ಅ.8ರಂದು ದಸರೆಗೆ ಹೆಚ್ಚುವರಿ ಪೊಲೀಸರ ಆಗಮನ
ಮೈಸೂರು

ಅ.8ರಂದು ದಸರೆಗೆ ಹೆಚ್ಚುವರಿ ಪೊಲೀಸರ ಆಗಮನ

October 6, 2018

ಮೈಸೂರು: ದಸರೆಗೆ ನಿಯೋಜನೆಗೊಂಡಿರುವ ಹೆಚ್ಚುವರಿ ಪೊಲೀಸರ ಮೊದಲ ತಂಡವು ಅಕ್ಟೋಬರ್ 8ರಂದು ಮೈಸೂರು ತಲುಪಲಿದೆ ಎಂದು ನಗರ ಪೊಲೀಸ್ ಕಮೀಷ್ನರ್ ಡಾ.ಎ.ಸುಬ್ರಹ್ಮಣ್ಯೇಶ್ವರ ರಾವ್ ತಿಳಿಸಿದ್ದಾರೆ.

ಅಕ್ಟೋಬರ್ 10ರಂದು 2018ರ ದಸರಾ ಮಹೋತ್ಸವ ಉದ್ಘಾಟನೆಯಾಗಲಿದ್ದು, 2 ದಿನ ಮುಂಚಿತವಾಗಿ ಹೊರ ಜಿಲ್ಲೆ ಗಳ ಹೆಚ್ಚುವರಿ ಭದ್ರತಾ ಸಿಬ್ಬಂದಿ ಮೈಸೂ ರಿಗೆ ಆಗಮಿಸಲಿದ್ದಾರೆ. ಅವರಿಗೆ ಊಟ- ವಸತಿ ಸೌಲಭ್ಯ ಒದಗಿಸಲು ಸಿದ್ಧತೆ ಮಾಡಿ ಕೊಳ್ಳಲಾಗಿದೆ ಎಂದು ತಿಳಿಸಿದರು.

ಎರಡನೇ ತಂಡದ ಪೊಲೀಸರು ಅಕ್ಟೋ ಬರ್ 8ರಂದು ಬರಲಿದ್ದು, ವಿಜಯ ದಶಮಿ ಮೆರವಣಿಗೆ ಹಾಗೂ ಪಂಜಿನ ಕವಾ ಯತು ಪ್ರದರ್ಶನದಲ್ಲಿ ಅವರನ್ನು ಕರ್ತವ್ಯಕ್ಕೆ ನಿಯೋಜನೆ ಮಾಡಲಾಗುವುದು ಎಂದ ಅವರು, ಹೊರಗಿನ ಸಿಬ್ಬಂದಿಗೆ ನಿರ್ವಹಿಸಬೇಕಾದ ಕರ್ತವ್ಯ, ಜವಾಬ್ದಾರಿಗಳ ಬಗ್ಗೆ ಸಿಎಆರ್ ಮೈದಾನದಲ್ಲಿ ತರಬೇತಿ ನೀಡಿ ಸಜ್ಜುಗೊಳಿಸಲಾಗುವುದು ಎಂದು ಹೇಳಿದರು.

ಅಕ್ಟೋಬರ್ 14ರಂದು ಅರಮನೆ ಆವರಣದಿಂದ ಜಾನಪದ ಕಲಾ ತಂಡಗಳ ಪ್ರದರ್ಶನದೊಂದಿಗೆ ಜಂಬೋ ಪಡೆಯು ಮೆರವಣಿಗೆ ನಡೆಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿರುವುದರಿಂದ ಅದಕ್ಕೆ ತಾವು ಪೂರ್ವ ತಯಾರಿ ನಡೆಸುತ್ತಿರುವುದಾಗಿಯೂ ಕಮೀಷ್ನರ್ ತಿಳಿಸಿದರು.

Translate »