ಮೈಸೂರಲ್ಲಿ ಗಮನ ಸೆಳೆದ ದಸರಾ ಕರಾಟೆ ಮ್ಯಾರಥಾನ್
ಮೈಸೂರು, ಮೈಸೂರು ದಸರಾ

ಮೈಸೂರಲ್ಲಿ ಗಮನ ಸೆಳೆದ ದಸರಾ ಕರಾಟೆ ಮ್ಯಾರಥಾನ್

October 13, 2018

ಮೈಸೂರು:  ದಸರಾ ಅಂಗವಾಗಿ ಮೈಸೂರು ಕರಾಟೆ ಅಸೋಸಿ ಯೇಷನ್ ವತಿಯಿಂದ ಶುಕ್ರವಾರ ಮೈಸೂ ರಿನಲ್ಲಿ ದಸರಾ ಕರಾಟೆ ಮ್ಯಾರಥಾನ್ ನಡೆಸ ಲಾಯಿತು. ರಾಮಸ್ವಾಮಿ ವೃತ್ತದಿಂದ ಚಾಮರಾಜ ಜೋಡಿ ರಸ್ತೆ, ಗನ್‍ಹೌಸ್ ಮೂಲಕ ಮೈಸೂರು ಅರಮನೆ ಆವರಣ ದವರೆಗೆ ನೂರಾರು ಕರಾಟೆ ಪಟುಗಳು ಓಡಿದರು. ದಸರಾ ಸಂಭ್ರಮದಲ್ಲಿ ತಾವು ಭಾಗವಹಿಸಿರುವುದಾಗಿ ತಿಳಿಸಿದರು.

ಬಳಿಕ ಅರಮನೆ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಕರಾಟೆ ಮ್ಯಾರಥಾನ್ ನಲ್ಲಿ ಜಯಗಳಿಸಿದ ಕ್ರಮವಾಗಿ ವಿಜೇತ ರಾದ ಲೋಕೇಶ್, ಕಿಶಲಿಯಾ ಹಾಗೂ ಧಮ ಕಟ್ಟಿ ಅವರಿಗೆ ಕ್ರಮವಾಗಿ 5, 3 ಮತ್ತು ಒಂದು ಸಾವಿರ ರೂ. ನಗದು ಬಹುಮಾನ ಮತ್ತು ಪ್ರಶಸ್ತಿಪತ್ರಗಳನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್ ವಿತರಿಸಿದರು.

ಈ ಸಂದರ್ಭದಲ್ಲಿ ವಿಕಲಚೇತನ ಯುವಕನೊಬ್ಬ ಕತಾಸ್ ಕರಾಟೆ ಪ್ರದ ರ್ಶಿಸಿ ಗಮನ ಸೆಳೆದನು.
ಸಮಾರಂಭದಲ್ಲಿ ಜಿಲ್ಲಾಧಿಕಾರಿ ಅಭಿರಾಂ ಜಿ.ಶಂಕರ್, ಮೈಸೂರು ಕರಾಟೆ ಅಸೋಸಿ ಯೇಷನ್ ಅಧ್ಯಕ್ಷ ಸೋಸಲೆ ಸಿದ್ದರಾಜು, ಉಪಾಧ್ಯಕ್ಷ ಮಹದೇವಸ್ವಾಮಿ, ಪ್ರಧಾನ ಕಾರ್ಯದರ್ಶಿ ಚಿದಾನಂದ್, ಶಂಕರ್, ದೀಪಕ್, ನಾಗರಾಜು ಸೇರಿದಂತೆ ಇನ್ನಿ ತರರು ಉಪಸ್ಥಿತರಿದ್ದರು.

Translate »