ಯುವ ದಸರಾಗೆ ಚಾಲನೆ
ಮೈಸೂರು

ಯುವ ದಸರಾಗೆ ಚಾಲನೆ

October 2, 2019

ಮೈಸೂರು: ಮೈಸೂರು ದಸರಾ ಮಹೋತ್ಸವದ ಮೆಗಾ ಇವೆಂಟ್ `ಯುವ ದಸರಾ’ಗೆ ಮಂಗಳವಾರ ಅದ್ಧೂರಿ ಚಾಲನೆ ದೊರಕಿತು.

ಯುವ ಸಮೂಹದ ಅಚ್ಚುಮೆಚ್ಚಿನ ಯುವ ದಸರಾಗೆ ಯೂತ್ ಐಕಾನ್ ಕ್ರೀಡಾಪಟುವಿನಿಂದ ಚಾಲನೆ ಪಡೆದಿದ್ದು ಈ ಬಾರಿಯ ವಿಶೇಷ. ಮುಖ್ಯಮಂತ್ರಿ ಬಿ.ಎಸ್.ಯಡಿ ಯೂರಪ್ಪನವರ ಸಮ್ಮುಖದಲ್ಲಿ ವಿಶ್ವ ಚಾಂಪಿಯನ್ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧೂ ದೀಪ ಬೆಳಗುವ ಮೂಲಕ 6 ದಿನಗಳ ಯುವ ದಸರಾ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಯುವಜನ ಮತ್ತು ಕ್ರೀಡಾ ಇಲಾಖೆ ಯಿಂದ 5 ಹಾಗೂ ದಸರಾ ಸಮಿತಿ ವತಿಯಿಂದ 5 ಲಕ್ಷ ಸೇರಿ ಒಟ್ಟು 10 ಲಕ್ಷ ರೂ. ನಗದು ಪುರಸ್ಕಾರವನ್ನು ಸಿಎಂ ಯಡಿಯೂರಪ್ಪ, ಯುವ ಕ್ರೀಡಾ ಸಾಧಕಿ ಪಿ.ವಿ. ಸಿಂಧೂಗೆ ನೀಡಿದರು. ಹಾಗೆಯೇ ಸಿಂಧೂ, ಅವರ ತಂದೆ ರಮಣ ಹಾಗೂ ತಾಯಿ ವಿಜಯ ಅವರಿಗೆ ಮೈಸೂರು ಪೇಟ ತೊಡಿಸಿ ಸಾಂಪ್ರದಾಯಿಕವಾಗಿ ಅಭಿನಂದಿಸಿದರು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪಿ.ವಿ. ಸಿಂಧೂ, ಕನ್ನಡದಲ್ಲಿ ಮಾತು

