ಗಡಿ ಕಾಯುವ ಸೈನಿಕರಿಗೆ ಮೈಸೂರಿನ ಟೋಪಿ, ಸ್ಕಾರ್ಫ್!
ಮೈಸೂರು

ಗಡಿ ಕಾಯುವ ಸೈನಿಕರಿಗೆ ಮೈಸೂರಿನ ಟೋಪಿ, ಸ್ಕಾರ್ಫ್!

October 6, 2018

ಮೈಸೂರು:  ಗಡಿ ಕಾಯುವ ಸೈನಿಕರಿಗೆ ಮೈಸೂರಿನಲ್ಲಿ ಟೋಪಿ ಮತ್ತು ಸ್ಕಾರ್ಫ್ ತಯಾರಾಗುತ್ತಿದೆ. ಚೆನ್ನೈ ಮೂಲದ ಮದರ್ ಇಂಡಿ ಯಾಸ್ ಕ್ರೋಷೆ ಕ್ವೀನ್ಸ್ ಸಂಸ್ಥೆಯ ಪ್ರಾದೇಶಿಕ ಸಂಯೋಜಕಿ ಶಾರದಾ ಸಿ.ಅರಸ್ ಅವರು ಇಂದಿಲ್ಲಿ ಈ ವಿಷಯ ತಿಳಿಸಿದರು.

ಹ್ಯಾಟ್ರಿಕ್ ಗಿನ್ನಿಸ್ ದಾಖಲೆ ಮಾಡಿರುವ ಮದರ್ ಇಂಡಿಯಾಸ್ ಕ್ರೋಷೆ ಕ್ವೀನ್ಸ್ ಸಂಸ್ಥೆಯು `ರಿಟರ್ನ್ ವಿತ್ ಥ್ಯಾಂಕ್ಸ್ ಟು ಇಂಡಿಯನ್ ಬ್ರೇವ್ ಬ್ರದರ್ಸ್’ ಘೋಷವಾಕ್ಯದಡಿ ಗಡಿ ಕಾಯುವ ಸೈನಿಕರಿಗಾಗಿ ಮಿಲಿಟರಿ ಹಸಿರು ಬಣ್ಣದ ಉಣ್ಣೆಯಿಂದ ಬೆಚ್ಚಗಿನ ಸ್ಕಾರ್ಫ್ ಮತ್ತು ಟೋಪಿಗಳನ್ನು ತಯಾರಿಸುತ್ತಿದೆ. ನ.25ರಂದು ಅಹಮದಾಬಾದ್‍ನ ಆರ್ಮಿ ಕ್ಯಾಂಪ್‍ನಲ್ಲಿ ಆಯೋಜಿತವಾಗಿರುವ ಕಾರ್ಯಕ್ರಮದಲ್ಲಿ ಸೈನ್ಯದ ಪದಾಧಿಕಾರಿಗಳಿಗೆ ಇವುಗಳನ್ನು ಒಪ್ಪಿಸಲಾಗುವುದು ಎಂದು ಅವರು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೇವೆಯಲ್ಲಿ ಟಿ.ನರಸೀಪುರದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ, ಅದರೊಂದಿಗೆ ಮೈಸೂರು ಪ್ರಾಂತ್ಯದ 7 ಜನ ಸದಸ್ಯರು ಭಾಗಿಯಾಗಿದ್ದಾರೆ. ಈ ಭಾಗದಿಂದ 130 ಸೆಟ್‍ಗಳನ್ನು ನೀಡಲಾಗುತ್ತಿದೆ ಎಂದರು.

ಚೆನ್ನೈನ ಶುಭಶ್ರೀ ನಟರಾಜನ್ ಸ್ಥಾಪಿಸಿದ ಸಂಸ್ಥೆಯು ಮರೆತು ಹೋಗಿರುವ ಕ್ರೋಷೆ ಕಲೆಯನ್ನು ಮತ್ತೆ ಪರಿಚಯಿಸುತ್ತಿದ್ದು, ವಿಶ್ವದ 2000ಕ್ಕಿಂತ ಹೆಚ್ಚು ಭಾರತೀಯ ಮಹಿಳೆಯರಿಂದ ತಯಾರಿಸಲಾದ 11,148 ಚದರ ಮೀಟರ್‌ನಷ್ಟು ದೊಡ್ಡ ಹೊದಿಕೆಯಿಂದ ದಾಖಲೆ ಮುರಿಯಿತು. 2017 ರಲ್ಲಿ 14,089 ಕಿಲೋ ಮೀಟರ್‌ಗಳ ವಿಶ್ವದ ಅತಿ ದೊಡ್ಡ ಸ್ಕಾರ್ಫ್ ಮಾಡಿ 2ನೇ ಗಿನ್ನಿಸ್ ವಿಶ್ವದಾಖಲೆ ಸ್ಥಾಪಿಸಿದರು.

ಬಳಿಕ ಅವರ ಹ್ಯಾಟ್ರಿಕ್ ವಿಶ್ವ ದಾಖಲೆ 2014ರಲ್ಲಿ ಯುಕೆಯಿಂದ ಸ್ಥಾಪಿತವಾದ 13,348 ಕ್ರೋಷೆ ಶಿಲ್ಪಕಲೆಗಳ ವಿಶ್ವ ದಾಖಲೆ ಯನ್ನು ಸಂಸ್ಥೆಯ ಮಹಿಳೆಯರು 58,917 ಶಿಲ್ಪಕಲೆಗಳನ್ನು ತಯಾರಿಸಿ ಗಿನ್ನಿಸ್ ದಾಖಲೆ ಸೃಸ್ಟಿಸಿದೆ ಎಂದು ಸಂಸ್ಥೆಯ ಪರಿಚಯ ಮಾಡಿಕೊಟ್ಟರು.

ಸುದ್ದಿಗೋಷ್ಠಿಯಲ್ಲಿ ಕಲಾ ಶಿಕ್ಷಕಿ ಅನಿತಾ ಜೈರಾಮ್, ತನುಜಾ ಇನ್ನಿತರು ಉಪಸ್ಥಿತರಿದ್ದರು.

Translate »