ಅ.10ರಿಂದ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಪುನರಾರಂಭ
ಮೈಸೂರು

ಅ.10ರಿಂದ ಬೆಂಗಳೂರು-ಮಂಗಳೂರು ನಡುವೆ ರೈಲು ಸಂಚಾರ ಪುನರಾರಂಭ

October 6, 2018

ಬೆಂಗಳೂರು: ಅತಿವೃಷ್ಟಿ, ಭೂಕುಸಿತದ ಪರಿಣಾಮ ರೈಲು ಸಂಚಾರ ಸ್ಥಗಿತಗೊಂಡಿದ್ದ ಸುಬ್ರಹ್ಮಣ್ಯ-ಸಕಲೇಶಪುರ ರೈಲು ಮಾರ್ಗದಲ್ಲಿ ಅ.10ರಿಂದ ರೈಲು ಸಂಚಾರ ಪುನರಾರಂಭವಾಗಲಿದೆ.

ಕಳೆದ ಆಗಸ್ಟ್‍ನ ಮೊದಲ ಹಾಗೂ ಎರಡನೇ ವಾರದಲ್ಲಿ ಸುರಿದ ಭಾರೀ ಮಹಾಮಳೆಯಿಂದ ಪಶ್ಚಿಮಘಟ್ಟದ ಬೆಟ್ಟ, ಗುಡ್ಡ, ಮಳೆಕಾಡು, ಕಂದಕಗಳ ನಡುವೆ ಹಾದು ಹೋಗಿರುವ ಸಕಲೇಶ ಪುರ- ಸುಬ್ರಹ್ಮಣ್ಯ ನಡುವಿನ ರೈಲು ಹಳಿಗಳ ಮೇಲೆ ಬೆಟ್ಟಗಳೇ ಕುಸಿದು ಬಿದ್ದವು. 2 ಲಕ್ಷ ಕ್ಯೂಬಿಕ್ ಮೀಟರ್‍ಗೂ ಹೆಚ್ಚು ಪ್ರಮಾಣದ ಮಣ್ಣು, ಭಾರೀ ಗಾತ್ರದ ಬಂಡೆಗಳು, ಮರ, ಗಿಡಗಳು ರೈಲು ಹಳಿಗಳನ್ನು ಮುಚ್ಚಿಕೊಂಡಿದ್ದವು. ಕಡಗರವಳ್ಳಿಯಿಂದ ಎಡಕುಮೇರಿ, ಶಿರಿವಾಗಿಲು ಹಾಗೂ ಸುಬ್ರಹ್ಮಣ್ಯದ ವರೆಗೆ 64 ಕಡೆಯಲ್ಲಿ ರೈಲು ಹಳಿಗಳ ಮೇಲೆ ಭೂ ಕುಸಿತ ಉಂಟಾಗಿತ್ತು. ಬೆಟ್ಟದಿಂದ ಉರುಳಿ ಬಿದ್ದ ಬಂಡೆಗಳಿಗೆ ರೈಲ್ವೆ ಹಳಿಗಳೇ ತುಂಡಾಗಿ ಕೊಚ್ಚಿ ಹೋಗಿದ್ದವು. ಈ ಹಿನ್ನಲೆಯಲ್ಲಿ ರೈಲ್ವೆ ಸಂಚಾರ ಸ್ಥಗಿತಗೊಳಿಸಲಾಗಿತ್ತು.

Translate »