ಆರಂಭಿಸಿ, ಮೈಸೂರು ಬಣ್ಣಿಸುವುದರ ಜೊತೆಗೆ ಕಿಕ್ಕಿರಿದಿದ್ದ ಯುವ ಸಮೂಹಕ್ಕೊಂದು ಕಿವಿಮಾತು ಹೇಳಿದರು. `ಎಲ್ಲರಿಗೂ ನಮಸ್ಕಾರ. ಹೇಗಿದ್ದೀರಾ? ಎಲ್ಲರಿಗೂ ದಸರಾ ಹಬ್ಬದ ಶುಭಾಶಯಗಳು’ ಎಂದು ಕನ್ನಡದಲ್ಲಿ ಹೇಳುತ್ತಿದ್ದಂತೆ ಪ್ರೇಕ್ಷಕರ ಶಿಳ್ಳೆ, ಚಪ್ಪಾಳೆ, ಕೇಕೆ ಮುಗಿಲು ಮುಟ್ಟಿತ್ತು. ಇದರಿಂದ ಪುಳಕಿತರಾಗಿ ನಗುಮೊಗದಲ್ಲಿ ಮಾತು ಮುಂದುವರಿಸಿದ ಸಿಂಧೂ, ಇದೇ ಮೊದಲ ಬಾರಿಗೆ ಮೈಸೂರಿಗೆ ಬಂದಿದ್ದೇನೆ. ಮೈಸೂರು ತುಂಬಾ ಸುಂದರ ಮತ್ತು ಸ್ವಚ್ಛ ನಗರಿ. ಯುವ ದಸರಾ ಯುವ ಜನರಿಗೆ ತುಂಬಾ ಇಷ್ಟವಾದ ಕಾರ್ಯಕ್ರಮ ಎಂದು ತಿಳಿದಿದೆ. ಕಲಾವಿದರನ್ನು ಪ್ರೋತ್ಸಾಹಿಸಿ, ಪೋಷಿಸುವ ಪರಂಪರೆ ರಾಜರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಇಂತಹ ವೇದಿಕೆಯಲ್ಲಿ ಪ್ರದರ್ಶಿಸುವ ಕಲೆ ಪ್ರೇರಣೀಯ. ತಾಯಿ ಚಾಮುಂಡೇಶ್ವರಿಯ ಆಶೀರ್ವಾದ ನಿಮ್ಮ ಮೇಲಿದೆ. ವಿಶ್ವದಲ್ಲೇ ಭಾರತ ಹೆಚ್ಚು ಯುವ ಜನತೆ ಹೊಂದಿದೆ. ಪ್ರತಿಯೊಬ್ಬರು ತಮ್ಮನ್ನು ತಾವು ಅರಿತು ಸಾಧನೆಯೆಡೆಗೆ ಮನಸ್ಸು ಮಾಡಬೇಕು. ನಿಮ್ಮ ಮೇಲೆ ಸಂಪೂರ್ಣ ನಂಬಿಕೆಯಿಟ್ಟು ಸದಾ ಸಕಾರಾತ್ಮಕ ವಾಗಿ ಚಿಂತಿಸಬೇಕು. ನಿಮ್ಮೆಲ್ಲರ ಪ್ರೀತಿ, ಹಾರೈಕೆಯ ಶಕ್ತಿಯಿಂದ ನಾನು ಮತ್ತಷ್ಟು ಸಾಧನೆ ಮಾಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿಂಧೂ ವೇದಿಕೆಗೆ ಆಗಮಿಸಿ ದಾಗ, ಕನ್ನಡದಲ್ಲಿ ಮಾತು ಆರಂಭಿಸಿದಾಗ, ಕಡೆಯಲ್ಲಿ ವೇದಿಕೆಯ ಮುಂಭಾಗಕ್ಕೆ ಬಂದು ಪ್ರೇಕ್ಷಕರಿಗೆ ಕೈ ಮುಗಿದ ಸಂದರ್ಭದಲ್ಲಿ ಶಿಳ್ಳೆ, ಚಪ್ಪಾಳೆ ಮಳೆಗರೆಯಿತು.

