ಮೈಸೂರಲ್ಲೂ 4 ದಿನಗಳ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ
ಮೈಸೂರು

ಮೈಸೂರಲ್ಲೂ 4 ದಿನಗಳ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಚಾಲನೆ

March 11, 2019

ಮೈಸೂರು: ಪೋಲಿಯೋ ನಿರ್ಮೂಲನೆ ನಿಟ್ಟಿನಲ್ಲಿ ಭಾನುವಾರ ದೇಶಾದ್ಯಂತ ನಡೆದ ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಮೈಸೂರು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶೇ.92.14ರಷ್ಟು ಐದು ವರ್ಷದೊಳಗಿನ 230298 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಡಾ.ಬಿ.ಬಸವರಾಜು ತಿಳಿಸಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ 2,49,954 ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ. ವಿವಿಧ ತಾಲೂಕುಗಳಲ್ಲಿ 1,11,367 ಹಾಗೂ ಮೈಸೂರು ನಗರದಲ್ಲಿ 1,38,587 ಮಕ್ಕ ಳಿಗೆ ಲಸಿಕೆ ಹಾಕಬೇಕಾಗಿದೆ. ನಗರದಲ್ಲಿ 414, ತಾಲೂಕುಗಳಲ್ಲಿ 1190 ಲಸಿಕಾ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ 509 ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿದೆ. 1604 ಲಸಿಕಾ ಕೇಂದ್ರಗಳ ಮೇಲ್ವಿ ಚಾರಣೆಗೆ 326 ಮೇಲ್ವಿಚಾರಕರನ್ನು ನಿಯೋಜಿಸಲಾಗಿತ್ತು. ಲಸಿಕೆ ಹಾಕುವು ದಕ್ಕಾಗಿ 6416 ಸಿಬ್ಬಂದಿಗಳನ್ನು ಬಳಸಿ ಕೊಳ್ಳಲಾಗುತ್ತಿದೆ. ನಾಳೆಯಿಂದ ಎರಡು ದಿನ ಆಶಾ ಕಾರ್ಯಕರ್ತೆಯರು, ಅಂಗನ ವಾಡಿ ಕಾರ್ಯಕರ್ತೆಯರೊಂದಿಗೆ ದಾದಿ ಯರು ಮನೆ ಮನೆಗೆ ತೆರಳಿ ನವಜಾತ ಶಿಶುವಿನಿಂದ ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್ ಪೋಲಿಯೋ ಲಸಿಕೆ ಹಾಕಲಿದ್ದಾರೆ ಎಂದು ವಿವರಿಸಿದರು.

ಒಂದು ಮೊಬೈಲ್ ಯೂನಿಟ್ ಹಾಗೂ 23 ತಂಡಗಳನ್ನು ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ, ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರ ಸೇರಿದಂತೆ ವಿವಿಧೆಡೆಗಳಲ್ಲಿ ಮಕ್ಕಳಿಗೆ ಲಸಿಕೆ ಹಾಕುವುದರಲ್ಲಿ ನಿರತರಾಗಿರುತ್ತಾರೆ.

ಕಳೆದ ವರ್ಷಗಳಲ್ಲಿ 3 ಹಂತಗಳಲ್ಲಿ ಪಲ್ಸ್ ಪೆÇೀಲಿಯೋ ಅಭಿಯಾನ ನಡೆಸುತ್ತಿz್ದÉೀವೆ. ಈಗಾಗಲೇ ದೇಶ ಪೆÇೀಲಿಯೋ ಮುಕ್ತ ಗೊಂಡಿದೆ. ಅದರಲ್ಲೂ ನಮ್ಮ ಜಿಲ್ಲೆ ಸಂಪೂರ್ಣ ಪೆÇೀಲಿಯೋ ಮುಕ್ತ ಗೊಂಡಿದೆ. ಆದ್ದರಿಂದ ಈ ಬಾರಿ ಒಂದೇ ಸುತ್ತಿನ ಅಭಿಯಾನ ಹಮ್ಮಿಕೊಂಡಿದೆ ಎಂದರು.

