ಕೆ.ಆರ್.ಕ್ಷೇತ್ರದಲ್ಲಿ ಆರಂಭದಲ್ಲಿ ಉತ್ಸಾಹ ಬಿಸಿಲೇರುತ್ತಿದ್ದಂತೆ ನಿರುತ್ಸಾಹ
ಮೈಸೂರು

ಕೆ.ಆರ್.ಕ್ಷೇತ್ರದಲ್ಲಿ ಆರಂಭದಲ್ಲಿ ಉತ್ಸಾಹ ಬಿಸಿಲೇರುತ್ತಿದ್ದಂತೆ ನಿರುತ್ಸಾಹ

April 19, 2019

ಮೈಸೂರು: ಮೈಸೂರಿನ ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಬೆಳಿಗ್ಗೆ ಚುರುಕಾಗಿ ಆರಂಭವಾದ ಮತ ದಾನ ಮಧ್ಯಾಹ್ನದ ವೇಳೆಗೆ ಇಳಿಮುಖ ವಾಯಿತು. ಆದರೆ ಮತ್ತೆ ಸಂಜೆ ಬಿರುಸಾಗಿ ಸಾಗಿತು. ಕ್ಷೇತ್ರದ ಎಲ್ಲಾ 270 ಮತಗಟ್ಟೆಗಳಲ್ಲಿಯೂ ಯಾವುದೇ ಗೊಂದಲವಿಲ್ಲದೆ ಶಾಂತಿಯುತ ಶೇ.60.36 ರಷ್ಟು ಮತದಾನ ನಡೆಯಿತು.

ಕೆ.ಆರ್.ಕ್ಷೇತ್ರದಲ್ಲಿ 1,20,146 ಪುರು ಷರು, 1,23,568 ಮಹಿಳೆಯರು ಹಾಗೂ 22 ತೃತೀಯ ಲಿಂಗಿಗಳು ಸೇರಿ ಒಟ್ಟು 2,43, 736 ಮತದಾರರಿದ್ದು, ಇಂದು ಬೆಳಿಗ್ಗೆ ಎಲ್ಲ ಮತಗಟ್ಟೆಗಳಲ್ಲಿಯೂ ನಿಗದಿತ ಸಮಯದಲ್ಲಿ ಮತದಾನ ಆರಂಭವಾಯಿತು. ಆರಂಭದಲ್ಲಿ ಮತ ಚಲಾಯಿಸಲು ಹಿರಿಯರಾದಿಯಾಗಿ ಹೊಸ ಮತದಾರರು ಉತ್ಸಾಹದಿಂದ ಮತ ಚಲಾಯಿಸಲು ಮುಂದಾದರು. ಹಾಗಾಗಿ ಬೆಳಿಗ್ಗೆ 7ರಿಂದ 10.30ರವರೆಗೂ ಕೆ.ಆರ್. ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಮತ ದಾನ ಬಿರುಸುಗೊಂಡಿತು. ಕೆಲವೊಂದು ಮತಗಟ್ಟೆಯಲ್ಲಿ ಮತದಾರರು ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡು ಬಂದಿತು. ಅಗ್ರ ಹಾರದ ಅಕ್ಕನ ಬಳಗ ಶಾಲೆಯ ಸಖಿ ಮತಗಟ್ಟೆ, ಸೇಂಟ್ ಮೇರಿಸ್ ಶಾಲೆ, ಜೆ.ಪಿ.ನಗರದ ಜೆಎಸ್‍ಎಸ್ ಪಬ್ಲಿಕ್ ಶಾಲೆ, ಶ್ರೀರಾಮ್‍ಪುರ ಶಾಲೆ, ವಿವೇಕಾನಂದನಗರ ಜ್ಯೋತಿ ಶಾಲೆ, ಲಕ್ಷ್ಮೀಪುರಂ ಗೋಪಾಲ ಸ್ವಾಮಿ ಶಿಶುವಿಹಾರ ಶಾಲೆ, ಚಿನ್ನಗಿರಿ ಕೊಪ್ಪಲು ಶಾಲೆ ಹಾಗೂ ಇನ್ನಿತರ ಮತ ಗಟ್ಟೆಯಲ್ಲಿ ಉದ್ದದ್ದ ಸಾಲುಗಳಲ್ಲಿ ಮತದಾ ರರು ನಿಂತಿದ್ದ ದೃಶ್ಯ ಕಂಡು ಬಂದಿತು.