ಇದಕ್ಕೂ ಮುನ್ನ ಸಿಎಂ ಯಡಿಯೂರಪ್ಪ ಮಾತನಾಡಿ, ವಿಶ್ವವಿಖ್ಯಾತ ದಸರಾ ಮಹೋತ್ಸವದಲ್ಲಿ ಅತೀ ಹೆಚ್ಚು ಪ್ರೇಕ್ಷಕರನ್ನು ಆಕರ್ಷಿಸುವ ಯುವ ದಸರಾ ಕಾರ್ಯಕ್ರಮ ಯುವ ಸಮೂಹದ ಉತ್ಸಾಹದ ಚಿಲುಮೆ ಹೆಚ್ಚಿಸುತ್ತದೆ. ಈ ಕಾರ್ಯಕ್ರಮವನ್ನು ದೇಶದ ಹೆಮ್ಮೆಯ ಕ್ರೀಡಾಪಟು, ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಪಿ.ವಿ.ಸಿಂಧೂ ಉದ್ಘಾಟಿಸಿದ್ದು, ಸ್ವಾಗತಾರ್ಹ. ಪ್ರತಿಭೆಯಿದ್ದವರಿಗೆ ಅವಕಾಶ ತಾನಾಗಿ ಹುಡುಕಿಕೊಂಡು ಬರುತ್ತದೆ ಎಂಬುದಕ್ಕೆ ಸಿಂಧೂ ಅವರೇ ಉದಾಹರಣೆ. ಮುಂಬರುವ ಒಲಂಪಿಕ್ಸ್‍ನಲ್ಲೂ ಚಿನ್ನದ ಪದಕ ಗಳಿಸುವ ಮೂಲಕ ದೇಶದ ಕೀರ್ತಿ ಹೆಚ್ಚಿಸಲಿ ಎಂದು ಶುಭ ಕೋರಿದರು. ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ, ಮೇಯರ್ ಪುಷ್ಪಲತಾ ಜಗನ್ನಾಥ್, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳಾ, ಉಪಾಧ್ಯಕ್ಷೆ ಗೌರಮ್ಮ, ಶಾಸಕರಾದ ಎಲ್.ನಾಗೇಂದ್ರ, ಕೆ.ಮಹದೇವ್, ಸಂಸದ ಪ್ರತಾಪ್ ಸಿಂಹ, ಕ್ರೀಡಾ ಇಲಾಖೆ ಕಾರ್ಯದರ್ಶಿ ಕಲ್ಪನಾ, ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ನಗರ ಪಾಲಿಕೆ ಆಯುಕ್ತ ಗುರುದತ್ ಹೆಗಡೆ, ನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಆಂಧ್ರದ ಐಪಿಎಸ್ ಅಧಿಕಾರಿ ದಾಮೋದರ್, ಯುವ ದಸರಾ ಉಪಸಮಿತಿ ಅಧ್ಯಕ್ಷ ಗೋಕುಲ್ ಗೋವರ್ಧನ್ ಮತ್ತಿತರರು ಉಪಸ್ಥಿತರಿದ್ದರು.

ರಾನು ಮಂಡಲ್ ಗೈರು: `ತೇರಿ… ಮೇರಿ…’ ಹಾಡಿನ ಮೂಲಕ ಎಲ್ಲರ ಮನಸ್ಸಿನಲ್ಲಿ ಮನೆ ಮಾಡಿರುವ ರಾನು ಮಂಡಲ್ ಇಂದಿನ ಯುವ ದಸರಾ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಿತ್ತು. ಹೊಟ್ಟೆ ಪಾಡಿಗೆ ರೈಲ್ವೆ ನಿಲ್ದಾಣದಲ್ಲಿ ಹಾಡುತ್ತಾ, ಸಾಮಾಜಿಕ ಜಾಲತಾಣದ ಮೂಲಕ ಪ್ರಸಿದ್ಧಿ ಪಡೆದು, ಇದೀಗ ಬಾಲಿವುಡ್ ಹಿನ್ನೆಲೆ ಗಾಯಕಿಯಾಗಿರುವ ರಾನು ಅವರನ್ನು ನೋಡಲು ಮೈಸೂರಿಗರು ಕಾತುರರಾಗಿದ್ದರು. ಆದರೆ ಅವರು ಅನಾರೋಗ್ಯದ ಕಾರಣ ಇಂದು ಗೈರಾಗಿದ್ದರು. ಭಾಗವಹಿಸಲು ಸಾಧ್ಯವಾಗದ್ದಕ್ಕೆ ವಿಡಿಯೋ ಬಿಡುಗಡೆ ಮಾಡಿ, ಬೇಸರ ವ್ಯಕ್ತಪಡಿಸಿ, ಜನತೆಯ ಕ್ಷಮೆ ಯಾಚಿಸಿರುವ ಅವರು, ಮುಂದಿನ ಭಾರಿ ಖಂಡಿತ ಬರುವುದಾಗಿ ತಿಳಿಸಿದ್ದಾರೆ. ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲೆಂದು ಮನೆಯಿಂದ ಕೊಲ್ಕತ್ತಾ ಏರ್ ಪೆÇೀರ್ಟ್ ಗೆ ಬರುವಾಗ ಅತಿಯಾದ ವಾಂತಿಯಾದ ಕಾರಣ ರಾನು ಮಂಡಲ್ ಅವರು ಪ್ರವಾಸವನ್ನು ರದ್ದು ಮಾಡಿದ್ದಾರೆಂದು ತಿಳಿದುಬಂದಿದೆ.

Translate »