Tag: Yuva Dasara

ಯುವ ದಸರಾಗೆ ವರ್ಣರಂಜಿತ ತೆರೆ
ಮೈಸೂರು

ಯುವ ದಸರಾಗೆ ವರ್ಣರಂಜಿತ ತೆರೆ

October 7, 2019

ಮೈಸೂರು, ಅ.6(ಎಸ್‍ಬಿಡಿ)- ಆರು ದಿನಗಳಿಂದ ಯುವ ಜನತೆ ಯನ್ನು ಸೂಜಿಗಲ್ಲಿನಂತೆ ಸೆಳೆದು ಮನರಂಜಿಸಿದ ಯುವ ದಸರಾಗೆ ಯಶಸ್ವಿ ತೆರೆ ಬಿದ್ದಿತು. ಮೈಸೂರು ದಸರಾ ಅಂಗವಾಗಿ ಮಹಾ ರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿದ್ದ ಯುವ ದಸರಾದ ಕಡೆಯ ದಿನವಾದ ಇಂದು ಬಾಲಿವುಡ್‍ನ ಖ್ಯಾತ ಸಂಗೀತ ನಿರ್ದೇಶಕ ಪ್ರೀತಮ್ ಚಕ್ರವರ್ತಿ, ಹಲವು ಜನಪ್ರಿಯ ಗೀತೆ ಗಳನ್ನು ಪ್ರಸ್ತುತಪಡಿಸಿ, ಪ್ರೇಕ್ಷಕರ ರಂಜಿಸಿದರು. ಕಿಕ್ಕಿರಿದಿದ್ದ ಯುವ ಜನತೆ ಕೇಕೆ, ಶಿಳ್ಳೆಯೊಂದಿಗೆ ಕಾರ್ಯಕ್ರಮವನ್ನು ಆಸ್ವಾದಿಸಿದರು. ಮೈಸೂರಿನ ಯುವ ಡ್ಯಾನ್ಸ್ ಅಕಾಡೆಮಿ ಕಲಾವಿದರು ಕ್ರೇಜಿ ಸ್ಟಾರ್…

ಯುವ ದಸರಾದಲ್ಲಿ ಚಂದನ್ ಶೆಟ್ಟಿ, ಸಂಚಿತ್ ಹೆಗ್ಡೆ ಗಾಯನ, ರೂಪದರ್ಶಿಯರ ಅಂದದ ನಡಿಗೆ ಮೋಡಿ
ಮೈಸೂರು

ಯುವ ದಸರಾದಲ್ಲಿ ಚಂದನ್ ಶೆಟ್ಟಿ, ಸಂಚಿತ್ ಹೆಗ್ಡೆ ಗಾಯನ, ರೂಪದರ್ಶಿಯರ ಅಂದದ ನಡಿಗೆ ಮೋಡಿ

October 5, 2019

ಮೈಸೂರು, ಅ.4(ಎಸ್‍ಬಿಡಿ)-ಕನ್ನಡದ ರ್ಯಾಪ್ ಸಿಂಗರ್ ಚಂದನ್ ಶೆಟ್ಟಿ, ನವಿರು ಧ್ವನಿಯ ಸಂಚಿತ್ ಹೆಗ್ಡೆ ಗಾಯನ ಮೋಡಿ, ರೂಪದರ್ಶಿಯರ ಮಾರ್ಜಾಲ ನಡಿಗೆಯ ಸೊಬಗು, ಆಕರ್ಷಕ ನೃತ್ಯ ಪ್ರದರ್ಶನದಿಂದ ಇಂದಿನ ಯುವ ದಸರಾ ರಂಗು ಪಡೆದಿತ್ತು. ತಡವಾಗಿ ರಾತ್ರಿ 10.30ಕ್ಕೆ ವೇದಿಕೆಗೆ ಬಂದ ರ್ಯಾಪರ್ ಚಂದನ್ ಶೆಟ್ಟಿ, `ಪವರ್’ ಚಿತ್ರದ `ಧಮ್ ಪವರೇ…’ ಹಾಡುವ ಮೂಲಕ ಕಾದು ಬೇಸರದಲ್ಲಿದ್ದ ಪ್ರೇಕ್ಷಕರ ಉತ್ಸಾಹ ಹೆಚ್ಚಿಸುವಲ್ಲಿ ಸಫಲರಾದರು. ತಮ್ಮದೇ ಆಲ್ಬಂನ ‘ಮೂರೇ ಮೂರು ಪೆಗ್ಗಿಗೆ ತಲೆ ಗಿರಗಿರ ಗಿರ ಅಂತಿದೆ…’ ಜನಪ್ರಿಯ ಗೀತೆಯನ್ನು…

