ಮೈಸೂರು ಜೈಲಿನಿಂದ  9 ಮಂದಿ ಖೈದಿಗಳ ಬಿಡುಗಡೆ
ಮೈಸೂರು

ಮೈಸೂರು ಜೈಲಿನಿಂದ  9 ಮಂದಿ ಖೈದಿಗಳ ಬಿಡುಗಡೆ

October 6, 2018

ಮೈಸೂರು: 150ನೇ ಮಹಾತ್ಮ ಗಾಂಧಿ ಜಯಂತಿ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದ ನಿರ್ದೇಶನದಂತೆ ಮೈಸೂರು ಕೇಂದ್ರ ಕಾರಾಗೃಹದ 9 ಮಂದಿ ಸಾಮಾನ್ಯ ಸಜಾ ಬಂಧಿಗಳನ್ನು ಸನ್ನಡತೆ ಆಧಾರದ ಮೇಲೆ ಇಂದು ಬಿಡುಗಡೆ ಮಾಡಲಾಯಿತು.
ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾ ಲಯದ ನ್ಯಾಯಾಧೀಶ ಎಸ್.ಕೆ.ಒಂಟಿಗೋಡಿ ಅವರು 9 ಮಂದಿಯನ್ನು ಪ್ರಮಾಣ ಪತ್ರ ನೀಡಿ, ಬೀಳ್ಕೊಟ್ಟರು. ಅದೇ ವೇಳೆ ಎನ್.ವಿ. ಶ್ರೀಧರ ರಾವ್ ಬರೆದಿರುವ `ಗಾಂಧೀಜಿ ಮತ್ತು ಸ್ವಾತಂತ್ರ್ಯ ಸಂಗ್ರಾಮ’, ಸತ್ಯ ರಥ ಅವರ `ಸೆರೆಮನೆಯಲ್ಲಿ ಮಹಾತ್ಮ’ ಹಾಗೂ ಡಾ. ಎಸ್.ಶಿವರಾಜಪ್ಪ ಅವರ `ಗಾಂಧೀಜಿ ಜಾಗತಿಕ ಚಿಂತನೆಗಳು’ ಪುಸ್ತಕಗಳು ಹಾಗೂ ಜೈಲಿನಲ್ಲೇ ತಯಾರಾದ ಬೆಡ್‍ಶೀಟ್ ಹಾಗೂ ಬ್ಲಾಂಕೆಟ್ ಅನ್ನು ಬಿಡುಗಡೆಗೊಂಡ ಖೈದಿಗಳಿಗೆ ಉಡು ಗೊರೆಯಾಗಿ ನೀಡಲಾಯಿತು.

ನಂತರ ಮಾತನಾಡಿದ ನ್ಯಾಯಾಧೀ ಶರು, ಮಹಾತ್ಮಗಾಂಧಿಯವರ 150ನೇ ಜಯಂತಿ ಆಚರಣೆ ಅಂಗವಾಗಿ ಜೈಲು ಬಂಧಿಗಳಿಗೆ ವಿಶೇಷ ಮಾಫಿ ನೀಡಿ ಬಿಡು ಗಡೆ ಮಾಡುತ್ತಿದ್ದು, ಇವರು ಶೇ. 66ರಷ್ಟು ಶಿಕ್ಷೆ ಪೂರೈಸಿದ್ದಾರೆ ಎಂದರು.
ವರ್ಣಭೇದ ನೀತಿ ಹಾಗೂ ಬ್ರಿಟಿಷರ ದಬ್ಬಾ ಳಿಕೆಯಿಂದ ಬೇಸತ್ತು ಮಹಾತ್ಮಗಾಂಧಿ ಅವರು ಹೋರಾಟ ಆರಂಭಿಸಿ ದೇಶದ ಜನರ ಸಹ ಕಾರದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಇದರಲ್ಲಿ ಹಲವರ ತ್ಯಾಗ, ಬಲಿದಾನವಿದೆ ಎಂದ ಎಸ್.ಕೆ.ಒಂಟಿಗೋಡಿ ಅವರು, ಕೆಟ್ಟ ಘಳಿಗೆಯಲ್ಲಿ ವಿವೇಚನೆ ಕಳೆದುಕೊಂಡು ಅಪ ರಾಧ ಎಸಗಿದ ಪರಿಣಾಮ ನೀವು ಸೆರೆಮನೆ ವಾಸ ಅನುಭವಿಸುತ್ತಿದ್ದೀರಿ ಎಂದರು.

ಜೈಲಿಗೆ ಬಂದಾಗ ತಪ್ಪು ಮಾಡಬಾರ ದೆನಿ ಸುತ್ತದೆ. ಮನಪರಿವರ್ತನೆಯಾಗಿ ಹೊರಗೆ ಹೋಗುತ್ತಿರುವ ನೀವು ಒಮ್ಮೆ ಮಾಡಿದ ತಪ್ಪನ್ನು ಪುನಃ ಮಾಡದೆ ಸ್ವಾಭಿಮಾನದಿಂದ, ಶಾಂತಿಯುತವಾಗಿ ಸಮಾಜದಲ್ಲಿ ಜೀವನ ನಡೆಸಿ ಎಂದೂ ನ್ಯಾಯಾಧೀಶರು ನುಡಿದರು.

ಜಿಲ್ಲಾ ಸರ್ಜನ್ ಡಾ. ಎಂ.ಪಶುಪತಿ, ಪ್ರಿಸನ್ ಮಿನಿಸ್ಟ್ರಿ ಇಂಡಿಯಾ ಸಂಸ್ಥೆ ಮುಖ್ಯಸ್ಥೆ ಸಿಸ್ಟರ್ ಜಾಯ್ಸ್, ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ವಿ.ಆನಂದ ರೆಡ್ಡಿ ಹಾಗೂ ಕಾರಾ ಗೃಹ ತರಬೇತಿ ಕೇಂದ್ರದ ಪ್ರಾಂಶುಪಾಲ ವಿ.ಶೇಷಮೂರ್ತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಬಿಡುಗಡೆಗೊಂಡ ನಾಗ ರಾಜ ಅಲಿಯಾಸ್ ನಾಗ ಅಲಿಯಾಸ್ ಪರ ಮೇಶ, ಚಂದ್ರಶೇಖರ, ಹೆಚ್.ಪಿ.ಶಿವಕುಮಾರ್, ಚಿನ್ನಪ್ಪ, ಅಣ್ಣಪ್ಪ, ಶಿವಲಿಂಗ, ರಾಜು, ಈರಪ್ಪ ಹಾಗೂ ತಿಮ್ಮೇಗೌಡ ಅವರನ್ನು ಜೈಲು ಸಿಬ್ಬಂದಿ ಹಾಗೂ ಖೈದಿಗಳು ಬೀಳ್ಕೊಟ್ಟರು. ಶಿಕ್ಷಾ ಅವಧಿ ಮುಗಿದಿದ್ದ ಕಾರಣ ದೇವ ರಾಜು ಎಂಬುವರು ಅಕ್ಟೋಬರ್ 3ರಂದೇ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

Translate »