ಮಂಡ್ಯ: ಜೀವನದಿ ಕಾವೇರಿ ನದಿಯ ಸ್ವಚ್ಛತೆಗೆ ಶ್ರೀರಂಗಪಟ್ಟಣದಲ್ಲಿಂದು ಚಾಲನೆ ನೀಡಲಾಯಿತು. ಶ್ರೀರಂಗಪಟ್ಟಣದ ವೆಲ್ಲೆಸ್ಲಿ ಸೇತುವೆ ಬಳಿ ವಿವಿಧ ಸಂಘಟನೆ ಗಳ 300ಕ್ಕೂ ಹೆಚ್ಚು ಜನರು ಕಾವೇರಿ ನದಿಗಿಳಿದು ಬೆಳೆದಿದ್ದ ಜೊಂಡು, ಕಸ, ಕಡ್ಡಿಯನ್ನು ತೆರವುಗೊಳಿಸುವ ಮೂಲಕ ಸ್ವಚ್ಛತೆ ಕಾರ್ಯ ನಡೆಸಿದರು.ಪಟ್ಟಣದ ಉತ್ತರ ಕಾವೇರಿ ಸೇತುವೆಯ ಆಂಜನೇಯಸ್ವಾಮಿ ದೇವಾಲಯದ ಮುಂಭಾಗ ಭಾನುವಾರ ಮುಂಜಾನೆ ವೇದ ಬ್ರಹ್ಮ ಡಾ. ಭಾನುಪ್ರಕಾಶ್ ಶರ್ಮಾ ಅವರು ಕಾವೇರಿ ನದಿ ಸ್ವಚ್ಛತೆಗೆ ಚಾಲನೆ ನೀಡಿದರು. ಶ್ರೀರಂಗಪಟ್ಟಣ ನಾಗರಿಕ ಹಿತರಕ್ಷಣಾ ಸಮಿತಿ, ಅಭಿನವ ಭಾರತ್, ಚೈತನ್ಯ…