ಹತ್ತು ದಿನಕ್ಕೊಮ್ಮೆ ತಮಿಳ್ನಾಡಿಗೆ ಕಾವೇರಿ ನೀರು ಕೇಂದ್ರದ ನಿರ್ಣಯಕ್ಕೆ ಸಿಎಂ ಕುಮಾರಸ್ವಾಮಿ ತೀವ್ರ ಆಕ್ಷೇಪ
ಮೈಸೂರು

ಹತ್ತು ದಿನಕ್ಕೊಮ್ಮೆ ತಮಿಳ್ನಾಡಿಗೆ ಕಾವೇರಿ ನೀರು ಕೇಂದ್ರದ ನಿರ್ಣಯಕ್ಕೆ ಸಿಎಂ ಕುಮಾರಸ್ವಾಮಿ ತೀವ್ರ ಆಕ್ಷೇಪ

June 19, 2018

ಬೆಂಗಳೂರು: ರಾಜ್ಯದ ಕಾವೇರಿ ಜಲಾಶಯಗಳಿಂದ ತಮಿಳುನಾಡಿಗೆ ಪ್ರತಿ ಹತ್ತು ದಿನಕ್ಕೊಮ್ಮೆ ನೀರು ಬಿಡಬೇಕೆಂಬ ಕೇಂದ್ರದ ನಿರ್ಣಯಕ್ಕೆ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ದೆಹಲಿಯಲ್ಲಿಂದು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಕೇಂದ್ರ ಸರ್ಕಾರ ಕಾವೇರಿ ನಿರ್ವ ಹಣಾ ಮಂಡಳಿ ರಚಿಸಿ, ರಾಜ್ಯಕ್ಕೆ ಮತ್ತು ರೈತರಿಗೆ ಮಾರಕವಾಗುವಂತಹ ಕೆಲವು ನಿರ್ಣಯ ಕೈಗೊಂಡಿದ್ದಾರೆ. ಕಾವೇರಿ ನಿರ್ವ ಹಣಾಮಂಡಳಿಗಿರುವ ಕೆಲವು ಅಧಿಕಾರ ಮೊಟಕು ಇಲ್ಲವೇ ನಿರ್ಣಯಗಳಲ್ಲಿ ಬದಲಾವಣೆ ಮಾಡಿ ಜಾರಿಗೊಳಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡು ವುದಾಗಿ ತಿಳಿಸಿದರು.

ಇನ್ನು ಮುಂದೆ ನಮ್ಮ ಜಲಾಶಯಗಳಲ್ಲಿರುವ ನೀರಿನ ಪ್ರಮಾಣ ಆಧರಿಸಿ, ತಮಿಳುನಾಡಿಗೆ ಹತ್ತು ದಿನಕ್ಕೊಮ್ಮೆ ನೀರು ಬಿಡುವುದಾದರೆ ನಮಗಿರುವ ಅಧಿಕಾರವೇನು ಎಂದು ಪ್ರಶ್ನಿಸಿದ ಕುಮಾರ ಸ್ವಾಮಿ, ಇಂತಹ ಅವೈಜ್ಞಾನಿಕ ನಿರ್ಣಯ ಕೈಬಿಡಬೇಕು.

ಸುಪ್ರೀಂ ಕೋರ್ಟ್ ಹಾಗೂ ನ್ಯಾಯಮಂಡಳಿಗಳ ಆದೇಶದಂತೆ ನೀರು ಬಿಡುತ್ತಾ ಹೋದರೆ ನಮ್ಮ ರೈತರ ಗತಿ ಯೇನು. ನದಿ ಪಾತ್ರದಲ್ಲಿರುವ ರಾಜ್ಯಗಳಿಗೆ ಇಂತಹ ತೊಂದರೆಗಳು ಆಗಿಂದಾಗ್ಗೆ ಎದು ರಾಗುತ್ತವೆ. ಆದೇಶದಂತೆ ನಾವು ನೀರು ಬಿಡುತ್ತೇವೆ.