ಬಿಸಿಲಿನ ತಾಪ ಹೆಚ್ಚಾಗುತ್ತಿದ್ದಂತೆ ಮತ ಗಟ್ಟೆಗೆ ಬರುವವರ ಸಂಖ್ಯೆ ಇಳಿಮುಖ ವಾಯಿತು. ಮಧ್ಯಾಹ್ನ 3 ಗಂಟೆವರೆಗೂ ಮತಗಟ್ಟೆಗಳ ಮುಂದೆ ಬೆರಳೆಣಿಕೆಯಷ್ಟು ಮಂದಿ ಕಂಡು ಬಂದರು. ಮಧ್ಯಾಹ್ನ 3 ಗಂಟೆಯಲ್ಲಿ ಶೇ.29.65ರಷ್ಟು ಮತದಾನವಾಗಿತ್ತು. ನಂತರ ಬಿಸಿಲ ತಾಪ ಕಡಿಮೆಯಾಗುತ್ತಿದ್ದಂತೆ ಕ್ಷೇತ್ರದ ಎಲ್ಲಾ ಮತಗಟ್ಟೆಗಳಲ್ಲಿಯೂ ಮತದಾನ ಚುರುಕು ಗೊಂಡಿತು. ಮತಗಟ್ಟೆಗೆ ತಂಡೋಪತಂಡ ವಾಗಿ ಆಗಮಿಸಿದ ಮತದಾರರು ಸಾಲು ಗಟ್ಟಿ ನಿಂತು ಮತ ಚಲಾಯಿಸಲು ಮುಗಿ ಬಿದ್ದರು. ಇದರಿಂದ ಒಂದೇ ಗಂಟೆಯಲ್ಲಿ ಮತದಾನ ಶೇ.20ರಷ್ಟು ಹೆಚ್ಚಾಯಿತು. ಸಂಜೆ 4 ಗಂಟೆಗೆ ಕ್ಷೇತ್ರದ ಒಟ್ಟು ಮತ ದಾನ ಶೇ.49.93ರಷ್ಟಾಯಿತು. ನಂತರ ಕೇವಲ ಶೇ.4 ಮತದಾನವಾಯಿತು. 5 ಗಂಟೆಯಲ್ಲಿ ಕೆ.ಆರ್.ಕ್ಷೇತ್ರದ ಒಟ್ಟು ಮತ ದಾನ ಶೇ.53.36ರಷ್ಟಕ್ಕೇರಿತು. ಬಳಿಕ ಮೋಡ ಮುಸುಕಿದ ವಾತಾವರಣದ ಹಿನ್ನೆಲೆಯಲ್ಲಿ ಮತದಾನ ಮಾಡಲು ಬರು ವವರ ಸಂಖ್ಯೆ ಇಳಿಮುಖವಾಯಿತಾದರೂ ಕೆಲಸ ಕಾರ್ಯ ಮುಗಿಸಿದವರು ಸಂಜೆ 5.15ರ ನಂತರ ಮತ ಚಲಾಯಿಸಲು ಮತಗಟ್ಟೆಯತ್ತ ಧಾವಿಸಿದ್ದರಿಂದ ಮತ ದಾನದ ಪ್ರಮಾಣದಲ್ಲಿ ತುಸು ಏರಿಕೆಯಾ ಯಿತು. ಅಂತಿಮವಾಗಿ ಕ್ಷೇತ್ರದ ಒಟ್ಟು ಮತ ದಾನ ಶೇ.60.36ರಷ್ಟು ದಾಖಲಾಯಿತು.