ಮನೆ ಮನೆಗೆ: ನಗರ ಪ್ರದೇಶದಲ್ಲಿ ಮೂರು ದಿನ, ಗ್ರಾಮಾಂತರ ಪ್ರದೇಶದಲ್ಲಿ 2 ದಿನ ಅಭಿಯಾನ ನಡೆಯಲಿದೆ. ಸಾರ್ವಜ ನಿಕರು, ಪೋಷಕರು, ಸಂಘ-ಸಂಸ್ಥೆ ಮುಖಂ ಡರು ಲಸಿಕೆ ಅಭಿಯಾನಕ್ಕೆ ಸಹಕಾರ ನೀಡಿ ದ್ದಾರೆ. ಇದರಿಂದ ಯಶಸ್ವಿಯಾಗಿದೆ ಎಂದರು.
ಇದಕ್ಕೂ ಮುನ್ನ ರಾಷ್ಟ್ರೀಯ ಪಲ್ಸ್ ಪೋಲಿಯೋ ಅಭಿಯಾನಕ್ಕೆ ಭಾನುವಾರ ಬೆಳಿಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ವಿವಿ ಮೊಹಲ್ಲಾದಲ್ಲಿರುವ ಹೆರಿಗೆ ಆಸ್ಪತ್ರೆಯಲ್ಲಿ ಮಕ್ಕಳಿಗೆ ಲಸಿಕೆ ಹಾಕುವ ಮೂಲಕ ನಾಲ್ಕು ದಿನಗಳ ಅಭಿಯಾನಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿ, 2014ರಲ್ಲೇ ಭಾರತ ಪೆÇೀಲಿಯೋ ಮುಕ್ತ ದೇಶ ಎಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಣೆ ಮಾಡಿದೆ. ಆದರೂ ಸದÀೃಢ ಭಾರತಕ್ಕಾಗಿ ಉತ್ತಮ ಪ್ರಜೆಗಳನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡು ಅಂದಿ ನಿಂದಲೂ ಕಟ್ಟು ನಿಟ್ಟಾಗಿ ಪಲ್ಸ್ ಪೆÇೀಲಿಯೋ ರಾಷ್ಟ್ರೀಯ ಅಭಿಯಾನ ನಡೆಸಿಕೊಂಡು ಬಂದಿವೆ. ಜಿಲ್ಲೆಯೂ ಪೆÇೀಲಿಯೋ ಮುಕ್ತ ಜಿಲ್ಲೆಯಾಗಿದೆ. ಆದರೂ ಪೆÇೀಷ ಕರು ಮರೆಯದೆ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಿ ಎಂದು ಮನವಿ ಮಾಡಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಇದೊಂದು ಮಹತ್ತರವಾದ ಕಾರ್ಯ ಕ್ರಮ. ಸುತ್ತಮುತ್ತಲಿನ ಕುಟುಂಬಗಳಲ್ಲಿ ರುವ ಮಕ್ಕಳಿಗೂ ಹನಿ ಹಾಕಿಸುವಂತೆ ಪೋಷಕರು ತಿಳಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ಮೇಯರ್ ಪುಷ್ಪ ಲತಾ ಜಗನ್ನಾಥ್, ವಿಶ್ವ ಆರೋಗ್ಯ ಸಂಸ್ಥೆಯ ಸರ್ವೇಕ್ಷಣ್ ವೈದ್ಯಾಧಿಕಾರಿ ಸುಧೀರ್ ನಾಯಕ್, ಮುಡಾ ಅಧ್ಯಕ್ಷ ವಿಜಯ್ ಕುಮಾರ್, ಆರ್‍ಸಿಹೆಚ್ ಅಧಿಕಾರಿ ಡಾ.ಎಲ್.ರವಿ, ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ರವಿ, ರಾಜ್ಯ ನೋಡಲ್ ಅಧಿಕಾರಿ ಡಾ.ಲತಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿ ಕೆ.ಪದ್ಮ, ಪಾಲಿಕೆ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Translate »