ಸಂಪರ್ಕ ಭಾಷೆಯಾಗಿರುವ ಹಿಂದಿ ಕಲಿಕೆ ಅನಿವಾರ್ಯ: ಶಾಸಕ ನಾಗೇಂದ್ರ
ಮೈಸೂರು

ಸಂಪರ್ಕ ಭಾಷೆಯಾಗಿರುವ ಹಿಂದಿ ಕಲಿಕೆ ಅನಿವಾರ್ಯ: ಶಾಸಕ ನಾಗೇಂದ್ರ

March 22, 2021

ಮೈಸೂರು, ಮಾ.21(ಎಂಟಿವೈ)-ಹಿಂದಿ ಕೇವಲ ರಾಷ್ಟ್ರ ಭಾಷೆಯಾಗಿರದೇ ಬಹು ತೇಕ ಜನರ ಸಂಪರ್ಕ ಭಾಷೆಯೂ ಆಗಿರು ವುದರಿಂದ ಪ್ರಸ್ತುತ ಸಂದರ್ಭದಲ್ಲಿ ಹಿಂದಿ ಕಲಿಕೆ ಅನಿವಾರ್ಯ ಎಂದು ಶಾಸಕ ಎಲ್. ನಾಗೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ವಾಣಿವಿಲಾಸ ರಸ್ತೆಯಲ್ಲಿ ರುವ ತೇರಾ ಪಂಥ್ ಭವನದಲ್ಲಿ ಭಾನು ವಾರ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ (ಧಾರವಾಡ) ಸಂಸ್ಥೆ ಆಯೋಜಿಸಿದ್ದ ಹಿಂದಿ ಪ್ರಚಾರಕರ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ 130 ಕೋಟಿ ಜನಸಂಖ್ಯೆಯಲ್ಲಿ ಬಹುತೇಕ ಮಂದಿ ಹಿಂದಿ ಭಾಷೆಯನ್ನೇ ಹೆಚ್ಚಾಗಿ ಅವಲಂ ಬಿಸಿದ್ದಾರೆ. ಹಲವು ರಾಜ್ಯಗಳಲ್ಲಿ ಹಿಂದಿ ಮಾತನಾಡುವವರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಬಹುತೇಕ ಜನರ ನಡುವೆ ಸಂಪರ್ಕ ಸಾಧಿಸಲು ಸಹಕಾರಿಯಾಗುವ ಪ್ರಸಾರ ಭಾಷೆಯೂ ಆಗಿದೆ. ರಾಷ್ಟ್ರ ಭಾಷೆಯೂ ಆಗಿರುವ ಹಿಂದಿ ಕಲಿಕೆ ಅನಿವಾರ್ಯ ಎನಿಸಿದೆ. ಈ ಹಿಂದಿ ಭಾಷೆಯನ್ನು ಕಲಿ ಯುವುದರಿಂದ ಜನರಿಗೆ ಉಪಯೋಗ ಹೊರತು ನಷ್ಟವಾಗುವುದಿಲ್ಲ. ಮಾತೃ ಭಾಷೆಯೊಂದಿಗೆ ರಾಷ್ಟ್ರೀಯ ಭಾಷೆ ಕಲಿಕೆ ಯನ್ನು ಕಡ್ಡಾಯಗೊಳಿಸಿರುವುದು ರಾಷ್ಟ್ರೀಯ ಏಕತೆಗೆ ಸಹಕಾರಿಯಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಚಾಮರಾಜನಗರ ಜಿಪಂ ಸಿಇಓ ಹರ್ಷಲ್ ಓಯ್ಯರ ಮಾತನಾಡಿ, ಹಿಂದಿ ಭಾಷೆ ಕಲಿಯುವುದರಿಂದ ದೇಶದ ಯಾವುದೇ ಮೂಲೆಗೆ ಹೋದರೂ ಎದು ರಾಗುವ ಪರಿಸ್ಥಿತಿ ನಿಭಾಯಿಸುವುದರೊಂ ದಿಗೆ ಅಲ್ಲಿನ ಜನರ ಒಡನಾಟ ಹೊಂದ ಬಹುದಾಗಿದೆ. ಹಿಂದಿ ಭಾಷೆಯ ಜ್ಞಾನ ಪ್ರಸ್ತುತ ಸಂದರ್ಭದಲ್ಲಿ ಅಗತ್ಯ ಎಂದರು.

