ನಾಳೆಯಿಂದ ಗಣಪತಿ ಸಚ್ಚಿದಾನಂದ ಶ್ರೀಗಳ ಪ್ರವಚನ
ಮೈಸೂರು

ನಾಳೆಯಿಂದ ಗಣಪತಿ ಸಚ್ಚಿದಾನಂದ ಶ್ರೀಗಳ ಪ್ರವಚನ

March 11, 2019

ಮೈಸೂರು: ಮೈಸೂರು-ಊಟಿ ರಸ್ತೆಯಲ್ಲಿರುವ ಶ್ರೀ ಅವಧೂತ ದತ್ತಪೀಠದಲ್ಲಿ ನಾಳೆ(ಮಾ.11)ಯಿಂದ ಏ.17ರವರೆಗೆ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಂದ ಶ್ರೀಮದ್ಭಾಗವತ ದಶಮ ಸ್ಕಂದ ಸಪ್ತಾಹ ಪ್ರವಚನವನ್ನು ಆಯೋಜಿಸಲಾಗಿದೆ.

ಪ್ರತಿದಿನ ಸಂಜೆ 7ರಿಂದ 9 ನಡೆಯುವ ಪ್ರವಚನ ದಲ್ಲಿ ಶ್ರೀಗಳು, ಭಗವಾನ್ ಶ್ರೀಕೃಷ್ಣನ ಕಥೆಗಳನ್ನು ಕನ್ನಡದಲ್ಲಿ ಮಹಾ ಉಪಮೆಗಳು ಮತ್ತು ಸುಂದರವಾದ ವ್ಯಾಖ್ಯಾನಗಳಿಂದ ವರ್ಣಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ತೆರಳಲು ಪ್ರತಿದಿನ ಚಾಮುಂಡಿಪುರಂ ವೃತ್ತದಿಂದ ಆಶ್ರಮದವರೆಗೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್ ಮನವಿ ಮಾಡಿದ್ದಾರೆ.

Translate »