ಮೈಸೂರು ಪ್ರಾಂತ್ಯದ ಜೀವ ವೈವಿಧ್ಯತೆ, ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ
ಮೈಸೂರು

ಮೈಸೂರು ಪ್ರಾಂತ್ಯದ ಜೀವ ವೈವಿಧ್ಯತೆ, ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನ

October 6, 2018

ಮೈಸೂರು: ರಾಷ್ಟ್ರೀಯ ವನ್ಯಜೀವಿ ಸಪ್ತಾಹದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೈಸೂರಿನ ಕಲಾಮಂದಿರದ ಸುಚಿತ್ರ ಆರ್ಟ್ ಗ್ಯಾಲರಿಯಲ್ಲಿ ಆಯೋ ಜಿಸಿದ್ದ ಮೈಸೂರು ಪ್ರಾಂತ್ಯದ ಜೀವವೈವಿಧ್ಯತೆ ಹಾಗೂ ವನ್ಯಜೀವಿಗಳ ಮೂರು ದಿನಗಳ ಛಾಯಾಚಿತ್ರ ಪ್ರದರ್ಶನಕ್ಕೆ ಶುಕ್ರವಾರ ಅರಣ್ಯ ಸಚಿವ ಆರ್.ಶಂಕರ್ ಚಾಲನೆ ನೀಡಿದರು.

ಅರಣ್ಯ ಇಲಾಖೆ ವತಿಯಿಂದ ನಡೆದ ಛಾಯಾಚಿತ್ರ ಪ್ರದರ್ಶನದಲ್ಲಿ ಹಲವು ವನ್ಯಜೀವಿ ಛಾಯಾಗ್ರಾಹಕರು ತಮ್ಮ ತಮ್ಮ ಕ್ಯಾಮರಾಗಳಲ್ಲಿ ಸೆರೆ ಹಿಡಿದ ಅಪರೂಪದ ವನ್ಯಜೀವಿಗಳ ಛಾಯಾಚಿತ್ರವನ್ನು ಸ್ಪರ್ಧೆಗೆ ಕಳುಹಿಸಿದ್ದಾರೆ. ಸುಮಾರು 128 ಕ್ಕೂ ಹೆಚ್ಚು ಛಾಯಾಚಿತ್ರಗಳಿದ್ದು, ಬಂಡೀಪುರ, ನಾಗರಹೊಳೆ ಅಭಯಾರಣ್ಯ ದಲ್ಲಿ ತೆಗೆದಿರುವ ಹುಲಿ, ಚಿರತೆ, ಆನೆ, ಕಾಡುನಾಯಿ ಸೇರಿದಂತೆ ಇನ್ನಿತರ ಪ್ರಾಣಿ ಗಳ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ. ಅಲ್ಲದೆ ವಿವಿಧ ಪಕ್ಷಿಗಳು ಹಾಗೂ ಜೀವ ವೈವಿಧ್ಯತೆ ಯಲ್ಲಿ ಕಾಣಸಿಗುವ ಜಿರಲೆ. ಇರುವೆ, ಕೆಂಜಿಗ ಸೇರಿದಂತೆ ಕೆಲವು ಕೀಟಗಳ ಚಿತ್ರಗಳು ಈ ಪ್ರದರ್ಶನದಲ್ಲಿವೆ.

ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಿದ ಬಳಿಕ ಸಚಿವ ಆರ್.ಶಂಕರ್ ಮಾತನಾಡಿ, ಸ್ಪರ್ಧೆಗೆ ಹಲವು ಪರಿಣಿತ ಛಾಯಾಗ್ರಾಹಕರು ಅತ್ಯುತ್ತಮವಾದ ಛಾಯಾಚಿತ್ರಗಳನ್ನು ನೀಡಿದ್ದಾರೆ. ಪ್ರದರ್ಶನದಲ್ಲಿ ಹಾಕಲಾಗಿರುವ ಚಿತ್ರಗಳನ್ನು ನೋಡಿದರೆ ರೋಮಾಂಚನವಾಗುತ್ತದೆ. ಈ ಸುಂದರ ಚಿತ್ರಗಳನ್ನು ಸೆರೆಹಿಡಿದ ಛಾಯಾಗ್ರಾಹಕರಿಗೆ ಎಷ್ಟು ರೋಮಾಂಚನದ ಅನುಭವವಾಗಿರಬಹುದು ಎಂಬು ದನ್ನು ಮನಗಾಣಬಹುದಾಗಿದೆ. ಮೂರು ದಿನಗಳ ಕಾಲ ನಡೆಯುವ ಈ ಪ್ರದರ್ಶ ನದ ಸದುಪಯೋಗಪಡಿಸಿಕೊಂಡು ವನ್ಯ ಜೀವಿಗಳ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ಅವರು ಸಲಹೆ ನೀಡಿದರು.