ತಮಿಳುನಾಡಿನಲ್ಲಿ ಬೀಳುವ ಮಳೆಯಿಂದ ಜಲಾಶಯಗಳಿಗೆ ಬರುವ ನೀರಿನ ಪ್ರಮಾಣವನ್ನು ಮಂಡಳಿ ಗಣನೆಗೆ ತೆಗೆದುಕೊಳ್ಳಲಿದೆಯೇ? ಅಲ್ಲಿ ಮಳೆ ಬಿದ್ದು, ಜಲಾಶಯಗಳಿಗೆ ನೀರು ಹರಿದು ಬರಲಿದೆ. ನಮ್ಮ ನೀರು ಹರಿದು, ಜಲಾಶಯಗಳಿಗೆ ತುಂಬಿ ನಂತರ ಸಮುದ್ರ ಪಾಲಾಗುತ್ತದೆ. ಎರಡು ರಾಜ್ಯಗಳ ರೈತರ ತೀರ್ಮಾನ ಕೈಗೊಳ್ಳಬೇಕು.

ಇದಕ್ಕೂ ಮಿಗಿಲಾಗಿ ಇನ್ನು ಮುಂದೆ ನಿರ್ವಹಣಾ ಮಂಡಳಿಯ ಸೂಚನೆಯಂತೆ ನಮ್ಮ ರೈತರು ಜಲಾನಯನ ಭಾಗದಲ್ಲಿ ಕೃಷಿ ಚಟುವಟಿಕೆ ಹಮ್ಮಿಕೊಳ್ಳಬೇಕಾಗಿದೆ. ಇದು ಸಾಧ್ಯವೇ? ನಮ್ಮ ರೈತರನ್ನು ತೃಪ್ತಿಪಡಿಸಲಾಗುತ್ತಿದೆಯೇ ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ಇಂತಹ ಅವೈಜ್ಞಾನಿಕ ನಿರ್ಣಯಗಳನ್ನು ಮೊದಲು ಕೈಬಿಡಿ. ನೀರು ನಿರ್ವಹಣಾ ಮಂಡಳಿ ರಚನೆಗೂ ಮುನ್ನ ಸಂಸತ್ತಿನಲ್ಲಿ ಚರ್ಚೆ ಮಾಡಿ, ಕೇಂದ್ರ ಸರ್ಕಾರ ಗೆಜೆಟ್ ಹೊರಡಿಸಬೇಕು. ಚರ್ಚೆಯಾಗದೇ ಕಾವೇರಿ ನಿರ್ವಹಣಾ ಮಂಡಳಿ ರಚಿಸಿ, ಗೆಜೆಟ್ ಹೊರಡಿಸಿರುವುದು ಎಷ್ಟರ ಮಟ್ಟಿಗೆ ಸರಿ. ಅಂತರರಾಜ್ಯ ಜಲ ವಿವಾದದ ಕಾನೂನಿನಲ್ಲೇ ಈ ಎಲ್ಲಾ ಅಂಶಗಳು ಅಡಕವಾಗಿವೆ. ಇದನ್ನು ಅರಿತು ಕೇಂದ್ರ ಸರ್ಕಾರ ತರಾತುರಿಯಲ್ಲಿ ರೈತರಿಗೆ ಮಾರಕವಾಗುವ ನಿರ್ಣಯ ಕೈಗೊಂಡಿದೆ. ಕಾವೇರಿ ನಿರ್ವಹಣಾ ಮಂಡಳಿ ರಚನೆಗೆ ರಾಜ್ಯ ಸರ್ಕಾರ ಯಾವುದೇ ಒಪ್ಪಿಗೆ ನೀಡಿಲ್ಲ. ಈ ಹಿನ್ನೆಲೆಯಲ್ಲಿ ಕೆಲವು ಅಂಶಗಳನ್ನು ತಿದ್ದುಪಡಿ ಮಾಡಿ ರಾಜ್ಯದ ನೆರವಿಗೆ ಬರುವಂತೆ ಪ್ರಧಾನಿಯವರನ್ನು ಕೋರುವುದಾಗಿ ತಿಳಿಸಿದರು.

Translate »