ಮೈಸೂರು ಹೃದಯ ಭಾಗದಲ್ಲಿ ಕಗ್ಗತ್ತಲು: ಪಾಲಿಕೆ ಅಧಿಕಾರಿಗಳಿಗೆ ಶಾಸಕರ ತರಾಟೆ
ಮೈಸೂರು

ಮೈಸೂರು ಹೃದಯ ಭಾಗದಲ್ಲಿ ಕಗ್ಗತ್ತಲು: ಪಾಲಿಕೆ ಅಧಿಕಾರಿಗಳಿಗೆ ಶಾಸಕರ ತರಾಟೆ

November 4, 2018

ಮೈಸೂರು: ನಾಡಹಬ್ಬ ದಸರಾ ಮಹೋತ್ಸವದ ವೇಳೆ ವಿದ್ಯುತ್ ದೀಪಗಳ ಸರಮಾಲೆಗಳಿಂದಾಗಿ ಝಗ ಮಗಿಸಿದ್ದ ಮೈಸೂರು ಮಹಾನಗರ, ನವರಾತ್ರಿ ಕಳೆಯು ತ್ತಿದ್ದಂತೆಯೇ ಭಾಗಶಃ ಅಂಧಕಾರದಲ್ಲಿ ಮುಳುಗಿ ದೆಯೇ? ಹೌದು, ಎನ್ನುತ್ತಾರೆ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ. ನಗರದ ಹೃದಯ ಬಾಗ ದಲ್ಲಿ ಬೀದಿ ದೀಪಗಳು ಬೆಳಗದೇ ಪ್ರಮುಖ ರಸ್ತೆ, ವೃತ್ತಗಳಲ್ಲಿ ಶನಿವಾರ ರಾತ್ರಿ ಕತ್ತಲು ಆವರಿಸಿದ್ದನ್ನು ಕಂಡು ಶಾಸಕರು ಕೆಂಡಾಮಂಡಲರಾಗಿದ್ದಾರೆ.

ಚಾಮರಾಜ ವೃತ್ತ, ದೊಡ್ಡ ಗಡಿಯಾರ ವೃತ್ತ ಸೇರಿದಂತೆ ಮೈಸೂರು ನಗರದ ಹೃದಯ ಭಾಗದಲ್ಲೇ ಶನಿವಾರ ರಾತ್ರಿ ಬೀದಿ ದೀಪಗಳು ಬೆಳಗದೇ ಕತ್ತಲು ಆವರಿಸಿತ್ತು. ಇದನ್ನು ಕಂಡ ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಅವರು ನಗರಪಾಲಿಕೆ ಅಧಿಕಾರಿಗಳನ್ನು ತರಾಟೆಗೆ ತೆಗೆದು ಕೊಂಡ ಪ್ರಸಂಗವೂ ಜರುಗಿತು. ನಗರದ ಆಲ್ಬರ್ಟ್ ವಿಕ್ಟರ್ ರಸ್ತೆ, ಚಾಮರಾಜ ವೃತ್ತ, ದೊಡ್ಡ ಗಡಿಯಾರ ವೃತ್ತ, ಶ್ರೀ ಹರ್ಷ ರಸ್ತೆ, ಬಿ.ಎನ್.ರಸ್ತೆ, ಫೈವ್ ಲೈಟ್ ಸರ್ಕಲ್, ಮಲೆಮಹದೇಶ್ವರ ರಸ್ತೆಯಲ್ಲಿ ಬೀದಿ ದೀಪಗಳು ಬೆಳಗದೇ ಕಗ್ಗತ್ತಲು ಆವರಿಸಿದ್ದುದು ವಾಹನದಲ್ಲಿ ಸಂಚರಿಸುತ್ತಿದ್ದ ಶಾಸಕರ ಕಣ್ಣಿಗೆ ಬಿದ್ದಿತು.

ಪರಿಶೀಲಿಸಿದಾಗ ಬಹಳಷ್ಟು ಬೀದಿ ದೀಪದ ಕಂಬ ಗಳಲ್ಲಿ ವಿದ್ಯುತ್ ದೀಪದ ಜೋಡಣೆಯೇ ಇರಲಿಲ್ಲ. ಕೆಲವುದರಲ್ಲಿ ಬಲ್ಬ್, ಟ್ಯೂಬ್‍ಗಳಿರಲಿಲ್ಲ. ಫೈವ್‍ಲೈಟ್ ವೃತ್ತದಿಂದ ಅಶೋಕ ರಸ್ತೆ ಕೂಡುವ ಸ್ಥಳದವರೆಗಿನ ಮಾರ್ಗದಲ್ಲಿದ್ದ 20 ಕಂಬಗಳಲ್ಲಿ ಒಂದರಲ್ಲಿಯೂ ದೀಪ ಬೆಳಗುತ್ತಿರಲಿಲ್ಲ. ಮಹದೇಶ್ವರ ರಸ್ತೆಯಲ್ಲಿ ಕತ್ತಲು ಆವರಿಸಿದ್ದನ್ನೇ ಬಂಡವಾಳ ಮಾಡಿಕೊಂಡು ಅನೈತಿಕ ಚಟುವಟಿಕೆ ನಡೆಯುತ್ತಿದ್ದುದೂ ತಮ್ಮ ಕಣ್ಣಿಗೆ ಬಿದ್ದಿತು ಎಂದು ಶಾಸಕರು ಹೇಳಿದ್ದಾರೆ.

ಇದೆಲ್ಲಾ ಅವ್ಯವಸ್ಥೆ ಕಂಡು ಸಿಟ್ಟಾಗಿ ಶಾಸಕರು ನಗರಪಾಲಿಕೆ ಆಯುಕ್ತ ಜಗದೀಶ್ ಮತ್ತು ಇತರೆ ಅಧಿಕಾರಿಗಳನ್ನು ಸ್ಥಳಕ್ಕೆ ಬರಮಾಡಿಕೊಂಡು ಸಮಸ್ಯೆಯ ಪ್ರತ್ಯಕ್ಷ ದರ್ಶನ ಮಾಡಿ ಸಿದರು. ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನಗರ ಪಾಲಿಕೆಯ ವಿದ್ಯುತ್ ವಿಭಾಗದ ಕಾರ್ಯಪಾಲಕ ಅಭಿಯಂತರ ನಾಗೇಶ್, ಸಹಾಯಕ ಆಯುಕ್ತ ನಾಗರಾಜ್ ಹಾಗೂ ಸಹಾಯಕ ಇಂಜಿನಿಯರ್ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು ಎಂದು ಶಾಸಕರ ಕಚೇರಿ ಪ್ರಕಟಣೆ ತಿಳಿಸಿದೆ.

Translate »