ಯುವ ದಸರಾಕ್ಕೆ ಶಾಸಕ ನಾಗೇಂದ್ರ ಬಹಿಷ್ಕಾರ
ಮೈಸೂರು

ಯುವ ದಸರಾಕ್ಕೆ ಶಾಸಕ ನಾಗೇಂದ್ರ ಬಹಿಷ್ಕಾರ

October 13, 2018

ಮೈಸೂರು:  ಯುವ ದಸರಾಗೆ ಸೂಕ್ತ ಸಮಯ ದಲ್ಲಿ ಆಹ್ವಾನಿಸದ ಹಿನ್ನೆಲೆಯಲ್ಲಿ ಶಾಸಕ ಎಲ್.ನಾಗೇಂದ್ರ, ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ನಾಡಹಬ್ಬ ದಸರಾ ಅಂಗವಾಗಿ ಯುವ ದಸರಾ ಕಾರ್ಯಕ್ರಮ ಆಯೋಜಿಸಿರುವ ಮಹಾರಾಜ ಕಾಲೇಜು ಮೈದಾನ ಚಾಮರಾಜ ಕ್ಷೇತ್ರದ ವ್ಯಾಪ್ತಿ ಯಲ್ಲಿದೆ. ಹಾಗಾಗಿ ಶಿಷ್ಠಾಚಾರದನ್ವಯ ಸ್ಥಳೀಯ ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯ ಕ್ರಮ ನಡೆಯಬೇಕಿತ್ತು. ಆದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನನಗೆ ತಲುಪಿರ ಲಿಲ್ಲ. ಹಾಗಾಗಿ ಇಂದು ಬೆಳೆಗ್ಗೆಯೇ ಯುವ ದಸರಾ ಸಮಿತಿ ಕಾರ್ಯದರ್ಶಿ ನಟರಾಜ್ ಅವರಿಗೆ ಕರೆ ಮಾಡಿದ್ದೆ. ಆದರೆ ಅವರು ಕರೆ ಸ್ವೀಕರಿಸಲಿಲ್ಲ. ಕಾರ್ಯಕ್ರಮ ಆರಂಭವಾಗುವ ಕೊನೆ ಗಳಿಗೆಯಲ್ಲಿ ಅಂದರೆ, ಸಂಜೆ 6.30ಕ್ಕೆ ಆಹ್ವಾನ ಪತ್ರಿಕೆ ಯನ್ನು ಕಳುಹಿಸಿ ಕೊಡುವ ಮೂಲಕ ಒಬ್ಬ ಜನಪ್ರತಿನಿಧಿಯನ್ನು ಅವಮಾನಿಸಿದ್ದಾರೆ. ಹಾಗಾಗಿ ಯುವ ದಸರಾದಿಂದ ದೂರ ಉಳಿದಿದ್ದೇನೆ. ನಿರ್ಲಕ್ಷ್ಯ ತೋರಿದ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದೇನೆ ಎಂದು ನಾಗೇಂದ್ರ ಅವರು ಪತ್ರಿಕಾ ಹೇಳಿಕೆ ನೀಡಿದ್ದಾರೆ.

Translate »