ಮೊಹಾಲಿ ಠಾಕೂರ್, ಹನುಮಂತನ ಹಾಡಿಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ
ಮೈಸೂರು

ಮೊಹಾಲಿ ಠಾಕೂರ್, ಹನುಮಂತನ ಹಾಡಿಗೆ ಕುಣಿದು ಕುಪ್ಪಳಿಸಿದ ಯುವ ಸಮೂಹ

October 4, 2019

ಮೈಸೂರು: ನಟಿ, ಗಾಯಕಿ ಮೊಹಾಲಿ ಠಾಕೂರ್ ಸುಮಧುರ ಗಾಯನದ ಮೂಲಕ ಯುವ ದಸರಾದಲ್ಲಿ ನೆರೆದಿದ್ದ ಪ್ರೇಕ್ಷಕರ ಮನರಂಜಿಸಿದರು. `ದಸರಾ ಹಬ್ಬದ ಶುಭಾಶಯಗಳು. ನಮಸ್ಕಾರ ಮೈಸೂರು’ ಎಂದು ಕನ್ನಡದಲ್ಲಿ ಹೇಳುವ ಮೂಲಕ ಪ್ರೇಕ್ಷಕರ ಮನಸ್ಸು ತಟ್ಟಿದ ಮೊಹಾಲಿ, ತಮಗೆ ರಾಷ್ಟ್ರೀಯ ಪ್ರಶಸ್ತಿ ತಂದುಕೊಟ್ಟ `ದಮ್ ಲಗಾ ಕೆ ಹೈಶಾ’ ಚಿತ್ರದ `ಮೋಹ್ ಮೋಹ್‍ಕೆ ಧಾಗೆ…’ `ರೇಸ್ ಹೈ ಸಾಸೋಂ ಕಿ…’, `ಸವಾರ್ ಲೂನ್…’, `ಖ್ವಾಬ್ ದೇಖೆ ಝೂಟೆ ಮೋಟೆ…’, `ದಮಾ ಧಂ ಮಸ್ತ್ ಖಲಂದರ್…’, `ತುಜುಕೋ ಜೋ ಪಾಯಾ…’,…

ಯುವ ದಸರಾಗೆ ಚಾಲನೆ
ಮೈಸೂರು

ಯುವ ದಸರಾಗೆ ಚಾಲನೆ

October 2, 2019

ಮೈಸೂರು: ಮೈಸೂರು ದಸರಾ ಮಹೋತ್ಸವದ ಮೆಗಾ ಇವೆಂಟ್ `ಯುವ ದಸರಾ’ಗೆ ಮಂಗಳವಾರ ಅದ್ಧೂರಿ ಚಾಲನೆ ದೊರಕಿತು. ಯುವ ಸಮೂಹದ ಅಚ್ಚುಮೆಚ್ಚಿನ ಯುವ ದಸರಾಗೆ ಯೂತ್ ಐಕಾನ್ ಕ್ರೀಡಾಪಟುವಿನಿಂದ ಚಾಲನೆ ಪಡೆದಿದ್ದು ಈ ಬಾರಿಯ ವಿಶೇಷ. ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರ ಸಮ್ಮುಖದಲ್ಲಿ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ದೀಪ ಬೆಳಗುವ ಮೂಲಕ 6 ದಿನಗಳ ಯುವ ದಸರಾ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ಯಿಂದ 5 ಹಾಗೂ ದಸರಾ ಸಮಿತಿ ವತಿಯಿಂದ 5…

