ರೈತರ ಬೆಳೆ, ಕೆರೆಗಳಿಗೆ ನೀರು ಹರಿಸಲು ಸಿಎಂ ಸೂಚನೆ
ಮೈಸೂರು

ರೈತರ ಬೆಳೆ, ಕೆರೆಗಳಿಗೆ ನೀರು ಹರಿಸಲು ಸಿಎಂ ಸೂಚನೆ

July 15, 2018

ಬೆಂಗಳೂರು: ಕಾವೇರಿ ನದಿ ಪಾತ್ರದ ರೈತರ ಬೆಳೆಗೆ ಹಾಗೂ ಕೆರೆಗಳ ಭರ್ತಿ ಮಾಡಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆದೇಶಿಸಿದ್ದಾರೆ.

ರಾಜ್ಯಕ್ಕೆ ಹೆಚ್ಚು ವರಿಯಾಗಿ ಒದಗಿ ರುವ 14.5 ಟಿಎಂಸಿ ನೀರನ್ನು ಪ್ರಸಕ್ತ ವರ್ಷದಿಂದಲೇ ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಹೆಚ್ಚುವರಿ ನೀರನ್ನು ಮೊದಲು ಕೆರೆಗಳಿಗೆ ಭರ್ತಿ ಮಾಡಿ ಉಳಿದ ನೀರನ್ನು ಕೃಷಿ ಭೂಮಿ ವಿಸ್ತರಣೆ ಮತ್ತು ಕುಡಿಯುವ ನೀರಿನ ಕ್ರಿಯಾ ಯೋಜನೆ ರೂಪಿಸುವಂತೆ ತಿಳಿಸಿದ್ದಾರೆ.

ಈಗಾಗಲೇ ನದಿ ಪಾತ್ರಕ್ಕೆ ನೀರು ಬಿಡಲಾಗುತ್ತಿದ್ದು ರೈತರು ಸಾಂಪ್ರದಾಯಿಕ ಬೆಳೆ ಜೊತೆಗೆ ನೆರೆ ರಾಜ್ಯ ತಮಿಳುನಾಡಿಗೂ ಬಹಳಷ್ಟು ನೀರು ಹರಿಯುತ್ತಿದೆ. ಸುಪ್ರೀಂ ಕೋರ್ಟ್ ಸೂಚನೆ ಅನ್ವಯ ಕರ್ನಾಟಕದ ಪಾಲಿನ ನೀರು ಬಳಸಿಕೊಳ್ಳುವುದರ ಜತೆಗೆ ತಮಿಳು ನಾಡಿಗೆ ಕೊಡಬೇಕಾದ ನೀರನ್ನೂ ಹರಿಸುತ್ತಿದ್ದೇವೆ. ಈ ಬಾರಿ ವ್ಯಾಪಕ ಮಳೆಯಿಂದ ಹೇಮಾವತಿ, ಹಾರಂಗಿ, ಕಬಿನಿ, ಕೆ.ಆರ್.ಎಸ್.ಜಲಾಶಯಗಳು ಭರ್ತಿಯಾಗಿವೆ ಎಂದರು.

Translate »