ಮೈಸೂರಲ್ಲಿ ಇಂದು, ನಾಳೆ `ಡಿಜಿ ಫೋಟೋ ಎಕ್ಸ್‍ಪೋ’
ಮೈಸೂರು

ಮೈಸೂರಲ್ಲಿ ಇಂದು, ನಾಳೆ `ಡಿಜಿ ಫೋಟೋ ಎಕ್ಸ್‍ಪೋ’

September 22, 2018

ಮೈಸೂರು:  ಮೈಸೂರು ಡಿಸ್ಟ್ರಿಕ್ಟ್ ಫೋಟೋಗ್ರಾಫರ್ಸ್ ಅಂಡ್ ವಿಡಿಯೋಗ್ರಾಫರ್ಸ್ ಅಸೋಸಿಯೇಷನ್ ಹಾಗೂ ಬೆಂಗಳೂರಿನ ಕರ್ನಾಟಕ ವಿಡಿ ಯೋಗ್ರಾಫರ್ಸ್ ಮತ್ತು ಫೋಟೋಗ್ರಾಫರ್ಸ್ ಅಸೋಸಿಯೇಷನ್, ಬೈ ಸೇಲ್ ಇಂಟ್ರಾ ಕ್ಷನ್ ಕಂಪನಿ ಜಂಟಿಯಾಗಿ ಮೈಸೂರಿನ ಹೆಬ್ಬಾ ಳದ ಶುಭೋದಿನಿ ಕನ್ವೆನ್ಷನ್ ಸೆಂಟರ್‍ನಲ್ಲಿ ಸೆ.22 ಮತ್ತು 23ರಂದು ಅಂತಾರಾಷ್ಟ್ರೀಯ ಮಟ್ಟದ ಡಿಜಿ ಫೋಟೋ ಎಕ್ಸ್‍ಪೋ ಮೇಳ ಹಾಗೂ ವಸ್ತು ಪ್ರದರ್ಶನ ಮತ್ತು ಮಾರಾಟ ಆಯೋಜಿಸಲಾಗಿದೆ ಎಂದು ಅಸೋಸಿ ಯೇಷನ್ ಅಧ್ಯಕ್ಷ ಎಂ.ಎಸ್.ಮಂಜುನಾಥ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.22ರಂದು ಬೆಳಿಗ್ಗೆ 10 ಗಂಟೆಗೆ ಶಾಸಕ ಎಲ್.ನಾಗೇಂದ್ರ ಮೇಳಕ್ಕೆ ಚಾಲನೆ ನೀಡ ಲಿದ್ದು, ಮಾಜಿ ಶಾಸಕ ಎಂ.ಕೆ.ಸೋಮ ಶೇಖರ್, ಪಾಲಿಕೆ ಸದಸ್ಯೆ ಪ್ರಮೀಳಾ ಎಂ. ಭರತ್, ಸಂಸ್ಥೆಯ ಕಾನೂನು ಸಲಹೆಗಾರ ಎನ್.ಗೋವಿಂದ, ಬೆಂಗಳೂರಿನ ಕೆವಿ ಪಿಎ ಅಧ್ಯಕ್ಷ ಬೆಂಜಮಿನ್ ಭಾಸ್ಕರ್, ಬೈ ಅಂಡ್ ಸೇಲ್ ಇಂಡಿಯಾ ನಿರ್ದೇಶಕ ಸೀತಾರಾಮ ರಾವ್ ಭಾಗವಹಿಸುವರು ಎಂದರು.

ಬೆಳಿಗ್ಗೆ 10ರಿಂದ ಸಂಜೆ 6ರವರೆಗೆ ನಡೆ ಯುವ ಮೇಳದಲ್ಲಿ ಸೋನಿ, ಕೆನಾನ್, ನಿಕಾನ್ ಇನ್ನಿತರ ಹಲವು ಪ್ರತಿಷ್ಠಿತ 80 ಕಂಪನಿಗಳು ಭಾಗಿಯಾಗಲಿವೆ. ವಿವಿಧ ರೀತಿಯ ನವೀನ ರೀತಿಯಲ್ಲಿ ತಯಾರಾಗಿ ರುವ ಫೋಟೋ ಮತ್ತು ವಿಡಿಯೋ ಕ್ಯಾಮರಾಗಳು, ಅದಕ್ಕೆ ಸಂಬಂಧಪಟ್ಟ ಪರಿ ಕರಗಳು, ಎಲ್‍ಇಡಿ ಪರದೆಗಳು, ಮಿಕ್ಸಿಂಗ್ ಯೂನಿಟ್‍ಗಳು, ಹೆಚ್‍ಡಿ ಕ್ರೇನ್, ಡ್ರೋಣ್ ಕ್ಯಾಮರಾಗಳನ್ನು ಪ್ರದರ್ಶಿಸಲಾಗುವುದು. ನೆರೆಯ ಜಿಲ್ಲೆಗಳ ವೃತ್ತಿ ಬಾಂಧವರಿಗೆ ನುರಿತವರಿಂದ ಕಾರ್ಯಾಗಾರ ಹಾಗೂ ಕ್ಯಾಮರಾ ಉಚಿತ ತಪಾಸಣೆ, ಸರ್ವಿಸಿಂಗ್ ಸಹ ಇರುತ್ತದೆ ಎಂದರು. ಸುದ್ದಿ ಗೋಷ್ಠಿ ಯಲ್ಲಿ ಜಿ.ವಿ.ಎಸ್.ರಾವ್, ಬೆಂಜ ಮಿನ್ ಭಾಸ್ಕರ್, ಜಿ.ಟಿ.ರಮೇಶ್‍ಕುಮಾರ್, ಚಂದ್ರ ಶೇಖರ್, ಎಸ್.ಮಂಜುನಾಥ್ ಇದ್ದರು.

Translate »