ಚಿತ್ರ ತಾರೆಯರ ಮಸ್ತ್ ಡ್ಯಾನ್ಸ್‍ಗೆ ಕುಣಿದು ಕುಪ್ಪಳಿಸಿದ ಯುವಜನ
ಮೈಸೂರು, ಮೈಸೂರು ದಸರಾ

ಚಿತ್ರ ತಾರೆಯರ ಮಸ್ತ್ ಡ್ಯಾನ್ಸ್‍ಗೆ ಕುಣಿದು ಕುಪ್ಪಳಿಸಿದ ಯುವಜನ

October 16, 2018

ಮೈಸೂರು: ಚಿತ್ರ ತಾರೆಯರ ಮನಮೋಹಕ ನೃತ್ಯ, ಹಿನ್ನೆಲೆ ಗಾಯಕರ ಸಂಗೀತ ನಿನಾದ, ಹಾಸ್ಯ ಕಲಾವಿದರ ಝಲಕ್‍ನಿಂದ ಇಂದಿನ ಯುವ ದಸರಾ ರಂಗೇರಿತ್ತು. ಮೈಸೂರಿನ ಮಹಾ ರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಯುವ ದಸರಾದ 4ನೇ ದಿನವಾದ ಸೋಮವಾರ, ಸ್ಯಾಂಡಲ್‍ವುಡ್ ನೈಟ್ಸ್ ಕಾರ್ಯಕ್ರಮ ನೆರೆದಿದ್ದವರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ಆರಂಭದಲ್ಲಿ ಯಕ್ಷಗಾನದ ಪೋಷಾಕು ಧರಿಸಿದ್ದ ಕಲಾವಿದರು, ವಿಶಿಷ್ಟ ನೃತ್ಯ ಪ್ರದರ್ಶನದೊಂದಿಗೆ ವಿಘ್ನ ವಿನಾಯಕನನ್ನು ಸ್ಮರಿಸಿದರು. ಬಳಿಕ ವೇದಿಕೆಗೆ ಬಂದ ಅಮೃತವರ್ಷಿಣಿ ಧಾರಾವಾಹಿ ಖ್ಯಾತಿಯ ನಟಿ ರಜಿನಿ, `ಆಡು ಆಟ ಆಡು…

ಮಳೆ ಲೆಕ್ಕಿಸದೇ ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಗಾನ ಮಾಧುರ್ಯದಲ್ಲಿ ಮಿಂದೆದ್ದ ಯುವ ಸಮೂಹ
ಮೈಸೂರು, ಮೈಸೂರು ದಸರಾ

ಮಳೆ ಲೆಕ್ಕಿಸದೇ ಬಾಲಿವುಡ್ ಗಾಯಕ ಅರ್ಮಾನ್ ಮಲ್ಲಿಕ್ ಗಾನ ಮಾಧುರ್ಯದಲ್ಲಿ ಮಿಂದೆದ್ದ ಯುವ ಸಮೂಹ

October 15, 2018

ಮೈಸೂರು: ಯುವ ದಸರಾ ವೇದಿಕೆಯಲ್ಲಿ `ಒಂದು ಮಳೆ ಬಿಲ್ಲು, ಒಂದು ಮಳೆ ಮೋಡ, ಹೇಗೋ ಜೊತೆ ಯಾಗಿ…’ ಎಂದು ಖ್ಯಾತ ಗಾಯಕ ಅರ್ಮಾನ್ ಮಲ್ಲಿಕ್ ಹಾಡುತ್ತಿದ್ದರೆ, ನೆರೆದಿದ್ದ ಯುವ ಸಮೂಹ ಮಳೆಯನ್ನೂ ಲೆಕ್ಕಿಸದೆ ಸಂಭ್ರಮಿಸಿದರು. ಮೈಸೂರು ಮಹಾರಾಜ ಕಾಲೇಜು ಮೈದಾನದಲ್ಲಿ ಯುವ ದಸರಾದ 3ನೇ ದಿನ ವಾದ ಭಾನುವಾರ ಸುಮಧುರ ಕಂಠದ ಅರ್ಮಾನ್ ಮಲ್ಲಿಕ್, ಒಂದರ ಹಿಂದೆ ಒಂದ ರಂತೆ ಜನಪ್ರಿಯ ಹಾಡುಗಳನ್ನು ಹರಿಬಿಟ್ಟು, ನೆರೆದಿದ್ದವರ ಮೆಚ್ಚುಗೆ ಗಳಿಸಿದರು. `ಬಾಗಿ’ ಚಿತ್ರದ `ಸಬ್‍ತೆರಾ…’, `ಎಂ.ಎಸ್.ಧೋನಿ ದಿ ಅನ್‍ಟೋಲ್ಡ್…