ಹೆಚ್ಚಿದ ಉತ್ಸಾಹ: ಹಿರಿಯ ನಾಗರಿಕರು, ಐಟಿ-ಬಿಟಿ ಉದ್ಯೋಗಿಗಳು, ವಿವಿಧ ಕ್ಷೇತ್ರ ಗಳಲ್ಲಿ ತೊಡಗಿಸಿಕೊಂಡಿರುವವರು ಹಾಗೂ ಬೇರೆಡೆ ಕೆಲಸದಲ್ಲಿ ಕೆಲಸ ಮಾಡುತ್ತಿರು ವವರು ಇಂದು ಮತಗಟ್ಟೆಗೆ ಬಂದು ಉತ್ಸಾಹದಿಂದ ಮತದಾನ ಮಾಡಿದರು.

ಹೊಸಬರ ಉತ್ಸಾಹ: ಕೆ.ಆರ್.ಕ್ಷೇತ್ರದಲ್ಲಿ ಈ ಬಾರಿ 3851 ಹೊಸ ಮತದಾರರು ಮತ ಚಲಾಯಿಸುವ ಹಕ್ಕು ಪಡೆದಿದ್ದರು. ವಿವಿಧ ಮತಗಟ್ಟೆಯಲ್ಲಿ ಬಹುತೇಕ ಹೊಸ ಮತದಾರರು ಇದೇ ಮೊದಲ ಬಾರಿಗೆ ಓಟ್ ಮಾಡಿ ಸಂಭ್ರಮಿಸಿದರು. ಮತದಾ ರರ ಗುರುತಿನ ಚೀಟಿ ಹಿಡಿದು ಬಂದು, ತಮಗಿಷ್ಟ ಬಂದ ಅಭ್ಯರ್ಥಿಗೆ ಮತ ಹಾಕಿ ದರು. ಮೊಟ್ಟ ಮೊದಲ ಬಾರಿಗೆ ಬೆರಳಿಗೆ ಶಾಯಿ ಹಾಕಿಸಿಕೊಂಡು, ಮತ ಚಲಾ ಯಿಸಿ ಸಂತೋಷಪಟ್ಟರು.

ಕೆಂಪು ಬಾವುಟ: ಮತಗಟ್ಟೆಯಿಂದ 100 ಮೀಟರ್ ಅಂತರದಲ್ಲಿ ಚುನಾವಣಾ ಪ್ರಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಮತಗಟ್ಟೆ ಸುತ್ತಲೂ ಕೆಂಪು ಬಾವುಟ ಪ್ರದ ರ್ಶಿಸಿ, ನಿರ್ದಿಷ್ಟ ವ್ಯಾಪ್ತಿಯಲ್ಲಿ ಮತ ಯಾಚನೆ ಮಾಡದಂತೆ ಎಚ್ಚರ ವಹಿಸಲಾಗಿತ್ತು.

ವಾಹನದ ವ್ಯವಸ್ಥೆ: ವೃದ್ಧರು ಹಾಗೂ ಅಶಕ್ತ ರನ್ನು ಮತಗಟ್ಟೆಗೆ ಕರೆತರಲು ಚುನಾವಣಾ ಆಯೋಗದಿಂದ ವಾಹನದ ವ್ಯವಸ್ಥೆ ಮಾಡ ಲಾಗಿತ್ತು. ಚುನಾವಣಾ ಜರೂರು ಫಲಕ ಅಳವಡಿಸಿದ್ದ ಕೆಲವು ಟ್ಯಾಕ್ಸಿಗಳನ್ನು ಕಾಯ್ದಿರಿಸ ಲಾಗಿತ್ತು. ಕಂಟ್ರೋಲ್ ರೂಮ್‍ಗೆ ಕರೆ ಮಾಡಿ ಮನವಿ ಮಾಡಿದವರಿಗೆ ಈ ವಾಹನದ ಸೌಲಭ್ಯ ಕಲ್ಪಿಸಲಾಗಿತ್ತು.

Translate »