ಮೈಸೂರು: ದಸರಾ ಮಹೋತ್ಸವದ ಹಿನ್ನೆಲೆಯಲ್ಲಿ ಅರಮನೆಯ ಆವರಣದಲ್ಲಿರುವ ಸವಾರಿ ತೊಟ್ಟಿಯಲ್ಲಿ ಸೋಮವಾರ ನಡೆದ ಮೈನವಿರೇಳಿಸುವ ಜೆಟ್ಟಿಗಳ ಕಾಳಗ ಆರಂಭವಾದ ಒಂದೂವರೆ ನಿಮಿಷದಲ್ಲಿಯೇ ಚಾಮರಾಜನಗರದ ಜೆಟ್ಟಿಯ ತಲೆ, ಕೆನ್ನೆಯಿಂದ ರಕ್ತ ಚಿಮ್ಮುವ ಮೂಲಕ ಅಂತ್ಯಗೊಂಡಿತು. ಸಂಪ್ರದಾಯದಂತೆ ಜಂಬೂಸವಾರಿಯ ದಿನ ಜೆಟ್ಟಿ ಕಾಳಗ ನಡೆಯಬೇಕಾಗಿತ್ತು. ಆದರೆ ಮಹಾರಾಣಿ ಪ್ರಮೋದಾ ದೇವಿ ಒಡೆಯರ್ ಅವರ ತಾಯಿ ಪುಟ್ಟ ರತ್ನಮ್ಮಣ್ಣಿ ಹಾಗೂ ಶ್ರೀಕಂಠದತ್ತ ನರಸಿಂಹ ರಾಜ ಒಡೆಯರ್ ಸಹೋದರಿ ವಿಶಾಲಾಕ್ಷಿದೇವಿ ನಿಧನದಿಂದಾಗಿ ಮುಂದೂಡಲ್ಪಟ್ಟಿದ್ದ ಜೆಟ್ಟಿ ಕಾಳಗವನ್ನು ಅರಮನೆಯ ಪುರೋಹಿ ತರ ಸಲಹೆ ಮೇರೆಗೆ…
ರೈತ ದಸರಾ: ಜೋಡೆತ್ತಿನ ಗಾಡಿಯಲ್ಲಿ ಅನ್ನದಾತನ ಅದ್ಧೂರಿ ಮೆರವಣಿಗೆ
October 13, 2018ಮೈಸೂರು: ದಸರಾ ಅಂಗವಾಗಿ ರೈತ ದಸರಾ ಉಪ ಸಮಿತಿ ವತಿಯಿಂದ ಶುಕ್ರವಾರ ರೈತ ದಸರಾ ಮೆರವಣಿಗೆ ಮೈಸೂರಿನಲ್ಲಿ ಅದ್ಧೂರಿಯಿಂದ ನಡೆಯಿತು. ವಿವಿಧೆಡೆಯಿಂದ ಆಗಮಿಸಿದ್ದ ನೂರಾರು ರೈತರು ಸಂಭ್ರಮ ದಿಂದ ಪಾಲ್ಗೊಂಡಿದ್ದರು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ. ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ಅವರೊಂದಿಗೆ ಕೃಷಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ, ಮೈಸೂರು ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿ, ಪುಷ್ಪಾರ್ಚನೆ ಮಾಡಿ, ಬಳಿಕ ನಗಾರಿ ಬಾರಿಸುವ ಮೂಲಕ ಅದ್ಧೂರಿ ರೈತ ದಸರಾ ಮೆರವಣಿಗೆಯನ್ನು…
ಮೈಸೂರು ದಸರೆಗೆ ಹೈಟೆಕ್ ಮೊಬೈಲ್ ಕಮಾಂಡ್ ಭದ್ರತೆ
October 13, 2018ಮೈಸೂರು: ಈ ಬಾರಿ ದಸರೆಗೆ ಭಾರೀ ಬಿಗಿ ಭದ್ರತೆ ಮಾಡಿರುವ ಪೊಲೀಸರು, ಮೊದಲ ಬಾರಿಗೆ ಹೈಟೆಕ್ ಮೊಬೈಲ್ ಕಮಾಂಡ್ ಕಣ್ಗಾವಲು ವ್ಯವಸ್ಥೆಯೊಂದಿಗೆ ಕಟ್ಟೆಚ್ಚರ ವಹಿಸಿದ್ದಾರೆ. ಲಕ್ಷಾಂತರ ಮಂದಿ ಒಂದೆಡೆ ಸೇರುವ ಸ್ಥಳದಲ್ಲಿ ಉಂಟಾಗುವ ಅಹಿತಕರ ಘಟನೆಗಳ ನಿಯಂತ್ರಿಸಿ, ನಿರ್ವಹಣೆ ಮಾಡುವ ಸಲುವಾಗಿ ಕಳೆದ 5 ತಿಂಗಳ ಹಿಂದೆ ಸರ್ಕಾರ ಮೈಸೂರು ನಗರಕ್ಕೆ ಮೊಬೈಲ್ ಕಮಾಂಡ್ ಸೆಂಟರ್ ಹೈಟೆಕ್ ಸಾಧನಗಳನ್ನು ಹೊಂದಿರುವ ವಾಹನವನ್ನು ನೀಡಿದೆ. ಈ ವಾಹನವು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಸಿಎಆರ್ ಮೈದಾನದಲ್ಲಿರುತ್ತದೆ. ಗಣ್ಯರ ಸಮಾವೇಶಗಳು, ರಾಜಕೀಯ…