ಯುವ ದಸರಾದಲ್ಲಿ ಮುಂದುವರೆದ ಹಾಡು, ಕುಣಿತದ ಸಂಭ್ರಮ
ಮೈಸೂರು, ಮೈಸೂರು ದಸರಾ

ಯುವ ದಸರಾದಲ್ಲಿ ಮುಂದುವರೆದ ಹಾಡು, ಕುಣಿತದ ಸಂಭ್ರಮ

October 14, 2018

ಮೈಸೂರು:  ಬಾಲಿವುಡ್ ಗಾಯಕರಾದ ಬಾದ್‍ಶಾ, ಅಸ್ಥ ಗಿಲ್ ಹಾಗೂ ವಿವಿಧ ತಂಡ ಗಳ ಸಂಗೀತ ಝೇಂಕಾರ ಯುವ ದಸರಾದ ರಂಗು ಹೆಚ್ಚಿಸಿತ್ತು.ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದ 2ನೇ ದಿನವಾದ ಶನಿವಾರ, ಪ್ರೇಕ್ಷಕರು ಕಿಕ್ಕಿರಿದಿದ್ದರು. ಮೈದಾನ ತುಂಬಿ, ಸುತ್ತಮುತ್ತಲಿನ ಸ್ಥಳಗಳಲ್ಲೂ ನಿಂತು ಕಾರ್ಯಕ್ರಮ ಸವಿದರು. ಬಾದ್‍ಶಾ ಹಾಗೂ ಅಸ್ಥ ಗಿಲ್ ಅವರ ಕಾರ್ಯಕ್ರಮ ತಡವಾಗಿ ಆರಂಭ ವಾದರೂ ಪ್ರೇಕ್ಷಕರು ಎತ್ತಲೂ ಕದಲದೆ ಕಾದು ಕುಳಿತಿದ್ದರು. ರಾತ್ರಿ ಸುಮಾರು 10 ಗಂಟೆಗೆ ವೇದಿಕೆ ಏರಿದ ಇವರು,…

ಮೆಗಾ ಇವೆಂಟ್ ಯುವ ದಸರಾಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ
ಮೈಸೂರು, ಮೈಸೂರು ದಸರಾ

ಮೆಗಾ ಇವೆಂಟ್ ಯುವ ದಸರಾಕ್ಕೆ ಮುಖ್ಯಮಂತ್ರಿ ಕುಮಾರಸ್ವಾಮಿ ಚಾಲನೆ

October 13, 2018

ಮೈಸೂರು:  ಮೈಸೂರು ದಸರಾ ಮಹೋತ್ಸವದಲ್ಲಿ ಯುವ ಸಮೂಹ ವನ್ನು ಒಗ್ಗೂಡಿಸಿ ರಸದೌತಣ ನೀಡುವ ಸಂಭ್ರಮದ `ಯುವ ದಸರಾ’ಗೆ ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿ, ವಿದ್ಯುಕ್ತ ಚಾಲನೆ ನೀಡಿದರು. ಮೈಸೂರಿನ ಮಹಾರಾಜ ಕಾಲೇಜು ಮೈದಾನದ ಭವ್ಯ ವೇದಿಕೆಯಲ್ಲಿ ಇಂದಿನಿಂದ ಅ.17ರವರೆಗೆ ನಡೆಯಲಿರುವ `ಯುವ ದಸರಾ’ಗೆ ದೀಪ ಬೆಳಗುವ ಮೂಲಕ ಚಾಲನೆ ನೀಡಿದ ಸಿಎಂ ಕುಮಾರ ಸ್ವಾಮಿ, ತಾಯಿ ಚಾಮುಂಡೇಶ್ವರಿ ನಾಡಿನ ಎಲ್ಲಾ ಕುಟುಂಬಗಳಿಗೆ ಒಳಿತು ಮಾಡಲಿ ಎಂದು ಪ್ರಾರ್ಥಿಸಿ, ದಸರಾ ಹಬ್ಬದ ಶುಭಾಶಯ ಕೋರಿದರು. ಉನ್ನತ ಶಿಕ್ಷಣ ಸಚಿವರೂ ಆದ…