ವಿಜೇತರು: ಛಾಯಾಚಿತ್ರ ಸ್ಪರ್ದೆಯಲ್ಲಿ ಮೈಸೂರಿನ ಛಾಯಾಗ್ರಾಹಕರಾದ ವಿ. ಶೇಷಾದ್ರಿ ಅವರಿಗೆ ಪ್ರಥಮ, ಎಸ್.ಆರ್. ಮಧು ಸೂದನ್ ಅವರಿಗೆ ದ್ವಿತೀಯ ಮತ್ತು ಕೆ.ಎ. ಮಾಚಯ್ಯ ಅವರಿಗೆ ತೃತೀಯ ಬಹು ಮಾನ ನೀಡಿದರು. ಅಲ್ಲದೆ ಪ್ರಸಾದ್ ಮತ್ತು ಶಶಾಂಕ್ ರಿಗೆ ಸಮಾಧಾನಕರ ಬಹುಮಾನ ತಂದಿದೆ.

ಸ್ಪರ್ಧೆಯಲ್ಲಿ ಜಿಲ್ಲಾಧಿಕಾರಿಯೂ ಬಾಗಿ: ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ಛಾಯಾಗ್ರಹಣದಲ್ಲಿಯೂ ಆಸಕ್ತಿ ಹೊಂದಿದ್ದಾರೆ. ಅದರಲ್ಲಿಯೂ ಬಿಡುವಿನ ವೇಳೆ ವನ್ಯಜೀವಿ ಛಾಯಾಗ್ರಹಣದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆ ಯಲ್ಲಿ ಅರಣ್ಯ ಇಲಾಖೆ ಏರ್ಪಡಿಸಿದ್ದ ಛಾಯಾಚಿತ್ರ ಸ್ಪರ್ಧೆಗೆ ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್ ಅವರು ತೆಗೆದಿರುವ ಜೋಡಿ ಗೂಬೆಯ (ಸ್ಪಾಟೆಡ್ ಔಲ್) ಹಾಗೂ ಪರ್ಪಲ್ ಸನ್ ಬರ್ಡ್ ಚಿತ್ರ ನೀಡಿದ್ದರು. ಈ ಎರಡು ಛಾಯಾಚಿತ್ರ ವನ್ನು ಪ್ರದರ್ಶನದಲ್ಲಿಡಲಾಗಿದೆ. ಇದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಪ್ರದರ್ಶನ ಅ.7ರವರೆಗೆ ಇರುತ್ತದೆ. ಬೆಳಿಗ್ಗೆ 10.30ರಿಂದ ಸಂಜೆ 4.30ರವರೆಗೆ ಪ್ರದರ್ಶ ನವನ್ನು ವೀಕ್ಷಿಸಬಹುದಾಗಿದೆ.

ಪರಿಗಣಿಸಿದ ಆರೋಪ: ಅರಣ್ಯ ಇಲಾಖೆ ಆಯೋಜಿಸಿದ್ದ ಮೈಸೂರು ಪ್ರಾಂತ್ಯದ ಜೀವ ವೈವಿಧ್ಯತೆ ಹಾಗೂ ವನ್ಯಜೀವಿ ಶೀರ್ಷಿಕೆಯ ಛಾಯಾಚಿತ್ರ ಸ್ಪರ್ಧೆಗೆ ಹಲವು ಛಾಯಾಗ್ರಾಹಕರು ಅತ್ಯುತ್ತಮ ಛಾಯಾಚಿತ್ರಗಳನ್ನು ಕಳುಹಿಸಿ ದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ಅವುಗಳನ್ನು ಸ್ಪರ್ಧೆಗೆ ಪರಿಗಣಿಸಿಲ್ಲ ಎಂದು ಕೆಲವು ಛಾಯಾಗ್ರಾಹಕರು ಆರೋಪಿಸಿದ್ದಾರೆ. ಚಿತ್ರಗಳ ಪ್ರದರ್ಶಿಸಿ ದ್ದಾಗ ಶೀರ್ಷಿಕೆಗಳನ್ನು ತಪ್ಪಾಗಿ ಹಾಕಲಾ ಗಿತ್ತು. ನಂತರ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಾಗ ಎಲ್ಲಾ ಚಿತ್ರಗಳಿಗೂ ಶೀರ್ಷಿಕೆ ತೆಗೆದು ಹಾಕಿದ್ದಾರೆ ಎಂದು ಛಾಯಾಗ್ರಾಹಕರು ದೂರಿದ್ದಾರೆ.

ಕಾರ್ಯಕ್ರಮದಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ. ಜಯರಾಮ್, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜಗತ್ ರಾಮ್, ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯ ದರ್ಶಿ ಬಿ.ಪಿ. ರವಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವೆಂಕಟೇಸನ್, ಉಪ ಅರಣ್ಯ ಸಂರಕ್ಷಣಾಧಿಕಾರಿಗಳಾದ ಸಿದ್ರಾಮಪ್ಪ ಚಳ್ಕಾಪುರೆ, ಡಾ.ಹನುಮಂತಪ್ಪ, ಆರ್‍ಎಫ್‍ಒ ಅನನ್ಯಕುಮಾರ್ ಇದ್ದರು.

Translate »