ರಾಜ್ಯ ಮಟ್ಟದ ವಿಶೇಷ ಚೇತನರ ಬಾಸ್ಕೆಟ್ ಬಾಲ್ ಪಂದ್ಯಾವಳಿ
ಮೈಸೂರು

ರಾಜ್ಯ ಮಟ್ಟದ ವಿಶೇಷ ಚೇತನರ ಬಾಸ್ಕೆಟ್ ಬಾಲ್ ಪಂದ್ಯಾವಳಿ

March 11, 2019

ಮೈಸೂರು: ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಹಾಗೂ ಕರ್ನಾಟಕ ರಾಜ್ಯ ವ್ಹೀಲ್‍ಚೇರ್ ಬಾಸ್ಕೆಟ್ ಬಾಲ್ ಅಸೋಸಿಯೇಷನ್ ಜಂಟಿ ಆಶ್ರಯದಲ್ಲಿ ಭಾನುವಾರ ಹಮ್ಮಿ ಕೊಂಡಿದ್ದ ರಾಜ್ಯ ಮಟ್ಟದ ವ್ಹೀಲ್‍ಚೇರ್ ಬಾಸ್ಕೆಟ್‍ಬಾಲ್ ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದ 30 ತಂಡಗಳ ವಿಶೇಷ ಆಟಗಾರರು ತಮ್ಮ ವಿಶಿಷ್ಟ ಸಾಮಥ್ರ್ಯ ಸಾದರಪಡಿಸಿದರು.

ಮೈಸೂರಿನ ಜೆಸಿ ಕಾಲೇಜು ಆವ ರಣದ ಸ್ಪೋಟ್ರ್ಸ್ ಕಾಂಪ್ಲೆಕ್ಸ್‍ನಲ್ಲಿ ಏರ್ಪ ಡಿಸಿದ್ದ ಒಂದು ದಿನದ ಪಂದ್ಯಾವಳಿಗೆ ಅಂತಾರಾಷ್ಟ್ರೀಯ ಬಾಸ್ಕೆಟ್‍ಬಾಲ್ ಪಟು ಹೆಚ್.ಎಂ.ಬಾಂಧವ್ಯ ಚಾಲನೆ ನೀಡಿದರು. ಅರ್ಧ ಭಾಗದ ಬಾಸ್ಕೆಟ್‍ಬಾಲ್ ಕೋರ್ಟ್ ನಲ್ಲಿ ತಂಡವೊಂದರಲ್ಲಿ ಮೂವರು ಆಟ ವಾಡುವ ವ್ಹೀಲ್‍ಚೇರ್ ಬಾಸ್ಕೆಟ್‍ಬಾಲ್ ಪಂದ್ಯದಲ್ಲಿ ಭಾಗವಹಿಸಲು ಮಂಡ್ಯ, ಬೆಂಗಳೂರು, ದಾವಣಗೆರೆ, ಧಾರವಾಡ, ಹುಬ್ಬಳ್ಳಿ, ಬಿಜಾಪುರ ಮಾತ್ರವಲ್ಲದೆ, ಮಹಾರಾಷ್ಟ್ರದ ಸಾಂಗ್ಲಿಯಿಂದ ತಂಡಗಳು ಆಗಮಿಸಿದ್ದವು. ಪುರುಷರ ವಿಭಾಗದಲ್ಲಿ ಬೆಳಗಾವಿ ತಂಡ ಪ್ರಥಮ, ಬೆಂಗಳೂರು ತಂಡ ದ್ವಿತೀಯ ಹಾಗೂ ಮೈಸೂರು ತೃತೀಯ ಸ್ಥಾನ ಪಡೆದರೆ, ಮಹಿಳೆಯರ ವಿಭಾಗದಲ್ಲಿ ಬೆಳಗಾವಿ-ಎ ತಂಡ ಪ್ರಥಮ, ಬೆಳಗಾವಿ-ಬಿ ತಂಡ ದ್ವಿತೀಯ ಹಾಗೂ ಮೈಸೂರು ತಂಡ ತೃತೀಯ ಸ್ಥಾನ ಗಳಿಸಿದವು. ಪ್ರಥಮ ಸ್ಥಾನಕ್ಕೆ ಚಿನ್ನದ ಪದಕ, ದ್ವಿತೀಯ ಸ್ಥಾನಕ್ಕೆ ಬೆಳ್ಳಿ ಪದಕ ಹಾಗೂ ತೃತೀಯ ಸ್ಥಾನಕ್ಕೆ ಕಂಚು ಪದಕ ಎರಡೂ ವಿಭಾಗಗಳಲ್ಲೂ ನೀಡಲಾ ಯಿತು. ಅಲ್ಲದೆ, ಈ ಎಲ್ಲಾ ವಿಜೇತ ತಂಡಕ್ಕೆ ಪಾರಿತೋಷಕ ಸಹ ಪ್ರದಾನ ಮಾಡಲಾಯಿತು.

ಉದ್ಘಾಟನಾ ಸಮಾರಂಭದಲ್ಲಿ ಅತಿಥಿ ಗಳಾಗಿ ಜೆಎಸ್‍ಎಸ್ ಮಹಾವಿದ್ಯಾಪೀಠದ ತಾಂತ್ರಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಸಿ. ರಂಗನಾಥಯ್ಯ, ಬೆಂಗಳೂರು ಅಧ್ವಿತ್ ಗ್ಲೋಬಲ್ ಕಂಪನಿ ಮುಖ್ಯ ಕಾರ್ಯಾ ಚರಣೆ ಅಧಿಕಾರಿ ಕೆ.ಅಶೋಕ್‍ಕುಮಾರ್, ರಾಜ್ಯ ವ್ಹೀಲ್‍ಚೇರ್ ಬಾಸ್ಕೆಟ್‍ಬಾಲ್ ಅಸೋ ಸಿಯೇಷನ್ ಅಧ್ಯಕ್ಷ ಲೀರಾಯ್ ಸಿಮೋನ್ ಮತ್ತಿತ ರರು ಹಾಜರಿದ್ದರೆ, ಸಂಜೆ ನಡೆದ ಬಹುಮಾನ ವಿತರಣಾ ಸಮಾರಂಭದಲ್ಲಿ ಜೆಎಸ್‍ಎಸ್ ಮಹಾವಿದ್ಯಾಪೀಠದ ಬಿ.ಆರ್.ಉಮಾ ಕಾಂತ್, ಬಾಸ್ಕೆಟ್‍ಬಾಲ್ ತರಬೇತುದಾರ ಬಿ.ಎಸ್.ಸುರೇಶ್ ಮತ್ತಿತರರು ಹಾಜರಿದ್ದರು.

Translate »