ಯುವ ದಸರಾಕ್ಕೆ ಶಾಸಕ ನಾಗೇಂದ್ರ ಬಹಿಷ್ಕಾರ
ಮೈಸೂರು

ಯುವ ದಸರಾಕ್ಕೆ ಶಾಸಕ ನಾಗೇಂದ್ರ ಬಹಿಷ್ಕಾರ

October 13, 2018

ಮೈಸೂರು:  ಯುವ ದಸರಾಗೆ ಸೂಕ್ತ ಸಮಯ ದಲ್ಲಿ ಆಹ್ವಾನಿಸದ ಹಿನ್ನೆಲೆಯಲ್ಲಿ ಶಾಸಕ ಎಲ್.ನಾಗೇಂದ್ರ, ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದಾರೆ. ನಾಡಹಬ್ಬ ದಸರಾ ಅಂಗವಾಗಿ ಯುವ ದಸರಾ ಕಾರ್ಯಕ್ರಮ ಆಯೋಜಿಸಿರುವ ಮಹಾರಾಜ ಕಾಲೇಜು ಮೈದಾನ ಚಾಮರಾಜ ಕ್ಷೇತ್ರದ ವ್ಯಾಪ್ತಿ ಯಲ್ಲಿದೆ. ಹಾಗಾಗಿ ಶಿಷ್ಠಾಚಾರದನ್ವಯ ಸ್ಥಳೀಯ ಶಾಸಕ ಎಲ್.ನಾಗೇಂದ್ರ ಅಧ್ಯಕ್ಷತೆಯಲ್ಲಿ ಉದ್ಘಾಟನಾ ಕಾರ್ಯ ಕ್ರಮ ನಡೆಯಬೇಕಿತ್ತು. ಆದರೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನನಗೆ ತಲುಪಿರ ಲಿಲ್ಲ. ಹಾಗಾಗಿ ಇಂದು ಬೆಳೆಗ್ಗೆಯೇ ಯುವ ದಸರಾ ಸಮಿತಿ ಕಾರ್ಯದರ್ಶಿ ನಟರಾಜ್ ಅವರಿಗೆ ಕರೆ ಮಾಡಿದ್ದೆ. ಆದರೆ…

ಇಂದಿನಿಂದ ದಸರಾ ಮೆಗಾ  ಇವೆಂಟ್ `ಯುವ ದಸರಾ’
ಮೈಸೂರು, ಮೈಸೂರು ದಸರಾ

ಇಂದಿನಿಂದ ದಸರಾ ಮೆಗಾ  ಇವೆಂಟ್ `ಯುವ ದಸರಾ’

October 12, 2018

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಸಾಂಸ್ಕೃತಿಕ ಹಾಗೂ ಯುವ ಸಮುದಾಯದ ಬಹು ನಿರೀಕ್ಷಿತ ಕಾರ್ಯಕ್ರಮವೂ ಆಗಿರುವ ಯುವ ದಸರಾ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಾಳೆ (ಅ.12) ಸಂಜೆಯಿಂದ ಆರಂಭವಾಗಿ ಅ.17ರವರೆಗೆ ನಡೆಯಲಿದೆ ಎಂದು ದಸರಾ ಉಪ ವಿಶೇಷಾಧಿಕಾರಿಗಳೂ ಆದ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ತಿಳಿಸಿದ್ದಾರೆ. ಯುವ ದಸರಾ ನಡೆಯಲಿರುವ ಮಹಾರಾಜ ಕಾಲೇಜು ಮೈದಾನದಲ್ಲಿ ಗುರುವಾರ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಈ ಸಾಲಿನ ಯುವ ದಸರಾ ಕಾರ್ಯಕ್ರಮವನ್ನು…

1 2
Translate »