ರಾಷ್ಟ್ರೀಯ ಏಕತೆಗಾಗಿ ದಕ್ಷಿಣ ಭಾರತ ದಲ್ಲೂ ಹಿಂದಿ ಭಾಷೆ ಪಸರಿಸುವ ಉದ್ದೇಶ ದಿಂದ ಮಹಾತ್ಮಗಾಂಧೀಜಿಯವರು ದಕ್ಷಿಣ ಭಾರತದಲ್ಲಿ ಹಿಂದಿ ಪ್ರಚಾರ ಸಭೆಯನ್ನು ಸ್ಥಾಪಿಸಿದರು. ಈ ಸಂಸ್ಥೆಯಲ್ಲಿ ನಡೆಯುವ ಪರೀಕ್ಷೆ ಕೇವಲ ಪ್ರಮಾಣ ಪತ್ರಕ್ಕಾಗಿ ಸೀಮಿತ ಗೊಳ್ಳದೇ ಹಿಂದಿ ಜ್ಞಾನ ಕಲಿಸುವ ಉದ್ದೇಶ ಹೊಂದಿದೆ. ಹಿಂದಿ ಪ್ರಚಾರಕರು ಪರಿಣಾಮ ಕಾರಿಯಾಗಿ ಹಿಂದಿ ಭಾಷೆ ಕಲಿಸುವತ್ತ ಗಮನ ಕೇಂದ್ರೀಕರಿಸಬೇಕು ಎಂದು ಸಲಹೆ ನೀಡಿದರು.

ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಅಧ್ಯಕ್ಷ ಈಶ್ವರ ಅಂಚಟಗಿರಿ ಮಾತನಾಡಿ, ಹಿಂದಿ ಭಾಷೆಯನ್ನು ಮಹಾತ್ಮ ಗಾಂಧೀಜಿ ಯವರು ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡುವಲ್ಲಿ ಹೆಚ್ಚಾಗಿ ಹಾಗೂ ಪರಿಣಾಮ ಕಾರಿಯಾಗಿ ಬಳಸುವ ಮೂಲಕ ಯಶಸ್ಸು ಸಾಧಿಸಿದರು. ಆ ಭಾಷೆಯಿಂದಲೇ ಸ್ವಾತಂತ್ರ್ಯದ ಕನಸನ್ನು ಸಾಕಾರಗೊಳಿಸಿ ದರು. ಈ ಹಿನ್ನೆಲೆಯಲ್ಲಿ ಹಿಂದಿ ಕಲಿಕೆಗೆ ಜನರು ಮುಂದಾಗಬೇಕು ಎಂದು ಮನವಿ ಮಾಡಿದರು.

ಸಮ್ಮೇಳನದಲ್ಲಿ ಕಳೆದ 25 ವರ್ಷ ಗಳಿಂದ ಹಿಂದಿ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿ ರುವ ಹತ್ತು ಮಂದಿ ಪ್ರಚಾರಕರನ್ನು ಸನ್ಮಾನಿ ಸಲಾಯಿತು. ಇದೇ ವೇಳೆ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಪ್ರಧಾನ ಕಾರ್ಯಾ ಲಯದ ಮದ್ರಾಸ್ ಘಟಕದ ವಿಶೇಷ ಅಧಿ ಕಾರಿ ರಾಘವೇಂದ್ರ ಔರಾದ್‍ಕರ್, ಪ್ರಧಾನ ಕಾರ್ಯದರ್ಶಿ ಎಸ್.ಜಯರಾಜ್, ಡಿ. ಜೋಷಿ, ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ ಪ್ರಚಾರ ಸಮಿತಿಯ ಸದಸ್ಯರಾದ ಅರುಣ ಡಿ.ಜೋಷಿ, ಎಂ.ಆರ್.ಪಾಟೀಲ, ವಿಶೇಷ ಕಾರ್ಯದರ್ಶಿ ಡಾ.ಎಸ್.ವಿ. ಹಿಂಚಿಗೇರಿ, ಕಾರ್ಯದರ್ಶಿ ಎಸ್.ರಾಧಾ ಕೃಷ್ಣನ್, ಬಸವೇಶ್ವರ ಶಿಕ್ಷಾ ಮಹಾವಿದ್ಯಾ ಲಯದ ಪ್ರಾಂಶುಪಾಲ ಸತೀಶ್ ಕುಮಾರ ಪಾಂಡೆ ಸೇರಿದಂತೆ ವಿವಿಧೆಡೆಯಿಂದ 400ಕ್ಕೂ ಹೆಚ್ಚು ಮಂದಿ ಹಿಂದಿ ಪ್ರಚಾ ರಕರು ಪಾಲ್ಗೊಂಡಿದ್ದರು.

Translate »