ಪುಟಾಣಿಗಳ ಹಾಡು, ಕುಣಿತ: ನೆರೆದವರ ಕಣ್ಣಿಗೆ ಹಬ್ಬ
October 13, 2018ಮೈಸೂರು: ದೊಡ್ಡ ವೇದಿಕೆಯಲ್ಲಿ ಪುಟಾಣಿಗಳ ಕಲರವ, ಚಿಣ್ಣರ ನೃತ್ಯೋತ್ಸವಕ್ಕೆ ಮನಸೋತ ಪ್ರೇಕ್ಷಕರು ಸಿಳ್ಳೆ, ಚಪ್ಪಾಳೆ ಮೂಲಕ ಪ್ರೋತ್ಸಾಹ ನೀಡಿದರು. ಮಹಿಳಾ ಮತ್ತು ಮಕ್ಕಳ ದಸರಾ ಉಪಸಮಿತಿ ವತಿಯಿಂದ ಜೆಕೆ ಮೈದಾನದಲ್ಲಿ ಆಯೋಜಿಸಿದ್ದ ಚಿಣ್ಣರ ಮೇಳದಲ್ಲಿ ವಿಶೇಷ ಉಡುಗೆ ತೊಟ್ಟ ಚಿಣ್ಣರು ಜಾನಪದ, ಸಿನಿಮಾ ಹಾಡುಗಳಿಗೆ ಕುಣಿದು ಕುಪ್ಪಳಿಸಿ ಸಂಭ್ರಮಿಸಿದರೆ, ಪ್ರೇಕ್ಷಕರು ಮಕ್ಕಳ ನೃತ್ಯವನ್ನು ಕಣ್ತುಂಬಿಕೊಂಡು ಸಂತೋಷಪಟ್ಟರು. ಮೊದಲಿಗೆ ಬಿಳಿಕೆರೆ ತಂಡವು ‘ಚನ್ನಪ್ಪ ಚನ್ನೇಗೌಡ ಕುಂಬಾರ ಮಾಡಿದ ಕೊಡನವ್ವ’ ಜಾನಪದ ಹಾಡಿಗೆ ಹೆಜ್ಜೆ ಹಾಕುವ ಮೂಲಕ ಎಲ್ಲರ ಮೆಚ್ಚುಗೆ…
ಮೈಸೂರಲ್ಲಿ ಗಮನ ಸೆಳೆದ ದಸರಾ ಕರಾಟೆ ಮ್ಯಾರಥಾನ್
October 13, 2018ಮೈಸೂರು: ದಸರಾ ಅಂಗವಾಗಿ ಮೈಸೂರು ಕರಾಟೆ ಅಸೋಸಿ ಯೇಷನ್ ವತಿಯಿಂದ ಶುಕ್ರವಾರ ಮೈಸೂ ರಿನಲ್ಲಿ ದಸರಾ ಕರಾಟೆ ಮ್ಯಾರಥಾನ್ ನಡೆಸ ಲಾಯಿತು. ರಾಮಸ್ವಾಮಿ ವೃತ್ತದಿಂದ ಚಾಮರಾಜ ಜೋಡಿ ರಸ್ತೆ, ಗನ್‍ಹೌಸ್ ಮೂಲಕ ಮೈಸೂರು ಅರಮನೆ ಆವರಣ ದವರೆಗೆ ನೂರಾರು ಕರಾಟೆ ಪಟುಗಳು ಓಡಿದರು. ದಸರಾ ಸಂಭ್ರಮದಲ್ಲಿ ತಾವು ಭಾಗವಹಿಸಿರುವುದಾಗಿ ತಿಳಿಸಿದರು. ಬಳಿಕ ಅರಮನೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕರಾಟೆ ಮ್ಯಾರಥಾನ್ ನಲ್ಲಿ ಜಯಗಳಿಸಿದ ಕ್ರಮವಾಗಿ ವಿಜೇತ ರಾದ ಲೋಕೇಶ್, ಕಿಶಲಿಯಾ ಹಾಗೂ ಧಮ ಕಟ್ಟಿ ಅವರಿಗೆ ಕ್ರಮವಾಗಿ…
ರೂ.999ರಲ್ಲಿ ಮೈಸೂರು-ಬೆಂಗಳೂರು ವಿಮಾನ ಪ್ರಯಾಣ
October 12, 2018ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆ `ಆಕಾಶ ಅಂಬಾರಿ’ ವಿಮಾನ ಸೇವೆ ಆರಂಭಿಸಿದ್ದು, ಗುರುವಾರ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ಈ ವಿಮಾನದಲ್ಲಿ ಪ್ರಯಾಣಿಸುವುದರೊಂದಿಗೆ ಸೇವೆಯನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಮೈಸೂರಿನ ಮಂಡಕಳ್ಳಿ ವಿಮಾನ ನಿಲ್ದಾಣದಿಂದ `ಆಕಾಶ ಅಂಬಾರಿ’ಯಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸುವ ಮುನ್ನ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಸಾ.ರಾ.ಮಹೇಶ್, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಸೂಚನೆ ಮೇರೆಗೆ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಬರುವ ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಪ್ರವಾಸೋದ್ಯಮ ಇಲಾಖೆ,…
ಖಾಸಗಿ ದರ್ಬಾರ್ ಆರಂಭ
October 11, 2018ಮೈಸೂರು: ನಾಡಹಬ್ಬ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯುವುದರೊಂದಿಗೆ ಅರಮನೆಯಲ್ಲಿ ಖಾಸಗಿ ದರ್ಬಾರ್ ಸಹ ಬುಧವಾರದಿಂದ ಆರಂಭವಾಯಿತು. ನವರಾತ್ರಿಯ ಮೊದಲ ದಿನವಾದ ಇಂದು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ರತ್ನ ಖಚಿತ ಸಿಂಹಾಸನಾರೂಢರಾಗಿ ಸಂಪ್ರದಾಯದಂತೆ ಕೆಲ ವಿಧಿ-ವಿಧಾನಗಳನ್ನು ಪೂರೈಸಿ, ಗಮನ ಸೆಳೆದರು. ಅರಮನೆಯ ದರ್ಬಾರ್ ಹಾಲ್‍ನಲ್ಲಿ ಇಂದು ಬೆಳಗಿನಿಂದ ಮಧ್ಯಾಹ್ನ ದವರೆಗೆ ವಿವಿಧ ಪೂಜಾ ಕೈಂಕರ್ಯ ಗಳಲ್ಲಿ ರಾಜ ವಂಶಸ್ಥರಾದ ಪ್ರಮೋದಾದೇವಿ ಒಡೆಯರ್, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹಾಗೂ ತ್ರಿಷಿಕಾಕುಮಾರಿ ಒಡೆಯರ್ ಪಾಲ್ಗೊಂಡು, ಖಾಸಗಿ ದರ್ಬಾರ್‌ಗೆ…
ಮೈಸೂರು ಅರಮನೆ ಅಂಗಳದಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭ
October 11, 2018ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಮೈಸೂರು ವಿಶ್ವವಿದ್ಯಾನಿಲಯಕ್ಕೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರು ನಾಮಕರಣ ಮಾಡುವ ಸಂಬಂಧ ಸದ್ಯದಲ್ಲೇ ತೀರ್ಮಾನಿಸುವುದಾಗಿ ತಿಳಿಸಿದರು. ವಿದ್ಯುತ್ ದೀಪಗಳಿಂದ ಝಗಮಗಿಸುತ್ತಿದ್ದ ಅಂಬಾವಿಲಾಸ ಅರಮನೆ ಮುಂಭಾಗದ ಭವ್ಯ ವೇದಿಕೆಯಲ್ಲಿ ಮೊಳಗಿದ ವಿಜಯದ ಸಂಕೇತವಾದ ಕಹಳೆ ಸದ್ದಿನ ನಡುವೆ, ದೀಪ ಬೆಳಗಿಸಿ, ನಗಾರಿ ಬಾರಿಸುವ ಮೂಲಕ ನವರಾತ್ರಿ ಸಾಂಸ್ಕೃತಿಕ ಕಾರ್ಯ ಕ್ರಮಗಳಿಗೆ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು. ಮೈಸೂರು ರಾಜಮಹಾರಾಜರು ನಾಡಿಗೆ ನೀಡಿರುವ…
ದಸರಾ ಉದ್ಘಾಟನೆ ವೇದಿಕೆಯಲ್ಲಿ ಅಪರಿಚಿತ ಮಹಿಳೆ ಪ್ರತ್ಯಕ್ಷ!
