಪ್ಪ ಪೆಟ್ರೋಲ್ ಬಂಕ್‍ನಲ್ಲಿ ವಿಶ್ವ ಪರಿಸರ ದಿನಾ ಚರಣೆಯನ್ನು ಆಚರಿಸಲಾಯಿತು. ಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರದ ವೈದ್ಯ ಡಾ.ಚಂದ್ರಶೇಖರ್ ಅವರು ಜಿಪಂ ಸದಸ್ಯ ಬಾನಂಡ ಪೃಥ್ಯೂ ಹಾಗೂ ಪ್ರಗತಿಪರ ರೈತ ಚೆಪ್ಪುಡಿರ ಸುಜು ಕರುಂಬಯ್ಯ ಅವರುಗಳಿಗೆ ಸಸಿಯನ್ನು ನೀಡುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪೆಟ್ರೋಲ್ ಬಂಕ್‍ಗೆ ಆಗಮಿಸಿ ದವರಿಗೆ ವಿವಿಧ ಜಾತಿಯ ಕಾಡು ಮರಗಳ ಸಸಿಗಳನ್ನು ನೀಡುವುದರ ಮೂಲಕ ವಿಶ್ವ ಪರಿಸರ ದಿನವನ್ನು ವಿಶಿ ಷ್ಟವಾಗಿ ಆಚರಿಸಲಾಯಿತು.

ಜೆಸಿಐ ಪೊನ್ನಂಪೇಟೆಯ ಅಧ್ಯಕ್ಷ ಎಂ.ಡಿ. ನಂಜಪ್ಪ, ಕಾರ್ಯದರ್ಶಿ ನಟೇಶ್, ಮಾದಪ್ಪ ಪೆಟ್ರೋಲ್ ಬಂಕ್‍ನ ಮಾಲೀಕ ಮಚ್ಚಮಾಡ ಅನೀಶ್ ಮಾದಪ್ಪ ಹಾಗೂ ಸದಸ್ಯರು ಭಾಗವಹಿಸಿದರು.

ಗೋಣಿಕೊಪ್ಪಲು ಪ್ರೌಢಶಾಲೆಯಲ್ಲಿ ಟೈಗರ್ ಪಗ್ ಪರಿಸರ ಸಂಘದ ಸದಸ್ಯರು ಹಾಗೂ ವಿದ್ಯಾರ್ಥಿಗಳು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದರು. ಮುಖ್ಯ ಅತಿಥಿಯಾಗಿ ಉರಗ ತಜ್ಞ ಹಾಗೂ ಗೌರ ವನ್ವಿತ ವನ್ಯಜೀವಿ ಪರಿಪಾಲಕ ಕೆ.ಎನ್. ಬೋಸ್ ಮಾದಪ್ಪ ಭಾಗವಹಿಸಿ ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳುವಂತೆ ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಿದರು. ಮಹಾಗನಿ, ನೇರಳೆ, ಅರಳಿ ಸೇರಿದಂತೆ ಸುಮಾರು ಐವತ್ತು ಗಿಡಗಳನ್ನು ನೆಡಲಾಯಿತು.

ಶಾಲಾ ಆಡಳಿತ ಮಂಡಳಿಯ ಕಾರ್ಯ ದರ್ಶಿ ಕೆ.ಎಂ.ತಿಮ್ಮಯ್ಯ, ವನ್ಯಜೀವಿ ಛಾಯಾ ಗ್ರಾಹಕ ದಿಲನ್ ಮಂದಣ್ಣ, ಪರಿಸರ ಸಂಘದ ಸಂಚಾಲಕ ಕೃಷ್ಣ ಚೈತನ್ಯ ಹಾಗೂ ಶಿಕ್ಷಕ ವೃಂದ ಪಾಲ್ಗೊಂಡರು.

ಗೋಣಿಕೊಪ್ಪಲು ಕಾವೇರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಗಿಡ ನೆಡುವುದರ ಮೂಲಕ ಪರಿಸರ ದಿನಾ ಚರಣೆಯನ್ನು ಆಚರಿಸಲಾಯಿತು. ಪ್ರಾಂಶು ಪಾಲ ಎಸ್.ಎಸ್.ಮಾದಯ್ಯ ಹಾಗೂ ಎನ್‍ಎಸ್‍ಎಸ್ ಅಧಿಕಾರಿ ತಿರುಮಲಯ್ಯ ಅವರುಗಳು ಸಸಿಗಳನ್ನು ನೆಟ್ಟು ಸ್ವಯಂ ಸೇವಕರಲ್ಲಿ ಪರಿಸರ ರಕ್ಷಣೆಯ ಬಗ್ಗೆ ಅರಿವು ಮೂಡಿಸಿದರು. ಸ್ವಯಂಸೇವಕರು ಕಾಲೇಜು ಆವರಣವನ್ನು ಸ್ವಚ್ಛಗೊಳಿಸುವುದರ ಮೂಲಕ ಪರಿಸರ ಪ್ರಜ್ಞೆಯನ್ನು ಮೆರೆದರು.

Translate »