ಬೆಂಗಳೂರು ಉಪ ಮೇಯರ್ ರಮಿಳಾ ಉಮಾಶಂಕರ್ ನಿಧನ
ಮೈಸೂರು

ಬೆಂಗಳೂರು ಉಪ ಮೇಯರ್ ರಮಿಳಾ ಉಮಾಶಂಕರ್ ನಿಧನ

October 6, 2018

ಬೆಂಗಳೂರು: ಬೃಹತ್ ಬೆಂಗ ಳೂರು ಮಹಾನಗರ ಪಾಲಿಕೆಯ ಉಪಮೇಯರ್ ಆಗಿ ಇತ್ತೀಚೆಗಷ್ಟೇ ಆಯ್ಕೆಯಾಗಿದ್ದ ರಮೀಳಾ ಉಮಾ ಶಂಕರ್(44 ವರ್ಷ) ತೀವ್ರ ಹೃದಯಾ ಘಾತದಿಂದ ಗುರುವಾರ ತಡರಾತ್ರಿ ನಿಧನ ಹೊಂದಿದ್ದಾರೆ. ಕಳೆದ ರಾತ್ರಿ 12.50ರಲ್ಲಿ ರಮೀಳಾ ಅವರಿಗೆ ತೀವ್ರ ಎದೆನೋವು ಕಾಣಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಅವರನ್ನು ಬೆಂಗಳೂರಿನ ಪಶ್ಚಿಮ ಕಾರ್ಡ್ ರಸ್ತೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿ ಸದೇ ಅವರು ಕೊನೆಯುಸಿರೆಳೆದಿದ್ದಾರೆ. 2015ರಲ್ಲಿ ನಡೆದಿದ್ದ ಬಿಬಿಎಂಪಿ ಚುನಾವಣೆಯಲ್ಲಿ ಗೋವಿಂದರಾಜ ನಗರದ ಕಾವೇರಿಪುರಂ ವಾರ್ಡ್‍ನಿಂದ (103) ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ರಮೀಳಾ ಅವರು ಜಯ ಸಾಧಿಸಿದ್ದರು. ಕಳೆದ ವಾರ ಸೆಪ್ಟೆಂಬರ್ 28ರಂದು ಬಿಬಿಎಂಪಿಯ ಉಪ ಮೇಯರ್ ಆಗಿ ಅವರು ಆಯ್ಕೆಯಾಗಿದ್ದರು.

ನಿನ್ನೆ ಬೆಳಿಗ್ಗೆ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ನಮ್ಮ ಮೆಟ್ರೋಗೆ ಭೇಟಿ ನೀಡಿದ್ದಾಗ, ಉಪ ಮುಖ್ಯಮಂತ್ರಿ ಪರಮೇಶ್ವರ್? ಅವರು ನಿನ್ನೆ ಬೆಳಗ್ಗೆಯೇ ಕೆ.ಆರ್.ಮಾರುಕಟ್ಟೆ ಸುತ್ತಮುತ್ತ ಪರಿಶೀಲನೆಯಲ್ಲಿ ತೊಡಗಿದ್ದಾಗ ರಮೀಳಾ, ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಭಾಗವಹಿಸಿದ್ದರು. ಹೀಗೆ ದಿನವಿಡೀ ಲವಲವಿಕೆಯಿಂದಲೇ ಇದ್ದ ರಮೀಳಾ ಅವರು ಶುಕ್ರವಾರ ತಡರಾತ್ರಿ ಕೊನೆಯುಸಿ ರೆಳೆದಿದ್ದಾರೆ. ರಮೀಳಾ ಅವರ ಹಠಾತ್ ನಿಧನದಿಂದ ಕುಟುಂಬ ತೀವ್ರ ದುಃಖತಪ್ತವಾಗಿದೆ. ಅವರ ಬಂಧುಗಳು, ಸ್ನೇಹಿತರು, ರಾಜಕೀಯ ಮುಖಂಡರಿಗೆ ಸಹ ಈ ಸುದ್ದಿ ತೀವ್ರ ಆಘಾತವನ್ನುಂಟುಮಾಡಿದೆ. ಅವರ ಅಂತ್ಯಕ್ರಿಯೆ ಇಂದು ಸಂಜೆ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ಸಂಜೆ ನೆರವೇರಿತು. ಡಿಪೆÇ್ಲಮಾ ಇನ್ ಎಲೆಕ್ಟ್ರಾನಿಕ್ಸ್ ವಿದ್ಯಾರ್ಹತೆ ಗಳಿಸಿದ್ದ ರಮೀಳಾ ಪತಿ ಹಾಗೂ ಇಬ್ಬರು ಮಕ್ಕಳಾದ ವರುಣ್ ಕುಮಾರ್ ಮತ್ತು ಭೂಮಿಕಾರನ್ನು ಅಗಲಿದ್ದಾರೆ.

Translate »