October 11, 2018ಮೈಸೂರು: ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ, ಇನ್ಫೋಸಿಸ್ ಫೌಂಡೇಷನ್ ಮುಖ್ಯಸ್ಥೆ ಡಾ.ಸುಧಾಮೂರ್ತಿ ಹಾಗೂ ಇನ್ನಿತರ ಸಚಿವರು, ಗಣ್ಯರು ಪಾಲ್ಗೊಂಡಿದ್ದ ದಸರಾ ಉದ್ಘಾಟನಾ ಸಮಾರಂಭದಲ್ಲಿ ಆಹ್ವಾನಿತರಲ್ಲದ ಅಪರಿಚಿತ ಮಹಿಳೆ ಯೊಬ್ಬರು ಗಣ್ಯರ ಸಾಲಿನಲ್ಲೇ ಆಸೀನರಾಗಿ ಅಚ್ಚರಿ ಮೂಡಿಸಿದ ಪ್ರಸಂಗ ಇಂದು ಮೈಸೂರಿನ ಚಾಮುಂಡಿಬೆಟ್ಟದಲ್ಲಿ ನಡೆಯಿತು. ಮುಖ್ಯಮಂತ್ರಿಗಳೊಂದಿಗೆ ಚಾಮುಂಡೇಶ್ವರಿ ದರ್ಶನ ಮಾಡಿ ಕೊಂಡು ಹಿಂದಿರುಗುತ್ತಿದ್ದ ಸುಧಾಮೂರ್ತಿ ಅವರಿಗೆ ಎದುರಾದ ಮಹಿಳೆ, ನಗೆ ಬೀರಿದರು. ನಂತರ ಆ ಮಹಿಳೆ ಡಾ.ಸುಧಾ ಮೂರ್ತಿ ಹಾಗೂ ಮುಖ್ಯಮಂತ್ರಿಗಳೊಂದಿಗೆ ವೇದಿಕೆಯನ್ನೇರಿ ನೇರವಾಗಿ ಪಕ್ಕದಲ್ಲೇ ಬೆಳ್ಳಿ ರಥದಲ್ಲಿ ಪ್ರತಿಷ್ಠಾಪಿಸಿದ್ದ…
ದಸರಾ ನಾಡಕುಸ್ತಿ ಪಂದ್ಯಾವಳಿಗೆ ಚಾಲನೆ
October 11, 2018ಮೈಸೂರು: ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಆರಂಭ ವಾಗಿರುವ ದಸರಾ ನಾಡಕುಸ್ತಿ ಪಂದ್ಯಾವಳಿಗೆ ಬುಧವಾರ ಚಾಲನೆ ನೀಡಲಾಯಿತು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಒಲಂಪಿಕ್ ಅಸೋಸಿಯೇಷನ್ ಹಾಗೂ ಕರ್ನಾಟಕ ರೆಸ್ಲಿಂಗ್ ಅಸೋಸಿಯೇಷನ್ ಸಹಯೋಗದೊಂದಿಗೆ ಅ.10ರಿಂದ 15ರವರೆಗೆ ನಡೆಯುವ ದಸರಾ ನಾಡಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಪೈಲ್ವಾನರನ್ನು ಅಖಾಡಕ್ಕೆ ಬಿಡುವ ಮೂಲಕ ಕುಸ್ತಿಗೆ ಚಾಲನೆ ನೀಡಿದರು. ನಂತರ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಾತನಾಡಿ,…